Select Your Language

Notifications

webdunia
webdunia
webdunia
webdunia

ಎರಡೇ ದಿನದಲ್ಲಿ ಗುಡ್ ನ್ಯೂಸ್ ಕೊಡ್ತೀನಿ ಎಂದ ನಟಿ ಹರಿಪ್ರಿಯಾ

Haripriya

Krishnaveni K

ಬೆಂಗಳೂರು , ಮಂಗಳವಾರ, 9 ಏಪ್ರಿಲ್ 2024 (09:59 IST)
ಬೆಂಗಳೂರು: ನಟಿ ಹರಿಪ್ರಿಯಾ ಮದುವೆಯಾದ ಬಳಿಕ ಸಿನಿಮಾದಿಂದ ಹೆಚ್ಚು ಕಡಿಮೆ ಮಾಯವಾಗಿದ್ದಾರೆ. ಅವರ ಹೊಸ ಸಿನಿಮಾ ಸುದ್ದಿ ಕೆಲವು ದಿನಗಳಿಂದ ಕೇಳಿಯೇ ಇಲ್ಲ.

ಆದರೆ ಇತ್ತೀಚೆಗೆ ಹರಿಪ್ರಿಯಾ ಧಾರವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿತ್ತು.ಸ್ಟಾರ್ ಸುವರ್ಣಾ ವಾಹಿನಿಯ ಧಾರವಾಹಿಯೊಂದರ ಪ್ರೋಮೋದಲ್ಲಿ ಅಡ್ವೋಕೇಟ್ ಪಾತ್ರವೊಂದನ್ನು ತೋರಿಸಲಾಗಿದೆ. ಈ ಪಾತ್ರವನ್ನು ಹರಿಪ್ರಿಯಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಬಹಳ ದಿನಗಳ ನಂತರ ಬೆಲ್ ಬಾಟಂ ಸುಂದರಿ ಕಡೆಯಿಂದ ಬಂದ ಸುದ್ದಿಗೆ ಎಲ್ಲರೂ ಖುಷ್ ಆಗಿದ್ದರು. ಆದರೆ ಇದೀಗ ಸ್ವತಃ ಹರಿಪ್ರಿಯಾ ತಮ್ಮ ಧಾರವಾಹಿ ಎಂಟ್ರಿ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ಕೊಟ್ಟಿರುವ ಹರಿಪ್ರಿಯಾ ನಾನು ಯಾವುದೇ ಧಾರವಾಹಿಯನ್ನು ಖಾಯಂ ಆಗಿ ಒಪ್ಪಿಕೊಂಡಿಲ್ಲ ಎಂದಿದ್ದಾರೆ.

‘ನಮಸ್ಕಾರ ಎಲ್ಲರೂ ಹೇಗಿದ್ದೀರಿ? ನಾನು ಯಾವುದೇ ಧಾರವಾಹಿ ಒಪ್ಪಿಲ್ಲ. ನಾನು ನಿರ್ವಹಿಸಿರುವುದು ಒಂದೆರಡು ದಿನಗಳ ಅತಿಥಿ ಪಾತ್ರವಷ್ಟೇ. ಒಂದೊಳ್ಳೆ ಸಿನಿಮಾ ಸುದ್ದಿಯೊಂದಿಗೆ ನಿಮ್ಮ ಮುಂದೆ ಶೀಘ್ರದಲ್ಲೇ ಬರಲಿದ್ದೇನೆ. ಎಂದಿನಂತೆ ನಿಮ್ಮ ಪ್ರೀತಿ, ಹಾರೈಕೆಗಳಿರಲಿ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಗಾಗಿ ಮತ್ತೆ ಪ್ರಚಾರ ಕಣಕ್ಕೆ ಧುಮುಕಿದ ಶಿವರಾಜ್ ಕುಮಾರ್