ಬೆಂಗಳೂರು: ಉಗ್ರಂ, ಬೆಲ್‌ಬಾಟಂ, ಸೂಜಿದಾರ ಸಿನಿಮಾ ಮೂಲಕ ಜನ ಮನ್ನಣೆ ಗಳಿಸಿರುವ ಕನ್ನಡದ ಬೇಡಿಕೆಯ ನಟಿ ಹರಿಪ್ರಿಯಾ ಅವರು ಇದೀಗ ಕಿರುತೆರೆಯಲ್ಲಿ ಕಮಲ್ ಮಾಡಲು ಬರುತ್ತಿದ್ದಾರೆ.
ಹೌದು ಕನ್ನಡದ ಜನಪ್ರಿಯ ವಾಹಿನಿ ಸ್ಟಾರ್ ಸುವರ್ಣದಲ್ಲಿ ಈ ಬಗ್ಗೆ ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದ್ದು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು ಧಾರವಾಹಿಯಲ್ಲಿ ನಟಿಸುತ್ತಿದ್ದಾರಾ ಅಥವಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಂಬ ಪ್ರಶ್ನೆ ಉದ್ಭವಿಸಿದೆ.
ಸದ್ಯ ಬಿಡುಗಡೆ ಮಾಡಲಾಗಿರುವ ಪ್ರೋಮೋದಲ್ಲಿ ನ್ಯಾಯದ ಪರ ಹೋರಾಡೋಕೆ ಅಡ್ವೊಕೇಟ್ ಅಹನಾ ಅಗ್ನಿಹೋತ್ರ ಆಗಿ ಬರ್ತಿದ್ದಾರೆ. ಸ್ಯಾಂಡಲ್ ವುಡ್ ಬ್ಯೂಟಿ ಕ್ವೀನ್ ಶೀಘ್ರದಲ್ಲಿ ಎಂದು ಅಡಿಬರಹವನ್ನು ನೀಡಲಾಗಿದೆ. ಈ ಪ್ರೋಮೋದಲ್ಲಿ ನಟಿ ಹರಿಪ್ರಿಯಾ ವಕೀಲೆಯಾಗಿ ಕಾಣಿಸಿಕೊಂಡಿದ್ದು, ಇದು ಸಿನಿಮಾನೋ ಅಥವಾ ಧಾರಾವಾಹಿನೋ ಎಂಬುದರ ಬಗ್ಗೆ ಸ್ಪಷ್ಟಣೆಯಿಲ್ಲ.
ಇನ್ನೂ ಪ್ರೋಮೋ ನೋಡಿದವರು ನೀವು ಕಿರುತೆರೆಗೆ ಬರಬೇಡಿ, ನಿಮಗೆ ಸಿನಿಮಾನೇ ಸೂಕ್ತ ವೇದಿಕೆ ಎಂದು ಹೇಳಿದ್ದಾರೆ.