Select Your Language

Notifications

webdunia
webdunia
webdunia
webdunia

ಧೈರ್ಯಶಾಲಿ ನಾಯಕರು ಇಷ್ಟ ಎಂದು ರಾಹುಲ್ ಗಾಂಧಿಯನ್ನು ಹಾಡಿಹೊಗಳಿದ ಸೈಫ್ ಅಲಿ ಖಾನ್

Saif Ali Khan

Krishnaveni K

ಮುಂಬೈ , ಶನಿವಾರ, 28 ಸೆಪ್ಟಂಬರ್ 2024 (10:26 IST)
Photo Credit: Instagram
ಮುಂಬೈ: ನನಗೆ ಧೈರ್ಯಶಾಲೀ ನಾಯಕರು ಇಷ್ಟ ಎಂದು ಬಾಲಿವುಡ್ ತಾರೆ ಸೈಫ್ ಅಲಿ ಖಾನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಹಾಡಿ ಹೊಗಳಿದ್ದಾರೆ. ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು.

ಈ ವೇಳೆ ರಾಹುಲ್ ಗಾಂಧಿಯನ್ನು ಸತತ ಪರಿಶ್ರಮದಿಂದ ಜನರಲ್ಲಿ ತಮ್ಮ ಬಗ್ಗೆ ಅಭಿಪ್ರಾಯ ಬದಲಿಸಿಕೊಂಡು ಶ್ರಮ ಜೀವಿ ಮತ್ತು ಧೈರ್ಯಶಾಲೀ ನಾಯಕ ಎಂದು ಹಾಡಿಹೊಗಳಿದ್ದಾರೆ. ಇತ್ತೀಚೆಗಿನ ಲೋಕಸಭೆ ಚುನಾವಣೆ ಗೆಲುವಿನ ಬಳಿಕ ರಾಹುಲ್ ಗಾಂಧಿ ಬಗ್ಗೆ ಜನಪ್ರಿಯತೆ ಹೆಚ್ಚಾಗಿರುವುದನ್ನು ಉಲ್ಲೇಖಿಸಿ ಅವರು ಈ ಮಾತು ಹೇಳಿದ್ದಾರೆ.

ರಾಹುಲ್ ಗಾಂಧಿ ಸತತ ಪರಿಶ್ರಮದಿಂದ ತಮ್ಮ ಬಗ್ಗೆ ಜನರಲ್ಲಿರುವ ಅಭಿಪ್ರಾಯ ಬದಲಿಸಿಕೊಂಡಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ರಾಹುಲ್ ಗಾಂಧಿ ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಸೈಫ್ ಅಲಿ ಖಾನ್, ಕಾಂಗ್ರೆಸ್ ನಾಯಕನ ಗುಣಗಾನ ಮಾಡಿದ್ದಾರೆ.

ನನಗೆ ಧೈರ್ಯಶಾಲಿ ಮತ್ತು ಪ್ರಾಮಾಣಿಕ ರಾಜಕಾರಣಿಗಳೆಂಧರೆ ಇಷ್ಟ. ಪ್ರಧಾನಿ ಮೋದಿ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್ ಎಲ್ಲರೂ ಧೈರ್ಯಶಾಲೀ ರಾಜಕಾರಣಿಗಳು. ಅದರಲ್ಲೂ ರಾಹುಲ್ ಗಾಂಧಿ ಇತ್ತೀಚೆಗೆ ತಮ್ಮ ಪರಿಶ್ರಮದಿಂದ ಜನರಲ್ಲಿರುವ ಅಭಿಪ್ರಾಯವನ್ನೇ ಬದಲಿಸಿಕೊಂಡಿದ್ದಾರೆ. ಹಾಗಂತ ವೈಯಕ್ತಿಕವಾಗಿ ನಾನು ರಾಜಕೀಯಕ್ಕೆ ಬರುವ ಯೋಜನೆ ಹೊಂದಿಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳ ವಿವರಕ್ಕಾಗಿ ಇಲ್ಲಿ ನೋಡಬೇಕು