Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ ಸೀಸನ್ 11 ರ ಸ್ಪರ್ಧಿಗಳ ವಿವರಕ್ಕಾಗಿ ಇಲ್ಲಿ ನೋಡಬೇಕು

Kiccha Sudeep

Krishnaveni K

ಬೆಂಗಳೂರು , ಶನಿವಾರ, 28 ಸೆಪ್ಟಂಬರ್ 2024 (09:05 IST)
ಬೆಂಗಳೂರು: ನಾಳೆಯಿಂದ ಬಿಗ್ ಬಾಸ್ ಕನ್ನಡ ಸೀಸನ್ 11 ಶೋ ಆರಂಭವಾಗಲಿದ್ದು, ಇಂದು ಈ ಬಾರಿ ಮನೆಯೊಳಗೆ ಪ್ರವೇಶಿಸಲಿರುವ ಕೆಲವು ಸ್ಪರ್ಧಿಗಳ ಹೆಸರು ಬಹಿರಂಗವಾಗಲಿದೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 11. ಈಗಾಗಲೇ 10 ಸೀಸನ್ ಗಳಲ್ಲಿ ಯಶಸ್ವಿಯಾಗಿ ಮುಗಿಸಿ ಇದೀಗ 11 ನೇ ಸೀಸನ್ ಗೆ ಕಾಲಿಡುತ್ತಿದೆ. ಈ ಬಾರಿ ಕೊಂಚ ವಿಭಿನ್ನವಾಗಿ ಸ್ಪರ್ಧಿಗಳ ಹೆಸರು ಬಹಿರಂಗಗೊಳಿಸಲಾಗುತ್ತಿದೆ.

ಪ್ರತೀ ಬಾರಿಯೂ ಬಿಗ್ ಬಾಸ್ ಓಪನಿಂಗ್ ಕಾರ್ಯಕ್ರಮದಲ್ಲೇ ಸ್ಪರ್ಧಿಗಳ ಹೆಸರು ಬಹಿರಂಗವಾಗುತ್ತಿತ್ತು. ಆದರೆ ಈ ಬಾರಿ ಇಂದು ರಾತ್ರಿ ನಡೆಯಲಿರುವ ರಾಜ ರಾಣಿ ಗ್ರ್ಯಾಂಡ್ ಫಿನಾಲೆಯಲ್ಲಿ ಕೆಲವು ಸ್ಪರ್ಧಿಗಳ ಹೆಸರು ಬಹಿರಂಗವಾಗಲಿದೆ. ಹೀಗಾಗಿ ಇಂದಿನ ರಾಜಾ ರಾಣಿ ಶೋ ಫೈನಲ್ ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ.

ಕೆಲವು ಸ್ಪರ್ಧಿಗಳ ಫೋಟೋ ಬ್ಲರ್ ಮಾಡಿ ಕಲರ್ಸ್ ವಾಹಿನಿ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿತ್ತು. ಇದನ್ನು ನೋಡಿ ವೀಕ್ಷಕರಿಗೆ ಈ ಬಾರಿ ಯಾರೆಲ್ಲಾ ಇರಬಹುದು ಎಂದು ಒಂದು ಅಂದಾಜು ಸಿಕ್ಕಿದೆ. ಇಂದು ಕೆಲವು ಹೆಸರುಗಳು ಅಧಿಕೃತವಾಗಿ ಘೋಷಣೆಯಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಿಲನಾ- ಕೃಷ್ಣ ದಂಪತಿಯ ಮನೆಗೆ ಪುಟ್ಟಗೌರಿ ಎಂಟ್ರಿ: ಮುಖ ರಿವಿಲ್‌ ಮಾಡಿದ ತಾರಾ ಜೋಡಿ