Select Your Language

Notifications

webdunia
webdunia
webdunia
webdunia

Big Boss Kannada11: ಈ ಸೀಸನ್ ನಲ್ಲಿ ಹೊಸ ದಾಖಲೆ ಬರೆಯಲಿರುವ ಶೋ

Kiccha Sudeep

Krishnaveni K

ಬೆಂಗಳೂರು , ಮಂಗಳವಾರ, 24 ಸೆಪ್ಟಂಬರ್ 2024 (12:09 IST)
Photo Credit: X
ಬೆಂಗಳೂರು: ಇದೇ ವಾರಂತ್ಯದ ಬಿಗ್ ಬಾಸ್ ಕನ್ನಡ ಸೀಸನ್ 11 ಆರಂಭವಾಗಲಿದ್ದು, ಈ ಸೀಸನ್ ಹೊಸದೊಂದು ಇತಿಹಾಸ ಸೃಷ್ಟಿಸಲಿದೆ. ಅದರ ಬಗ್ಗೆ ಮಾಹಿತಿ ನೀಡಲು ಕಲರ್ಸ್ ಟೀಂ ಜೊತೆ ಕಿಚ್ಚ ಸುದೀಪ್ ಕೂಡಾ ಸುದ್ದಿಗೋಷ್ಠಿಗೆ ಬಂದಿದ್ದರು.

ಈ ಬಾರಿಯೂ ಕಿಚ್ಚ ಸುದೀಪ್ ನಿರೂಪಣೆಯಲ್ಲೇ ಬಿಗ್ ಬಾಸ್ ನಡೆಯಲಿದೆ. ಆದರೆ ಕಳೆದ ಬಾರಿಗಿಂತ ಭಿನ್ನವಾಗಿ ಶೋ ನಡೆಸಿಕೊಡುವ ಬಗ್ಗೆ ಕಿಚ್ಚ ಸುದೀಪ್ ಮತ್ತು ಕಲರ್ಸ್ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ. ಈ ಬಾರಿ ಬಿಗ್ ಬಾಸ್ ಹೊಸದೊಂದು ಪ್ರಥಮಕ್ಕೆ ಸಾಕ್ಷಿಯಾಗುತ್ತಿದೆ.

ಇದುವರೆಗೆ ಬಿಗ್ ಬಾಸ್ ಶೋ ಉದ್ಘಾಟನಾ ಕಾರ್ಯಕ್ರಮದಲ್ಲೇ ಸ್ಪರ್ಧಿಗಳ ಹೆಸರು ಬಹಿರಂಗವಾಗುತ್ತಿತ್ತು. ಅದುವರೆಗೆ ಅದನ್ನು ಸಿಕ್ರೆಟ್ ಆಗಿಯೇ ಇಡಲಾಗುತ್ತಿತ್ತು. ಈ ಮೂಲಕ ಬಿಗ್ ಬಾಸ್ ಪ್ರವೇಶಿಸುವವರು ಯಾರು ಎಂಬ ಕುತೂಹಲವನ್ನು ಕೊನೆಯ ಕ್ಷಣದವರೆಗೂ ಉಳಿಸಿಕೊಳ್ಳಲಾಗುತ್ತಿತ್ತು.

ಆದರೆ ಈ ಬಾರಿ ಕೊಂಚ ಭಿನ್ನವಾಗಿರಲಿದೆ. ರಾಜಾ ರಾಣಿ ಶೋ ಗ್ರ್ಯಾಂಡ್ ಫಿನಾಲೆ ಇದೇ ವಾರಂತ್ಯಕ್ಕೆ ನಡೆಯಲಿದ್ದು, ಅದರಲ್ಲಿಯೇ ಬಿಗ್ ಬಾಸ್ ಸ್ಪರ್ಧಿಗಳು ಯಾರು ಎಂಬ ವಿಚಾರವನ್ನು ವಾಹಿನಿ ಬಹಿರಂಗಪಡಿಸಲಿದೆ. ಕೆಲವು ಸ್ಪರ್ಧಿಗಳ ಹೆಸರು ಶೋನಲ್ಲಿ ಬಹಿರಂಗಪಡಿಸುವುದಾಗಿ ಕಲರ್ಸ್ ಹೇಳಿದೆ. ಇಂತಹ ಪ್ರಯೋಗವಾಗುತ್ತಿರುವುದು ಇದೇ ಮೊದಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಾಮೀನು ಸಿಗಬಹುದೆಂಬ ಭರವಸೆಯಲ್ಲಿದ್ದ ನಟ ದರ್ಶನ್ ಗೆ ಶಾಕ್