Select Your Language

Notifications

webdunia
webdunia
webdunia
webdunia

ರಾಜ್ ಬಿ ಶೆಟ್ಟಿ ಈಸ್ ಬ್ಯಾಕ್, ಸು ಫ್ರಂ ಸೊ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್

Su from So movie

Krishnaveni K

ಬೆಂಗಳೂರು , ಶುಕ್ರವಾರ, 25 ಜುಲೈ 2025 (11:35 IST)
ಬೆಂಗಳೂರು: ಮಂಗಳೂರಿನ ಶೆಟ್ರು ಗ್ಯಾಂಗ್ ಸಿನಿಮಾ ಎಂದರೆ ಕನ್ನಡ ಪ್ರೇಕ್ಷಕರಿಗೆ ಕುತೂಹಲ ಇದ್ದೇ ಇರುತ್ತದೆ. ಕಳೆದ ಒಂದೆರಡು ಸಿನಿಮಾಗಳಿಂದ ಮಂಕು ಹೊಡೆದಿದ್ದ ರಾಜ್ ಬಿ ಶೆಟ್ಟಿ ಈಗ ಕಮ್ ಬ್ಯಾಕ್ ಮಾಡಿದ್ದಾರೆ. ಅವರ ನಿರ್ಮಾಣದ ಸು ಫ್ರಮ್ ಸೊ ಸಿನಿಮಾ ಇಂದು ಬಿಡುಗಡೆಯಾಗಿದ್ದು ಭರ್ಜರಿ ಸೌಂಡ್ ಮಾಡುತ್ತಿದೆ.

ಸು ಫ್ರಮ್ ಸೊ ಸಿನಿಮಾ ರಾಜ್ ಬಿ ಶೆಟ್ಟಿ ನಿರ್ಮಾಣ ಮಾತ್ರವಲ್ಲ, ಈ ಸಿನಿಮಾದಲ್ಲಿ ಅವರು ವಿಶೇಷ ಪಾತ್ರದಲ್ಲೂ ನಟಿಸಿದ್ದಾರೆ. ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ಹಾಸ್ಯ ಕಲಾವಿದರ ದಂಡೇ ಈ ಸಿನಿಮಾದಲ್ಲಿ ನಟಿಸಿದೆ. ಪಕ್ಕಾ ಮಂಗಳೂರು ಶೈಲಿಯ ಕನ್ನಡ, ಅಲ್ಲಿನ ಲೋಕಲ್ ಕಲಾವಿದರು ಸೇರಿಕೊಂಡು ಭರಪೂರ ಮನರಂಜನೆ ಒದಗಿಸುತ್ತಾರೆ.

ಅಂದ ಹಾಗೆ ಈ ಸಿನಿಮಾದಲ್ಲಿ ಸ್ಟಾರ್ ಯಾರು ಹುಡುಕಿದರೆ ಸಿಗಲ್ಲ. ಇಲ್ಲಿ ಕತೆಯೇ ನಾಯಕ. ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ಪ್ರೇಕ್ಷಕರೆಲ್ಲರೂ ಸ್ಟಾರ್ ಗಳೇ. ಪ್ರಕಾಶ್ ತುಮಿನಾಡ್, ಜೆಪಿ ತುಮಿನಾಡ್, ಶನೀಲ್ ಗೌತಮ್ ಸೇರಿದಂತೆ ಹಾಸ್ಯ ಕಲಾವಿದರ ದಂಡೇ ಸಿನಿಮಾದಲ್ಲಿದೆ.

ಇದು ಒಂದು ಊರಿನಲ್ಲಿ ನಡೆಯುವ ಸಾಮಾನ್ಯರ ಕತೆ. ಮೊದಲಾರ್ಧ ಬರೀ ತಮಾಷೆಯಲ್ಲೇ ಸಾಗುತ್ತದೆ. ಏನೂ ಕತೆಯಿಲ್ವಾ ಎನ್ನುವಾಗ ಇಂಟ್ರೆಸ್ಟಿಂಗ್ ಕಹಾನಿಯೊಂದು ನಿಮ್ಮ ಮುಂದೆ ತೆರೆಯುತ್ತದೆ. ಹಾಗೇ ಆರಾಮವಾಗಿ ಸಾಗುತ್ತಿರುವ ಊರಿನೊಳಗೆ ಸುಲೋಚನಾ ದೆವ್ವವಾಗಿ ಊರಿಗೆ ಸೇರುತ್ತಾಳೆ. ಹಾಗಂತ ದೆವ್ವ ಎಂದು ಮಾಮೂಲು ಹಾರರ್ ರೇಂಜ್ ಗೆ ಯೋಚನೆ ಮಾಡಬೇಡಿ. ಇಲ್ಲೂ ನಿರ್ದೇಶಕರು ಹಾಸ್ಯದ ಟಚ್ ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡದಲ್ಲಿ ಇಂತಹದ್ದೊಂದು ಸಿನಿಮಾ ಬಂದು ಎಷ್ಟೋ ದಿನಗಳೇ ಆಗಿವೆ. ಆರಂಭದಲ್ಲಿ ಇರುವ ನಗು ಪ್ರೇಕ್ಷಕರ ಮುಖದಲ್ಲಿ ಕೊನೆಯವರೆಗೂ ಇರಲಿದೆ. ಡಬಲ್ ಮೀನಿಂಗ್ ಸಂಭಾಷಣಗಳಿಲ್ಲದೆಯೂ ಪ್ರೇಕ್ಷಕರಿಲ್ಲದೆಯೂ ಪ್ರೇಕ್ಷಕರನ್ನು ನಗಿಸುವುದು ಹೇಗೆ ಎಂದು ಪ್ರಕಾಶ್ ತುಮಿನಾಡ್, ಶನೀಲ್ ಗೌತಮ್ ಗೆ ಚೆನ್ನಾಗಿ ಕರಗತವಾಗಿದೆ. ಇದನ್ನು ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕಾಂತಾರ ಸಿನಿಮಾದಲ್ಲೂ ತೋರಿಸಿಕೊಟ್ಟಿದ್ದಾರೆ. ಜೆಪಿ ತುಮಿನಾಡ್ ನಿರ್ದೇಶನದ ಜೊತೆಗೆ ನಟನೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಹೊಸ ನಿರ್ದೇಶಕ ಎಂದು ನಿಮಗೆ ಅನಿಸುವುದೇ ಇಲ್ಲ. ಪ್ರತೀ ದೃಶ್ಯವನ್ನೂ ಇದು ಅನಗತ್ಯ ಎಂದು ಅನಿಸದೇ ಇರುವ ರೀತಿಯಲ್ಲಿ ನಿರ್ದೇಶನ ಮಾಡಿದ್ದಾರೆ. ಬಹಳ ದಿನಗಳ ನಂತರ ಕುಟುಂಬ ಸಮೇತ ನೋಡಬಹುದಾದ ಸಿನಿಮಾವೊಂದು ಕನ್ನಡದಲ್ಲಿ ಬಂದಿದೆ. ತಪ್ಪದೇ ನೋಡಿ.


Share this Story:

Follow Webdunia kannada

ಮುಂದಿನ ಸುದ್ದಿ

ರೇಣುಕಾಸ್ವಾಮಿ ಕುಟುಂಬಕ್ಕೆ ಸುಪ್ರೀಂನಲ್ಲಿ ನ್ಯಾಯ ಸಿಗುವ ನಂಬಿಕೆಯಲ್ಲಿದ್ದೇನೆ: ನಟಿ ರಮ್ಯಾ