Publish Date: Sat, 28 Jun 2025 (10:12 IST)
Updated Date: Sat, 28 Jun 2025 (10:15 IST)
ನಿನ್ನೆ ರಾತ್ರಿ ಉಳಿದ ಅನ್ನವನ್ನು ಫ್ರಿಡ್ಜ್ ನಲ್ಲಿಟ್ಟು ಮರುದಿನ ಬಳಕೆ ಮಾಡ್ತೀರಾ? ಹಾಗಿದ್ದರೆ ನಿಮಗೆ ಅಪಾಯ ಕಾದಿದೆ. ಇದರಿಂದ ಏನು ಸಮಸ್ಯೆ ಎಂದು ನೀವು ತಿಳಿದುಕೊಳ್ಳಲೇಬೇಕು.
ಅನ್ನ ಮಾಡಿದ ತಕ್ಷಣ ಅದನ್ನು ಊಟ ಮಾಡಿ ಬಿಡಬೇಕು. ಅದನ್ನು ಹಾಗೆಯೇ ಬಿಟ್ಟರೆ ಅದು ಹಳೆಯ ಅನ್ನವಾಗಿ ಬಿಡುತ್ತದೆ. ಅದರಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಯಾಗುತ್ತದೆ. ಇದನ್ನು ನೀವು ಫ್ರಿಡ್ಜ್ ನಲ್ಲಿಟ್ಟರಂತೂ ಬ್ಯಾಕ್ಟೀರಿಯಾ ಬೆಳವಣಿಗೆಗೆ ಸಹಾಯ ಮಾಡಿದಂತೆ.
ಇದನ್ನು ನೀವು ಮರುದಿನ ಬಿಸಿ ಮಾಡಿ ಸೇವನೆ ಮಾಡುತ್ತೇನೆಂದರೂ ಬ್ಯಾಕ್ಟೀರಿಯಾಗಳು ಹೋಗಲ್ಲ. ಈ ಆಹಾರ ನಿಮ್ಮ ಕರುಳಿಗೆ ಹಾನಿ ಉಂಟು ಮಾಡುವ ಸಾಧ್ಯತೆಯಿದೆ. ಕ್ರಮೇಣ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು ನಿಮಗೆ ಬರಬಹುದು.
ಅನ್ನದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳಿಂದ ಕರುಳಿಗೆ ಸಂಬಂಧಿಸಿದ ಸಮಸ್ಯೆಗಳು, ವಾಕರಿಕೆ, ಅಸಿಡಿಟಿ, ಅತಿಸಾರದಂತಹ ಸಮಸ್ಯೆಗಳು ಬರಬಹುದು. ಹೀಗಾಗಿ ನಿಮ್ಮ ಆರೋಗ್ಯ ನಿಮಗೆ ಮುಖ್ಯವಾದರೆ ಉಳಿದ ಅನ್ನವನ್ನು ಖಂಡಿತಾ ಸೇವನೆ ಮಾಡಬೇಡಿ. ಎಷ್ಟು ಬೇಕೋ ಅಷ್ಟೇ ಅನ್ನ ಮಾಡಿಕೊಳ್ಳಿ.