ಬೆಂಗಳೂರು: ಬೇಸಿಗೆಕಾಲದ ಸೀಸನಲ್ ಫ್ರೂಟ್ ಗಳಲ್ಲಿ ಒಂದಾಗಿರುವ ಈ ಹಣ್ಣು ಯಾವುದು ಎಂದು ಗುರುತಿಸಬಲ್ಲಿರಾ? ಈ ಹಣ್ಣನ್ನು ಯಾವೆಲ್ಲಾ ಆರೋಗ್ಯ ಸಮಸ್ಯೆಯಿರುವವರು ಸೇವಿಸಬೇಕು ಮತ್ತು ಇದರ ಆರೋಗ್ಯಕರ ಉಪಯೋಗಗಳೇನು ತಿಳಿದುಕೊಳ್ಳಿ.
ಈ ಹಣ್ಣಿನ ಹೆಸರು ಮಲಯ ಆಪಲ್ ಅಥವಾ ಮಲಬಾರ್ ಆಪಲ್ ಎಂಬ ಹೆಸರಿದೆ. ಒಂದು ರೀತಿಯಲ್ಲಿ ಸ್ಟಾರ್ ಆಪಲ್ ಜಾತಿಯ ಹಣ್ಣು ಇದಾಗಿದೆ. ನೀರಿನಂಶ ಹೇರಳವಾಗಿರುವ ಮತ್ತು ಫೈಬರ್ ಯುಕ್ತವಾದ ಈ ಹಣ್ಣಿನ ಸೇವನೆಯಿಂದ ನಮಗೆ ಅನೇಕ ಆರೋಗ್ಯಕರ ಉಪಯೋಗಗಳಿವೆ.
ವಿಶೇಷವಾಗಿ ಬೇಸಿಗೆಯಲ್ಲಿ ಈ ಸೀಸನ್ ಗೆ ಬೇಕಾದಂತಹ ಆರೋಗ್ಯಕರ ಉಪಯೋಗವಿದೆ. ಬೇಸಿಗೆಯಲ್ಲಿ ದೇಹಕ್ಕೆ ಸಾಕಷ್ಟು ನೀರಿನಂಶ ಬೇಕಾಗುತ್ತದೆ. ಈ ಹಣ್ಣಿನಲ್ಲಿ ನೀರಿನಂಶ ಹೇರಳವಾಗಿದ್ದು ಬೇಸಿಗೆಯಲ್ಲಿ ಸೇವನೆ ಮಾಡಲು ಹೇಳಿ ಮಾಡಿಸಿದಂತಿದೆ. ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ ಅಂಶ ಹೇರಳವಾಗಿದ್ದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಯಾವ ರೋಗಗಳಿಗೆ ಮದ್ದು?
ವಿಶೇಷವಾಗಿ ಮಲಬದ್ಧತೆ ಸಮಸ್ಯೆಯಿರುವವರು ಇದನ್ನು ಸೇವನೆ ಮಾಡಬಹುದು. ಜೀರ್ಣಕ್ರಿಯೆಯನ್ನು ಸುಗಮವಾಗಿಸುವುದರ ಜೊತೆಗೆ ನಾರಿನಂಶವೂ ಅಧಿಕವಾಗಿರುವುದರಿಂದ ಮಲಬದ್ಧತೆ ನಿವಾರಿಸುವ ಗುಣ ಹೊಂದಿದೆ. ಜೊತೆಗೆ ಚರ್ಮವನ್ನು ಸೋಕುವ ಹಾನಿಕಾರಕ ಅತಿನೇರಳ ವಿಕಿರಣಗಳಿಂದ ದೇಹ ರಕ್ಷಿಸುತ್ತದೆ. ಅಲ್ಲದೆ ಮಧುಮೇಹಿಗಳೂ ಸೇವನೆ ಮಾಡಬಹುದಾದ ಹಣ್ಣು ಇದಾಗಿದೆ. ಅಲ್ಲದೆ ಕಿಡ್ನಿ ಸಮಸ್ಯೆ ಬಾರದಂತೆ ತಡೆಯುವುದಲ್ಲದೆ ಜೊಲ್ಲು ರಸ ಉತ್ಪತ್ತಿ ವೃದ್ಧಿಸುತ್ತದೆ. ಹೀಗಾಗಿ ಈ ಹಣ್ಣು ಸಿಕ್ಕರೆ ತಪ್ಪದೇ ಸೇವನೆ ಮಾಡಿ.