ಬೆಂಗಳೂರು: ಬೇಸಿಗೆಯಲ್ಲಿ ಹೀಟ್ ಜಾಸ್ತಿ ಆಹಾರ ಪದಾರ್ಥವನ್ನು ಸೇವನೆ ಮಾಡಬಾರದು ಎನ್ನುತ್ತಾರೆ. ಹಾಗಿದ್ದರೆ ನುಗ್ಗೆ ಕಾಯಿ ಸೇವನೆ ಮಾಡಬಹುದೇ ಇಲ್ಲಿದೆ ಉತ್ತರ.
ನುಗ್ಗೆಕಾಯಿ ದೇಹಕ್ಕೆ ಹೀಟ್ ಆದರೂ ಇದರಲ್ಲಿ ದೇಹ ತಂಪು ಮಾಡುವ ಗುಣವೂ ಇದೆ. ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ನುಗ್ಗೆಕಾಯಿ ನಮ್ಮ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಇದನ್ನು ಬೇಸಿಗೆಯಲ್ಲೂ ಸೇವನೆ ಮಾಡಲು ಅಡ್ಡಿಯಿಲ್ಲ.
ಆದರೆ ಹಿತಮಿತವಾಗಿ ಸೇವನೆ ಮಾಡುವುದು ಉತ್ತಮ. ನುಗ್ಗೆಕಾಯಿ ಪಲ್ಯ ಅಥವಾ ಸಾಂಬಾರ್ ಮಾಡುವಾಗ ಸ್ವಲ್ಪ ಜೀರಿಗೆ ಹಾಕಿದರೆ ಅದರ ಉಷ್ಣ ಗುಣ ಹೊರಟು ಹೋಗುತ್ತದೆ. ಇದರಿಂದ ದೇಹಕ್ಕೆ ಯಾವುದೇ ಸಮಸ್ಯೆಯಾಗದು.
ವಿಶೆಷವಾಗಿ ಮಧುಮೇಹಿಗಳು, ರಕ್ತದ ಕೊರತೆಯಿಂದ ಬಳಲುತ್ತಿರುವವರು, ರಕ್ತದೊತ್ತಡದಿಂದ ಬಳಲುತ್ತಿರುವವರು, ಹಾಗೂ ನರದೌರ್ಬಲ್ಯಗಳಿಂದ ಬಳಲುತ್ತಿದ್ದರೆ ನುಗ್ಗೆಕಾಯಿಯನ್ನು ಹೇರಳವಾಗಿ ಸೇವನೆ ಮಾಡಿದರೆ ಉತ್ತಮ.