ಬೆಂಗಳೂರು: ಈಗಾಗಲೇ ಶುರುವಾಗಿರುವ ಉರಿ ಬಿಸಿಲಿನಿಂದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈಗಿನ ವಾತಾವರಣದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳದಿದ್ದರೆ ಬೇಸಿಗೆಯಲ್ಲಿ ಆರೋಗ್ಯ ಹದಗೆಟ್ಟುತ್ತದೆ.
ಹೆಚ್ಚು ನೀರನ್ನು ಸೇವಿಸುವ ಮೂಲಕ ಬೇಸಿಗೆಯ ಸಮಯದಲ್ಲಿ ಕಾಡುವ ಆನೇಕ ಆರೋಗ್ಯ ಸಮಸ್ಯೆಯನ್ನು ದೂರ ಮಾಡಬಹುದು. ಹಾಗೆಯೇ ಮನೆಯಲ್ಲಿಯೇ ತಯಾರಿಸಿದ ಆಹಾರಗಳನ್ನು ಸೇವಿಸಲು ಪ್ರಯತ್ನಿಸಿ.
ಬೇಸಿಗೆಯಲ್ಲಿ ಶೇಖರಿಸಿಯಿಟ್ಟ ಆಹಾರ ಪದಾರ್ಥಗಳಲ್ಲಿ ಬಾಕ್ಟೀರಿಯಾ ಶಿಲೀಂಧ್ರಗಳು ಸುಲಭ ವೇಗದಲ್ಲಿ ಬೆಳೆದು ವಾಂತಿ ಭೇದಿಗಳನ್ನು ಉಂಟುಮಾಡಬಹುದಾಗಿದ್ದು, ಈ ಬಗ್ಗೆ ಎಚ್ಚರದಿಂದ ಇರಬೇಕಾಗುತ್ತದೆ.
ಹೊರಗೆ ಹೋಗುವಾಗ ಕಾಟನ್ ಬಟ್ಟೆಗಳನ್ನು ಧರಿಸಿ. ಕಣ್ಣಿನ ರಕ್ಷಣೆಗೆ ಸನ್ ಗ್ಲಾಸ್ ಧರಿಸಿ. ಮತ್ತು ಆದಷ್ಟು ನೀರನ್ನು ಸೇವಿಸಿ. ನೀರನ್ನು ಜಾಸ್ತಿ ಸೇವಿಸುವುದರಿಂದ ನಮ್ಮ ದೇಹದ ಸಮಾತೋಲನದಿಂದ ಇರುತ್ತದೆ.