Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಚಿಕನ್ ಸೇವಿಸುವರಿಗೆ ಈಗ ಹಕ್ಕಿ ಜ್ವರ ಭೀತಿ: ಇದರ ಲಕ್ಷಣಗಳೇನು

chicken

Krishnaveni K

ಬೆಂಗಳೂರು , ಶನಿವಾರ, 1 ಮಾರ್ಚ್ 2025 (10:00 IST)
Photo Credit: X
ಬೆಂಗಳೂರು: ರಾಜ್ಯದಲ್ಲಿ ಈಗ ಹಕ್ಕಿ ಜ್ವರ ಭೀತಿ ಶುರುವಾಗಿದೆ. ವಿಶೇಷವಾಗಿ ಚಿಕನ್ ಸೇವನೆ ಮಾಡುವವರಿಗೆ ಈಗ ಭಯ ಶುರುವಾಗಿದೆ. ಈ ಜ್ವರದ ಲಕ್ಷಣಗಳೇನು ಇಲ್ಲಿದೆ ವಿವರ.

ಮಹಾರಾಷ್ಟ್ರ ಬಳಿಕ ಈಗ ಕರ್ನಾಟಕದಲ್ಲೂ ಹಕ್ಕಿ ಜ್ವರದ ಭೀತಿ ಶುರುವಾಗಿದೆ. ಚಿಕ್ಕಬಳ್ಳಾಪುರದಲ್ಲಿ ನಿನ್ನೆ 23 ಕೋಳಿಗಳು ಸಾವನ್ನಪ್ಪಿದ್ದು ಇವುಗಳ ಸ್ಯಾಂಪಲ್ ಗಳನ್ನು ಪರಿಶೀಲಿಸಿದಾಗ ಸೋಂಕು ಇರುವುದು ಪತ್ತೆಯಾಗಿದೆ. ಹೀಗಾಗಿ ಈಗ ಚಿಕನ್ ಸೇವಿಸಲೂ ಭಯಪಡುವಂತಾಗಿದೆ.

ಹಕ್ಕಿ ಜ್ವರದ ಲಕ್ಷಣಗಳೇನು
ಕಣ್ಣು ಕೆಂಪಗಾಗುವುದು
ಸಾಮಾನ್ಯ ಜ್ವರದಂತೆ ಗಂಟಲು ನೋವು, ಮೈ ಕೈ ನೋವು, ಸುಸ್ತು, ತಲೆನೋವು ಇತ್ಯಾದಿ ಕಂಡುಬರುತ್ತದೆ.
ಕೆಲವರಿಗೆ ಉಸಿರಾಟದ ಸಮಸ್ಯೆಗಳು ಕಂಡುಬರುತ್ತದೆ
ತಲೆ ಸುತ್ತಿ ಬರುವಂತಾಗುವುದು, ವಾಕರಿಕೆ ಬಂದಂತಾಗುವುದು.

ಇತ್ಯಾದಿ ಲಕ್ಷಣಗಳು ಸೋಂಕು ತಗುಲಿದ 1 ರಿಂದ 10 ದಿನಗಳೊಳಗಾಗಿ ಕಂಡುಬರುತ್ತದೆ. ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಮಾಧ್ಯಮಗಳೆದುರು ಮಕ್ಕಳಂತೆ ಕಿತ್ತಾಡಿ ನಗೆಪಾಟಲಿಗೀಡಾದ ಝೆಲೆನ್ ಸ್ಕಿ, ಡೊನಾಲ್ಡ್ ಟ್ರಂಪ್ ವಿಡಿಯೋ