ಬೆಂಗಳೂರು: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ ಹಾಗಿದ್ದರೆ ನಿರ್ಲ್ಯಕ್ಷ ಬೇಡ. ಇದು ಖಂಡಿತವಾಗಿಯೂ ಈ ಅಪಾಯದ ಸೂಚನೆಯಾಗಿರಲಿದೆ.
ಸಾಮಾನ್ಯವಾಗಿ ಮನುಷ್ಯನ ಹೃದಯ ನಿಮಿಷಕ್ಕೆ 72 ಬಾರಿ ಹೊಡೆದುಕೊಳ್ಳುತ್ತದೆ. ಇಲ್ಲವೇ ವಿಪರೀತ ಭಯ, ಆಘಾತ ಇಲ್ಲವೇ ಅತಿಯಾದ ಸಂತೋಷವಾದಾಗ ಹೃದಯ ಜೋರಾಗಿ ಹೊಡೆದುಕೊಳ್ಳುತ್ತದೆ. ಇದಕ್ಕೆ ಭಯಪಡಬೇಕಾಗಿಲ್ಲ.
ಆದರೆ ಸಾಮಾನ್ಯ ಸ್ಥಿತಿಯಲ್ಲೂ ಹೃದಯ ಬಡಿತದಲ್ಲಿ ಏರುಪೇರಾಗುತ್ತಿದ್ದರೆ ಅದನ್ನು ನಿರ್ಲ್ಯಕ್ಷಿಸುವಂತಿಲ್ಲ. ಹೃದಯದ ರಕ್ತನಾಳಗಳಲ್ಲಿ ಬ್ಲಾಕ್ ಗಳಿದ್ದರೆ ಹೃದಯ ಬಡಿತ ಏರುಪೇರಾಗಬಹುದು. ಜೊತೆಗೆ ಎದೆ ನೋವು ಕಾಣಿಸಿಕೊಳ್ಳಬಹುದು.
ಇದರ ಹೊರತಾಗಿ ಹೃದಯಾಘಾತಕ್ಕೆ ಕೆಲವು ಕ್ಷಣಗಳ ಮೊದಲು ಎದೆಬಡಿತ ಜೋರಾಗಿ ಹೊಡೆದುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಂಡಲ್ಲಿ ಪ್ರಾಣಾಪಾಯದಿಂದ ಪಾರಾಗಬಹುದು.