Select Your Language

Notifications

webdunia
webdunia
webdunia
webdunia

Bengaluru Rains: ಬೆಂಗಳೂರಿನಲ್ಲಿ ಭಾರೀ ಮಳೆ, ಸಂಜೆ ಹುಷಾರು

Bengaluru Rains

Krishnaveni K

ಬೆಂಗಳೂರು , ಗುರುವಾರ, 17 ಜುಲೈ 2025 (16:00 IST)
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೀಗ ಅಪರಾಹ್ನದ ನಂತರ ಭಾರೀ ಮಳೆಯಾಗಿದೆ. ಸಂಜೆ ಇನ್ನಷ್ಟು ಮಳೆಯಾಗುವ ಸೂಚನೆಯಿದ್ದು ಹುಷಾರಾಗಿ ಮನೆ ಸೇರಿಕೊಳ್ಳಿ.

ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದೆ. ನಿನ್ನೆ ಸಂಜೆಯೂ ಭಾರೀ ಮಳೆಯಾಗಿತ್ತು. ಇದರಿಂದ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡುವಂತಾಗಿತ್ತು. ಸಂಜೆ ಕಚೇರಿಯಿಂದ ತೆರಳುವ ಸಂದರ್ಭದಲ್ಲೇ ಮಳೆ ಬಿದ್ದು ಸಾಕಷ್ಟು ಸಮಸ್ಯೆಯಾಗಿತ್ತು.

ಇಂದೂ ಅಪರಾಹ್ನದ ನಂತರ ಭಾರೀ ಮಳೆಯಾಗಿದೆ. ಕೆಆ್ ಪುರಂ, ಹೆಬ್ಬಾಳ ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ. ಈಗಲೂ ಭಾರೀ ಮೋಡ ಮುಸುಕಿದ ವಾತಾವರಣವಿದ್ದು ಇಂದೂ ಸಂಜೆ ಮಳೆಯಾಗುವ ಸಾಧ್ಯತೆಯಿದೆ.

ಹವಾಮಾನ ವರದಿಗಳ ಪ್ರಕಾರ ಬೆಂಗಳೂರಿನಲ್ಲಿ ಇನ್ನೂ ಮೂರರಿಂದ ನಾಲ್ಕು ದಿನ ಮಳೆಯಾಗಲಿದೆ. ಅದರಲ್ಲೂ ಸಂಜೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ನಂತರ ಮಳೆಯ ಅಬ್ಬರ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾತೆತ್ತಿದರೆ ದ್ರೌಪದಿ ಮುರ್ಮು ಹೆಸರು ಹೇಳುವ ಬಿಜೆಪಿ ಪ್ರಧಾನಿಯನ್ನಾಗಿ ಯಾಕೆ ಮಾಡಿಲ್ಲ: ಸಿಎಂ ಸಿದ್ದರಾಮಯ್ಯ