ಆಹಾರ ಪದ್ಧತಿಯಲ್ಲಿ ಬೇಳೆ, ಕಾಳುಗಳ ಉಪಯೋಗ ಮಾಡುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. ಸದ್ಗುರು ಜಗ್ಗಿ ವಾಸುದೇವ್ ಪ್ರಕಾರ ಎಲ್ಲಕ್ಕಿಂತ ಶಕ್ತಿಶಾಲೀ ಕಾಳು ಇದೇ.
ಬೇಳೆ ಕಾಳುಗಳು ನಮ್ಮ ದೇಹಕ್ಕೆ ಶಕ್ತಿದಾಯಕವಾಗಿದೆ. ಸದ್ಗುರು ಕೇವಲ ಧಾರ್ಮಿಕ ಗುರು ಮಾತ್ರವಲ್ಲ, ಆರೋಗ್ಯ, ಜೀವನ ಶೈಲಿ ಬಗ್ಗೆ ಅತ್ಯುತ್ತಮವಾದ ಸಲಹೆ ನೀಡುತ್ತಾರೆ. ಅವರ ಪ್ರಕಾರ ಇದೊಂದು ಧಾನ್ಯ ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಚೈತನ್ಯ ಸಿಗುತ್ತದೆ.
ಅವರ ಪ್ರಕಾರ ಕಾಳುಗಳಲ್ಲಿ ಶ್ರೇಷ್ಠ ಕಾಳು ಎಂದರೆ ಹುರುಳಿ ಕಾಳು. ಇದನ್ನು ಇಂಗ್ಲಿಷ್ ನಲ್ಲಿ ಹಾರ್ಸ್ ಗ್ರಾಮ್ ಎಂದೂ ಕರೆಯುತ್ತಾರೆ. ಈ ಕಾಳು ಉಷ್ಣ ಗುಣ ಹೊಂದಿದ್ದು ಶೀತ ಪ್ರಕೃತಿಯಿರುವಾಗ ಹುರುಳಿ ಕಾಳನ್ನು ಅರ್ಧ ಇಂಚಿನಷ್ಟು ಮೊಳಕೆ ಬರಿಸಿ ಸೇವನೆ ಮಾಡುವುದು ಆರೋಗ್ಯಕರ. ಇದನ್ನು ಹಸಿಯಾಗಿಯೇ ಚೆನ್ನಾಗಿ ಜಗಿದು ಸೇವನೆ ಮಾಡಬಹುದು.
ಒಂದು ವೇಳೆ ಹುರುಳಿ ಕಾಳು ದೇಹಕ್ಕೆ ಉಷ್ಣವಾಗುತ್ತಿದ್ದರೆ ಅದನ್ನು ಸರಿದೂಗಿಸಲು ಮೊಳಕೆ ಬರಿಸಿದ ಹೆಸರು ಕಾಳನ್ನು ಸೇವನೆ ಮಾಡಬೇಕು. ಮೊಳಕೆ ಕಾಳು ತಂಪು ಗುಣ ಹೊಂದಿದ್ದು ಹುರುಳಿಯ ಉಷ್ಣ ಗುಣವನ್ನು ಸರಿದೂಗಿಸುತ್ತದೆ ಎಂದು ಸದ್ಗುರು ಸಲಹೆ ನೀಡುತ್ತಾರೆ.