Select Your Language

Notifications

webdunia
webdunia
webdunia
webdunia

ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿ ಪ್ರಕಾರ ಹೃದಯದ ಆರೋಗ್ಯ ಚೆನ್ನಾಗಿರಬೇಕಾದರೆ ಈ 5 ಸರಿಯಾಗಿರಬೇಕು

Dr Vijayalakshmi Balekundri

Krishnaveni K

ಬೆಂಗಳೂರು , ಶನಿವಾರ, 19 ಜುಲೈ 2025 (09:10 IST)
Photo Credit: X
ಇತ್ತೀಚೆಗಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಲ್ಲೂ ಹೃದಯಾಘಾತದ ಸಮಸ್ಯೆ ಕಂಡುಬರುತ್ತಿದೆ. ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಪಾಡ್ ಕಾಸ್ಟ್ ನಲ್ಲಿ ಖ್ಯಾತ ಹೃದ್ರೋಗ ತಜ್ಞೆ ಡಾ ವಿಜಯಲಕ್ಷ್ಮಿ ಬಾಳೆಕುಂದ್ರಿ ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೇ ಈ ಐದು ವಿಚಾರಗಳನ್ನು ನೆನಪಿನಲ್ಲಿಡಿ ಎಂದಿದ್ದಾರೆ.

ಹಾಸನದಲ್ಲಿ ಸರಣಿ ಹೃದಯಾಘಾತಗಳಾದ ಬಳಿಕ ಜನರಲ್ಲಿ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ಹೆಚ್ಚಾಗಿದೆ. ಚಿಕ್ಕ ವಯಸ್ಸಿನವರೂ ಸಡನ್ ಹೃದಯಾಘಾತದಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ನಮ್ಮ ಜೀವನ ಶೈಲಿಯೇ ಕಾರಣ ಎಂದು ಅನೇಕ ತಜ್ಞರು ಅಭಿಪ್ರಾಯ ಪಡುತ್ತಾರೆ.

ಡಾ ವಿಜಯಲಕ್ಷ್ಮಿ ಪ್ರಕಾರ, ಹೃದಯಾಘಾತವಾಗದಂತೆ ತಡೆಯಲು ನೀವು ಐದು ವಿಚಾರಗಳನ್ನು ನೆನಪಿನಲ್ಲಿಡಬೇಕು. ನಮ್ಮ ಹೃದಯ ಎನ್ನುವುದು ಅತ್ಯಂತ ಸದೃಢ ಅಂಗ. ಅದನ್ನು ಹಾಳಾಗದಂತೆ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ.

ಇದಕ್ಕಾಗಿ ನಾವು ಐದು ವಿಚಾರಗಳನ್ನು ಗಮನಿಸಬೇಕು. ಮೊದಲನೆಯದ್ದು ಧೂಮಪಾನ. ಎರಡನೆಯದ್ದ ಮದ್ಯಪಾನ. ಮೂರನೆಯ ವಿಚಾರವೆಂದರೆ ಮಾದಕ ವಸ್ತು, ನಾಲ್ಕನೆಯದ್ದು ಒತ್ತಡ ರಹಿತ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ಕೊನೆಯ ಮತ್ತು ಅತೀ ಮುಖ್ಯ ವಿಚಾರವೆಂದರೆ ನಿದ್ರೆ. ಇಂದಿನ ದಿನದಲ್ಲಿ ಬಹುತೇಕರು ಆರೋಗ್ಯಕರ ಸಮಯದಷ್ಟು ನಿದ್ರೆ ಮಾಡುವುದಿಲ್ಲ. ಕಡಿಮೆ ಅವಧಿ ನಿದ್ರೆ ಮಾಡುವುದೂ ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎನ್ನುತ್ತಾರೆ ಅವರು. ಈ ಐದು ವಿಚಾರಗಳನ್ನು ನೆನಪಿನಲ್ಲಿಟ್ಟುಕೊಂಡು ಪಾಲಿಸಿದರೆ ಹೃದಯವೂ ಚೆನ್ನಾಗಿರುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

Bengaluru Rains: ವೀಕೆಂಡ್ ನಲ್ಲಿ ಬೆಂಗಳೂರಿಗೆ ಮಳೆ ಬರುತ್ತಾ, ಇಂದಿನ ಹವಾಮಾನ ವರದಿ