Select Your Language

Notifications

webdunia
webdunia
webdunia
webdunia

ಲೋ ಬಿಪಿಯಿಂದ ಹೃದಯಾಘಾತವಾಗುವುದು ನಿಜಾನಾ: ಡಾ ಸಿಎನ್ ಮಂಜುನಾಥ್ ಹೇಳುವುದೇನು

Dr CN Manjunath

Krishnaveni K

ಬೆಂಗಳೂರು , ಮಂಗಳವಾರ, 15 ಜುಲೈ 2025 (09:30 IST)
ಇತ್ತೀಚೆಗೆ ನಾವು ಕೆಲವೊಂದು ಪ್ರಕರಣಗಳಲ್ಲಿ ಲೋ ಬಿಪಿ ಆಯ್ತು ಇದರಿಂದಾಗಿ ಹೃದಯಾಘಾತವಾಯ್ತು ಎಂದು ಹೇಳುವವರನ್ನು ಕೇಳಿದ್ದೇವೆ. ಆದರೆ ನಿಜವಾಗಿ ಲೋ ಬಿಪಿ ಇರುವವರಿಗೆ ಹೃದಯಾಘಾತವಾಗುತ್ತದಾ? ಈ ಬಗ್ಗೆ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಏನು ಹೇಳುತ್ತಾರೆ ಗೊತ್ತಾ?

ಸಂದರ್ಶನವೊಂದರಲ್ಲಿ ಅವರು ಈ ಬಗ್ಗೆ ಸಾಮಾನ್ಯರ ತಪ್ಪು ಕಲ್ಪನೆಯನ್ನು ನಿವಾರಿಸಿದ್ದಾರೆ. ಲೋ ಬಿಪಿ ಇದ್ದವರಿಗೆಲ್ಲಾ ಹೃದಯಾಘಾತವಾಗುತ್ತದೆ ಎಂಬ ಕಲ್ಪನೆ ಅನೇಕರದಲ್ಲಿದೆ. ಆದರೆ ಇದು ತಪ್ಪು ಕಲ್ಪನೆ. ಲೋ ಬಿಪಿ ಇದ್ದವರಿಗೆಲ್ಲಾ ಹೃದಯಾಘಾತದ ಅಪಾಯ ಹೆಚ್ಚು ಎಂದೇನಿಲ್ಲ.

ಲೋ ಬಿಪಿ ಆದಾಗ ಹೃದಯಾಘಾತವಾಗಲ್ಲ. ಹೃದಯಾಘಾತವಾದಾಗ ಲೋ ಬಿಪಿ ಆಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದರು. ಲೋ ಬಿಪಿ ಆದಾಗ ಕಣ್ಣು ಕತ್ತಲೆಯಾದಂತೆ, ತಲೆ ಚಕ್ಕರ್ ಬಂದಂತೆ ಎನಿಸಬಹುದು.

ಆದರೆ ಲೋ ಬಿಪಿಯಿಂದಲೇ ಹೃದಯಾಘಾತವಾಗುವ ಸಾಧ್ಯತೆಯಿಲ್ಲ. ಹೃದಯಾಘಾತಕ್ಕೆ ಅದರದ್ದೇ ಆಗ ಕಾರಣಗಳಿವೆ ಎಂದು ಅವರು ಹೇಳುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶುಭಾಂಶು ಶುಕ್ಲ ಭೂಮಿಯತ್ತ ಪಯಣ ಹೇಗಿರುತ್ತದೆ