Select Your Language

Notifications

webdunia
webdunia
webdunia
webdunia

ಬಾಲ್ಯ ವಿವಾಹ ಮಾಡಿದ್ರೆ ಹುಷಾರ್, ಹೊಸ ನಿಯಮಗಳು ಸೇರ್ಪಡೆ

Child marriage

Krishnaveni K

ಬೆಂಗಳೂರು , ಶುಕ್ರವಾರ, 25 ಜುಲೈ 2025 (10:41 IST)
Photo Credit: AI Image
ಬೆಂಗಳೂರು: ಅಪ್ರಾಪ್ತ ಹೆಣ್ಣು ಮಕ್ಕಳ ಮದುವೆ ಮಾಡಿಸಿದರೆ ಇನ್ನು ಹುಷಾರ್, ಯಾಕೆಂದರೆ ನಿಯಮಗಳು ಈಗ ಮತ್ತಷ್ಟು ಬಿಗಿಯಾಗಿದೆ.

ಇನ್ನು ಮುಂದೆ ಬಾಲ್ಯ ವಿವಾಹ ಮಾತ್ರವಲ್ಲ ಅದಕ್ಕೆ ಸಂಬಂಧಿಸಿದ ಶಾಸ್ತ್ರ ಮಾಡುವುದೂ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಈ ಬಗ್ಗೆ ಹೊಸ ನಿಯಮಗಳಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದಕ್ಕಾಗಿ ಸಚಿವ ಸಂಪುಟ ಸಭೆಯಲ್ಲಿ ಬಾಲ್ಯ ವಿವಾಹ ತಿದ್ದುಪಡಿ ವಿಧೇಯಕ 2025 ಕ್ಕೆ ಗುರುವಾರ ಅನುಮೋದನೆ ನೀಡಲಾಗಿದೆ.

ಈ ವಿಧೇಯಕವನ್ನು ಆಗಸ್ಟ್ 17 ರಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡನೆ ಮಾಡಲಾಗುತ್ತದೆ. ಈ ಹೊಸ ನಿಯಮದ ಪ್ರಕಾರ ಬಾಲ್ಯ ವಿವಾಹ ಮಾತ್ರವಲ್ಲ, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳಿಗೆ ನಿಶ್ಚಿತಾರ್ಥ, ತೊಟ್ಟಿಲ ಮದುವೆ ಮಾಡುವುದೂ ಶಿಕ್ಷಾರ್ಹ ಅಪರಾಧವಾಗಿದೆ.

ಒಂದು ವೇಳೆ ತಪ್ಪು ಸಾಬೀತಾದರೆ 2 ವರ್ಷ ಜೈಲು 1 ಲಕ್ಷ ದಂಡ ಬೀಳಲಿದೆ. ಬಾಲ್ಯ ವಿವಾಹಕ್ಕೆ ಒಪ್ಪಂದ, ಸಿದ್ಧತೆ ಯಾವುದೂ ಅಪರಾಧವಾಗಲಿದೆ. ಇವುಗಳಿಗೆ ಕೋರ್ಟ್ ನಿಂದ ತಡೆ ತಂದು ಅನೂರ್ಜಿತಗೊಳಿಸುವ ಅವಕಾಶವಿರಲಿದೆ. ತೊಟ್ಟಿಲಲ್ಲೇ ಗಂಡ-ಹೆಣ್ಣು ಮಗುವಿಗೆ ಮದುವೆ ಮಾಡಿಸುವುದೂ ಅಪರಾಧವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಗ್ರಾಮಾಂತರದಲ್ಲಿ ಚುನಾವಣೆ ಅಕ್ರಮವಾಗಿತ್ತು ಎಂದ ಡಿಕೆ ಶಿವಕುಮಾರ್ ಗೆ ನೆಟ್ಟಿಗರ ಟಾಂಗ್