Select Your Language

Notifications

webdunia
webdunia
webdunia
webdunia

ಯಾವಾ ಸಾಧನೆಗೆ ಸಾಧನಾ ಸಮಾವೇಶ ಎಂದು ಕಾಂಗ್ರೆಸ್ಸಿಗರೇ ಉತ್ತರಿಸಬೇಕು: ನಿಖಿಲ್ ಕುಮಾರಸ್ವಾಮಿ

ಕರ್ನಾಟಕ ಕಾಂಗ್ರೆಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ

Sampriya

ಚಿಕ್ಕಮಗಳೂರು , ಗುರುವಾರ, 24 ಜುಲೈ 2025 (17:44 IST)
ಚಿಕ್ಕಮಗಳೂರು: ಮೂರು ವರ್ಷದಲ್ಲಿ ಎಷ್ಟೂ ದುಡ್ಡು ಮಾಡಲು ಸಾಧ್ಯವಾಗುತ್ತದೆಯೋ ಅಷ್ಟು ಮಾಡಿ, ಅದೇ ದುಡ್ಡಲ್ಲಿ ಮತ್ತೆ ಚುನಾವಣೆ ಮಾಡಲು ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದೆ ಎಂದು ಜೆಡಿಎಸ್‌ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. 

ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆ ಮಾಡಿ ಎಂದು ಕೋರ್ಟ್ ಸೂಚನೆ ನೀಡಿದೆ. ಆದರೆ ಚುನಾವಣೆ ಮಾಡಲು ಸರ್ಕಾರಕ್ಕೆ ಆತ್ಮವಿಶ್ವಾಸವೇ ಇಲ್ಲ ಎಂದು ಕಿಡಿಕಾರಿದರು. 

ಮೈಸೂರಲ್ಲಿ ಅದೆಂತದೋ ಸಾಧನಾ ಸಮಾವೇಶ ಮಾಡಿದ್ದರು. ರಾಜ್ಯದಲ್ಲಿ ಏನು ಸಾಧನೆ ಆಗಿದೆ ಎಂದು ಕಾಂಗ್ರೆಸ್ಸಿಗರೇ ಉತ್ತರ ಕೊಡಬೇಕಿದೆ. ಸಿಎಂ ಕುರ್ಚಿ ಬಗ್ಗೆ ಯಾವುದೇ ಒಳ ಒಪ್ಪಂದವಿಲ್ಲ, ಐದು ವರ್ಷ ನಾನೇ ಸಿಎಂ ಎನ್ನುವ ಸಿದ್ದರಾಮಯ್ಯ ಅವರಿಗೆ ರಾಜ್ಯದ ಅಭಿವೃದ್ಧಿ, ಜನರ ಕಷ್ಟಕ್ಕಿಂತ ಸಿಎಂ ಕುರ್ಚಿ ಕಿತ್ತಾಟವೇ ಮುಖ್ಯವಾಗಿದೆ ಎಂದರು.

ಸಿಎಂ ಕುರ್ಚಿ ಉಳಿಸಿಕೊಳ್ಳಬೇಕು, ಡಿಸಿಎಂಗೆ ಸಿಎಂ ಕುರ್ಚಿ ಬೇಕು, ಮತ್ತೊಬ್ಬರಿಗೆ ಅಧ್ಯಕ್ಷರ ಕುರ್ಚಿ ಮೇಲೆ ಕಣ್ಣು. ಈ ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ. ಎರಡು ವರ್ಷಗಳ ಇವರ ಆಡಳಿತದ ವೈಖರಿ ನೋಡಿ ಜನ ಚರ್ಚೆ ಮಾಡಲು ಶುರು ಮಾಡಿದ್ದಾರೆ ಎಂದು ನಿಖಿಲ್‌ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳದಲ್ಲಿ ಭಾರೀ ಮಳೆ ಸಾಧ್ಯತೆ: ಈ ದಿನಗಳಲ್ಲಿ ಮೀನುಗಾರಿಕೆ ನಿಷೇಧ