ಈ ಚಟ್ನಿಪುಡಿ ಇದ್ದರೆ ಬಿಸಿ ಅನ್ನಕ್ಕೆ ಸೂಪರ್ ಆಗಿರುತ್ತೆ

ಮಳೆಗಾಲದಲ್ಲಿ ಸಾಂಬಾರ್, ರಸಂ ಯಾವುದೂ ಬೇಡ, ಬಿಸಿ ಅನ್ನಕ್ಕೆ ತುಪ್ಪ, ಚಿಟ್ನಿಪುಡಿ ಹಾಕಿಕೊಂಡು ಸೇವಿಸೋಣ ಎಂದರೆ ಇಲ್ಲಿದೆ ನೋಡಿ ಒಂದು ಗರಂ ಚಟ್ನಿಪುಡಿ ರೆಸಿಪಿ.

Photo Credit: Instagram

ಬಾಣಲೆಗೆ ತುಪ್ಪ ಹಾಕಿ ಹೊಟ್ಟು ಸಮೇತ ಇರುವ ಉದ್ದಿನ ಬೇಳೆ ಹಾಕಿ

ಇದಕ್ಕೆ ಧನಿಯಾ, ಜೀರಿಗೆ, ಹಾಕಿ ಚೆನ್ನಾಗಿ ಫ್ರೈ ಮಾಡಿ

ಈಗ ಇದಕ್ಕೆ ಕರಿಬೇವು, ಹುಣಸೆ ಹುಳಿ ಸೇರಿಸಿ ಬಿಸಿ ಮಾಡಿ ತೆಗೆದಿಡಿ

ಇದೇ ಬಾಣಲೆಗೆ ಕೆಂಪುಮೆಣಸು ಹಾಕಿ ಫ್ರೈ ಮಾಡಿ ಮಿಕ್ಸಿಗೆ ಹಾಕಿ

ಇದಕ್ಕೆ ಬೆಳ್ಳುಳ್ಳಿ, ರುಚಿಗೆ ತಕ್ಕ ಉಪ್ಪು ಸೇರಿಸಿ ನುಣ್ಣಗೆ ಪುಡಿ ಮಾಡಿ

ಈಗ ಖಾರ ಖಾರವಾದ ಚಟ್ನಿಪುಡಿ ಸಿದ್ಧವಾಗಿ ಬಿಸಿ ಅನ್ನಕ್ಕೆ ತುಪ್ಪ ಹಾಕಿ ಕಲಸಿ ಸೇವಿಸಿ

ಗಮನಿಸಿ: ಈ ಪಾಕ ವಿಧಾನ ವಿವಿಧ ಮೂಲಗಳಿಂದ ಆಧರಿಸಿದ್ದಾಗಿದೆ.

ವಿಟಮಿನ್ ಡಿ ಕೊರತೆಯಿದ್ದರೆ ಈ ರಾಯತ ತಿನ್ನಿ

Follow Us on :-