Select Your Language

Notifications

webdunia
webdunia
webdunia
webdunia

Video: ಆಪರೇಷನ್ ಸಿಂಧೂರ್ ಶೌರ್ಯದ ಬಗ್ಗೆ ಹೇಳಿದ್ರೆ ವಿಪಕ್ಷಗಳು ಮೇಜು ತಟ್ಟಲ್ಲ ಯಾಕೆ: ಅನುರಾಗ್ ಠಾಕೂರ್

Anurag Thakur

Krishnaveni K

ನವದೆಹಲಿ , ಮಂಗಳವಾರ, 29 ಜುಲೈ 2025 (10:37 IST)
Photo Credit: X
ನವದೆಹಲಿ: ಪಹಲ್ಗಾಮ್ ದಾಳಿ ಬಗ್ಗೆ ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆ ಬಗ್ಗೆ ವೇಳೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನಮ್ಮ ಸೇನೆಯ ಶೌರ್ಯದ ಬಗ್ಗೆ ಹೇಳುವಾಗ ವಿಪಕ್ಷ ಸದಸ್ಯರು ಮೇಜು ತಟ್ಟಲ್ಲ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಪಹಲ್ಗಾಮ್ ನಲ್ಲಿ ದಾಳಿ ಮಾಡಿದ ಉಗ್ರರು ಅಮಾಯಕರ ಪ್ಯಾಂಟ್ ಬಿಚ್ಚಿಸಿ ಧರ್ಮ ಕೇಳಿದ್ರು, ಕಲ್ಮಾ ಹೇಳು ಎಂದು ಬೆದರಿಸಿದ್ರು. ಬಳಿಕ ಧರ್ಮ ಯಾವುದು ಎಂದು ತಿಳಿದುಕೊಂಡು ಗುಂಡು ಹೊಡೆದರು. ಧರ್ಮದ ಆಧಾರದಲ್ಲಿಯೇ ಈ ದಾಳಿ ನಡೆದಿತ್ತು ಎನ್ನುವುದು ಸ್ಪಷ್ಟ.

ಹಾಗಿದ್ದರೂ ವಿಪಕ್ಷ ಸದಸ್ಯರು ಇದನ್ನು ಎಲ್ಲಿಯೂ ಹೇಳುವುದಿಲ್ಲ. ಧರ್ಮ ಕೇಳಿ ಹೊಡೆದರು ಎಂದು ಹೇಳಲ್ಲ ಯಾಕೆ? ಇಲ್ಲಿಯವರೆಗೆ ಸಂಸತ್ತಿನಲ್ಲಿ ಸಾಕಷ್ಟು ವಿಪಕ್ಷ ಸದಸ್ಯರು ಈ ದಾಳಿ ಬಗ್ಗೆ ಮಾತನಾಡಿದರು. ಆದರೆ ಒಬ್ಬರೂ ಇದನ್ನು ಹೇಳಲಿಲ್ಲ. ಇಷ್ಟು ಹೇಳಲು ವಿಪಕ್ಷ ಸದಸ್ಯರಿಗೆ ಏನು ಸಮಸ್ಯೆಯಾಗಿತ್ತು?

ರಕ್ಷಣಾ ಸಚಿವರು ನಮ್ಮ ಸೇನೆಯ ಶೌರ್ಯದ ಬಗ್ಗೆ ಪಟ್ಟಿ ಮಾಡಿ ಹೇಳುತ್ತಿದ್ದರು. ಆದರೆ ವಿಪಕ್ಷ ಸದಸ್ಯರು ಮೇಜು ತಟ್ಟಲಿಲ್ಲ. ಈ ಭಯೋತ್ಪಾದಕರು ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ ಹುನ್ನಾರದಿಂದಲೇ ದಾಳಿ ನಡೆಸಿದ್ದರು. ಆದರೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅದಕ್ಕೆ ತಕ್ಕ ತಿರುಗೇಟು ಕೊಟ್ಟಿತು ಎಂದು ಅನುರಾಗ್ ಠಾಕೂರ್ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪ್ರೆಗ್ನೆನ್ಸಿಗೆ ಟ್ರೈ ಮಾಡುತ್ತಿದ್ದರೆ ಮಹಿಳೆಯರು ಇದನ್ನು ಗಮನಿಸಬೇಕು ಅಂತಾರೆ ಡಾ ಪದ್ಮಿನಿ ಪ್ರಸಾದ್