ಬೆಂಗಳೂರು: ಇದೀಗ ಹಾಸನದಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಜನರಲ್ಲಿ ಆತಂಕ ಮೂಡಿದೆ. ಹೃದಯದ ಆರೋಗ್ಯ ಚೆನ್ನಾಗಿರಬೇಕೆಂದರೆ ಇದೊಂದು ವಸ್ತುವನ್ನು ಸೇವಿಸಬೇಡಿ ಎನ್ನುತ್ತಾರೆ ತಜ್ಞರು.
ಹಾಸನದಲ್ಲಿ ಒಂದೇ ತಿಂಗಳಲ್ಲಿ 20 ಕ್ಕೂ ಹೆಚ್ಚು ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣಗಳೇನು ಎಂದು ಈಗ ನಾನಾ ಚರ್ಚೆಯಾಗುತ್ತಿದೆ. ಸರ್ಕಾರ ಈಗಾಗಲೇ ತನಿಖೆಗೆ ಆದೇಶಿಸಿದೆ. ತಜ್ಞರ ಪ್ರಕಾರ ಮುಖ್ಯವಾಗಿ ನಮ್ಮ ಆಹಾರ ಶೈಲಿ ಬದಲಾಗಬೇಕು.
ರೆಡ್ ಮೀಟ್ ಸೇವನೆ ಮಾಡಬೇಡಿ
ರೆಡ್ ಮೀಟ್ ಅಥವಾ ಕೆಂಪು ಮಾಂಸ ಸೇವನೆಯಿಂದ ಹೃದಯಕ್ಕೆ ಅಪಾಯವಿದೆ. ರೆಡ್ ಮೀಟ್ ನಲ್ಲಿ ಅಧಿಕ ಕೊಬ್ಬಿನಂಶವಿದ್ದು ಇದು ಹೃದಯದ ಆರೋಗ್ಯಕ್ಕೆ ಖಂಡಿತಾ ಒಳ್ಳೆಯದಲ್ಲ ಎಂದು ಆರೋಗ್ಯ ತಜ್ಞರೇ ಹೇಳುತ್ತಾರೆ. ಅಧಿಕ ಕೊಬ್ಬಿನಂಶ ಕೊಲೆಸ್ಟ್ರಾಲ್ ಹೆಚ್ಚಳಕ್ಕೆ ಕಾರಣವಾಗಬಹುದು. ಇದರಿಂದ ಹೃದಯದ ರಕ್ತನಾಳಗಳಿಗೆ ಸಮಸ್ಯೆಯಾಗಬಹುದು. ರೆಡ್ ಮೀಟ್ ನಿಂದ ಕಬ್ಬಿಣದಂಶ, ಪ್ರೊಟೀನ್ ಸಿಗುವುದೂ ಅಷ್ಟೇ ನಿಜ. ಆದರೆ ಇದೆಲ್ಲದಕ್ಕಿಂತ ಹೃದಯದ ಆರೋಗ್ಯಕ್ಕೆ ತೊಂದರೆಯೇ ಹೆಚ್ಚು.