Select Your Language

Notifications

webdunia
webdunia
webdunia
webdunia

ಡಾ ಮಂಜುನಾಥ್ ಪ್ರಕಾರ ಹೃದಯಾಘಾತಕ್ಕೆ ಇದೇ ಕಾರಣಗಳು: ಇದನ್ನು ಪಾಲಿಸಿದ್ರೆ ಸಾಕು

Dr C Manjunath

Krishnaveni K

ಬೆಂಗಳೂರು , ಮಂಗಳವಾರ, 1 ಜುಲೈ 2025 (09:55 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಚಿಕ್ಕವಯಸ್ಸಿನವರಲ್ಲೂ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಹೃದ್ರೋಗ ತಜ್ಞರೂ ಆಗಿರುವ ಸಂಸದ ಡಾ ಮಂಜುನಾಥ್ ನಮ್ಮ ಹೃದಯ ಕಾಪಾಡಿಕೊಳ್ಳಲು ಯಾವತ್ತೂ ಹೇಳುವ ಈ ಟಿಪ್ಸ್ ತಪ್ಪದೇ ಪಾಲಿಸಬೇಕು.

ಹೃದಯ ರೋಗ ತಜ್ಞರೆಂದರೆ ಮೊದಲು ನೆನಪಿಗೆ ಬರುವವರೇ ಡಾ ಸಿ ಮಂಜುನಾಥ್. ಜಯದೇವ ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಅವರು ಮಾಡಿರುವ ಸಾಧನೆಗಳೇ ಅಂತಹದ್ದು. ಇದೀಗ ಸಂಸದರಾಗಿದ್ದರೂ ವೈದ್ಯ ವೃತ್ತಿಯನ್ನು ಸಂಪೂರ್ಣವಾಗಿ ಬಿಟ್ಟಿಲ್ಲ. ಇತ್ತೀಚೆಗೆ ಯುವಜನಾಂಗದಲ್ಲೂ ಕಾಡುತ್ತಿರುವ ಹೃದಯಾಘಾತದ ಬಗ್ಗೆ ಅವರು ಅಮೂಲ್ಯ ಸಲಹೆಗಳನ್ನು ಹಿಂದಿನಿಂದಲೂ ನೀಡುತ್ತಾ ಬಂದಿದ್ದಾರೆ.

-ರಕ್ತದೊತ್ತಡ ಬಾರದಂತೆ ನಮ್ಮ ಜೀವನ ಶೈಲಿಯಿರಬೇಕು. ರಕ್ತದೊತ್ತಡವೇ ಹೃದಯಾಘಾತಕ್ಕೆ ಪ್ರಮುಖ ಕಾರಣವಾಗಬಹುದು.
-ಮಧುಮೇಹವೂ ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ. ಹೀಗಾಗಿ ಆಹಾರ ಶೈಲಿಯ ಮೇಲೂ ನಿಯಂತ್ರಣವಿರಬೇಕು.
-ಕೊಲೆಸ್ಟ್ರಾಲ್ ಇರುವ ಆಹಾರವನ್ನು ಸೇವಿಸಬಾರದು. ಇದರಿಂದ ಹೃದ್ರೋಗ ಬರುವ ಸಾಧ್ಯತೆ ಹೆಚ್ಚು. ಆಹಾರ ಶೈಲಿ ಆರೋಗ್ಯಯುತವಾಗಿರಬೇಕು.
-ಅತಿಯಾದ ಆಸೆ ಇರಬಾರದು. ಮನುಷ್ಯನಿಗೆ ಆಸೆ ಸಹಜ. ಆದರೆ ಅದು ಅತಿಯಾದರೆ ದೇಹಾರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.
-ಮಾನಸಿಕ ಒತ್ತಡ, ಟೆನ್ಷನ್, ಇನ್ನೊಬ್ಬರ ಬಗ್ಗೆ ಕೆಡುಕು ಯೋಚನೆ ಬಿಡಬೇಕು. ಮಾನಸಿಕವಾಗಿ ಶಾಂತಿ, ನೆಮ್ಮದಿ, ಸಂತೋಷವಿದ್ದರೆ ಹೃದಯವೂ ಚೆನ್ನಾಗಿರುತ್ತದೆ.
-ಪ್ರತಿನಿತ್ಯ ವಾಕಿಂಗ್, ವ್ಯಾಯಾಮ ಮಾಡಬೇಕು. ವ್ಯಾಯಾಮ ಅತಿಯಾದರೂ ಕಷ್ಟ. ನಮ್ಮ ದೇಹ ತಾಳಿಕೊಳ್ಳುವಷ್ಟು ದೈಹಿಕ ಕಸರತ್ತು, ವಾಕಿಂಗ್ ಹೃದಯವನ್ನೂ ಕಾಪಾಡುತ್ತದೆ.

ಇವಿಷ್ಟು ಮಾಡಿಕೊಂಡರೆ ನಮ್ಮ ಹೃದಯದ ಆರೋಗ್ಯವೂ ಚೆನ್ನಾಗಿರುತ್ತದೆ ಎಂಬುದು ಡಾ ಸಿ ಮಂಜುನಾಥ್ ಅವರ ಅಭಿಪ್ರಾಯವಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ: ಜೀವ ಕಾಪಾಡಿದ ಡ್ಯೂಟಿ ಡಾಕ್ಟರ್