Select Your Language

Notifications

webdunia
webdunia
webdunia
webdunia

ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಬಂದಿರುವುದೇ ಕಪ್ಪ ಕೇಳಕ್ಕೆ: ಸಿಟಿ ರವಿ

ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ

Sampriya

ಉಡುಪಿ , ಸೋಮವಾರ, 30 ಜೂನ್ 2025 (20:38 IST)
ಉಡುಪಿ: ರಾಜ್ಯಕ್ಕೆ ಆಗಮಿಸಿರುವ ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಜನರ ಕಷ್ಟ ಕೇಳಲು ಬಂದಿರುವುದಲ್ಲ,  ಕಪ್ಪ ಕೇಳಲು ಬಂದಿರುವುದಾಗಿ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಮೊಗಲರ ಆಳ್ವಿಕೆಯ ಹಾಗೇ ಕಾಂಗ್ರೆಸ್‌ನಲ್ಲೂ ಕಪ್ಪ ಕೊಡುವ ವಾಡಿಕೆಯಿದೆ. ರಾಜ್ಯ ಕಾಂಗ್ರೆಸ್‌ನವರು ಕೇಂದ್ರದ ಕಾಂಗ್ರೆಸ್‌ಗೆ ಕಪ್ಪ ಕೊಡಬೇಕು. ಕೊಡದಿದ್ದರೆ ಅವರು ಪದಚ್ಯುತಿಗೊಳ್ಳುತ್ತಾರೆ. 

 ಹಿಂದೆ ಕಪ್ಪ ಕೊಡದ ಕಾರಣಕ್ಕೆ ವೀರೇಂದ್ರ ಪಾಟೀಲ ಅವರನ್ನು ಪಕ್ಷದಿಂದ ಪದಚ್ಯುತಿಗೊಳಿಸಲಾಗಿತ್ತು. ಯಾರು ಅಧಿಕಾರದಲ್ಲಿ ಉಳಿಯಬೇಕೋ ಅವರು ಕಪ್ಪ ಕೊಡುವ ಪರಿಪಾಠ ಇಟ್ಟುಕೊಂಡಿದ್ದಾರೆ. ಸುರ್ಜೇವಾಲ ಅವರಿಗೆ ಜನರ ಕಷ್ಟ ಕೇಳುವ ಅಭ್ಯಾಸ ಇಲ್ಲ ಎಂದು ಹೇಳಿದರು.


Share this Story:

Follow Webdunia kannada

ಮುಂದಿನ ಸುದ್ದಿ

ತೆಲಂಗಾಣದ ಎಲ್ಲ ಜಿಲ್ಲೆಗಳಲ್ಲಿ ಮಿಂಚು, ಗುಡುಗು ಸಹಿತ ಭಾರೀ ಮಳೆಯ ಮುನ್ಸೂಚನೆ