Select Your Language

Notifications

webdunia
webdunia
webdunia
webdunia

ಹೃದಯಾಘಾತವಾಗುವಾಗ ಮುಖದಲ್ಲಿ ಈ ಬದಲಾವಣೆಯಾಗುತ್ತದೆ

Heart attack

Krishnaveni K

ಬೆಂಗಳೂರು , ಮಂಗಳವಾರ, 1 ಜುಲೈ 2025 (15:12 IST)
Photo Credit: Instagram
ಬೆಂಗಳೂರು: ಹಾಸನದಲ್ಲಿ ಇತ್ತೀಚೆಗೆ ಸರಣಿ ಹೃದಯಾಘಾತವಾಗುತ್ತಿರುವುದು ಜನರಲ್ಲಿ ಭೀತಿ ಆವರಿಸಿದೆ. ಹೃದಯಾಘತದ ಲಕ್ಷಣಗಳು ಕಂಡುಬರುತ್ತಲೇ ವೈದ್ಯಕೀಯ ಚಿಕಿತ್ಸೆ ಪಡೆದರೆ ಬದುಕುಳಿಯುವ ಸಾಧ್ಯತೆಯೂ ಇದೆ. ಹೃದಯಾಘಾತವಾದಾಗ ಮುಖದಲ್ಲಿ ಯಾವೆಲ್ಲಾ ಬದಲಾವಣೆಯಾಗುತ್ತದೆ ನೋಡೋಣ.

ಹೃದಯ ಎನ್ನುವುದು ನಮ್ಮ ದೇಹದ ಬಹುಮುಖ್ಯ ಅಂಗ. ಇದರ ಕಾರ್ಯನಿರ್ವಹಣೆಯಲ್ಲಿ ಕೊಂಚ ಏರುಪೇರಾದರೂ ಪ್ರಾಣಕ್ಕೇ ಕುತ್ತು. ಹೃದಯಾಘಾತಕ್ಕೆ ಒತ್ತಡದ ಜೀವನ ಶೈಲಿ, ಮಧುಮೇಹ, ರಕ್ತದೊತ್ತ, ಕೊಲೆಸ್ಟ್ರಾಲ್, ಧೂಮಪಾನ ಮತ್ತು ವಂಶವಾಹೀ ಕಾರಣಗಳಿರಬಹುದು. ಹೃದಯಾಘಾತಕ್ಕೆ ಮುನ್ನ ಮನುಷ್ಯನಲ್ಲಿ ಕೆಲವು ಲಕ್ಷಣಗಳು ಕಂಡುಬರುತ್ತವೆ.

ಮುಖದಲ್ಲಿ ಏನು ಬದಲಾವಣೆಯಾಗುತ್ತದೆ?
-ಮುಖದಲ್ಲಿ ವಿಪರೀತ ಬೆವರಿಳಿಯಬಹುದು.
-ಮುಖ ಒಂದು ರೀತಿ ಜೋತು ಬಿದ್ದಂತೆ ಆಗುವ ಸಾಧ್ಯತೆಯಿದೆ.
-ದವಡೆ ನೋವು ಅಥವಾ ತಲೆನೋವು ಕಾಣಿಸಿಕೊಳ್ಳಬಹುದು.
-ಕಣ್ಣುಗಳು ಮಂಜು ಮಂಜಾದಂತೆ, ವಿಪರೀತ ಸುಸ್ತಾದವರಂತೆ ಕಾಣುತ್ತೀರಿ.
-ಮುಖ ಒಂದು ರೀತಿ ನೀಲಿಗಟ್ಟಿದಂತೆ ಆಗುವ ಸಾಧ್ಯತೆಯಿದೆ.
-ಇನ್ನು ಕೆಲವರಿಗೆ ರಕ್ತ ಹೀನವಾದಂತೆ, ಪೇಲವವಾದಂತೆ ಮುಖದಲ್ಲಿ ಲಕ್ಷಣಗಳು ಕಂಡುಬರುತ್ತದೆ.

ಇದಲ್ಲದೆ ದೇಹದ ಇತರೆ ಭಾಗದಲ್ಲಿ ಎದೆನೋವು, ವಾಕರಿಕೆ, ಹೊಟ್ಟೆನೋವು, ಕಾಲು ಅಥವಾ ಕೈ ನೋವು ಕಂಡುಬಂದರೂ ಹೃದಯಾಘಾತದ ಲಕ್ಷಣಗಳಾಗಿರುತ್ತವೆ. ಅಂತಹ ಸಂದರ್ಭದಲ್ಲಿ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೇರೊಬ್ಬನ ಜತೆ ನಿಶ್ಚಿತಾರ್ಥ: ಆಟೊದಲ್ಲೇ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪ್ರೇಮಿಗಳು ಪತ್ತೆ