ಬೆಳಗಾವಿ: ಪ್ರೇಮಿಗಳಿಬ್ಬರು ಆಟೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಯರಗಟ್ಟಿ ಸಮೀಪದಲ್ಲಿರುವ, ಗೋಕಾಕ ತಾಲ್ಲೂಕಿನ ಹಿರೇನಂದಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.
ಆತ್ಮಹತ್ಯೆಗೆ ಶರಣಾದವರನ್ನು ಸವದತ್ತಿ ತಾಲ್ಲೂಕಿನ ಮುನವಳ್ಳಿ ಗ್ರಾಮದವರಾದ ರಾಘವೇಂದ್ರ ನಾರಾಯಣ ಜಾಧವ (28) ಹಾಗೂ ರಂಜಿತಾ ಅಡಿವೆಪ್ಪ ಚೌಬಾರಿ (25) ಎಂದು ಗುರುತಿಸಲಾಗಿದೆ.
ರಾಘವೇಂದ್ರ ಹಾಗೂ ರಂಜಿತಾ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆದರೆ ಈಚೆಗೆ ರಂಜಿತಾಗೆ ಬೇರೊಬ್ಬ ಯುವಕನ ಜತೆ ನಿಶ್ಚಿತಾರ್ಥವಾಯಿತು ಎನ್ನಲಾಗಿದೆ.
ಇದೀಗ ಇಬ್ಬರ ಮೃತದೇಹ ಆಟೋದಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇಬ್ಬರ ದೇಹಗಳೂ ಕಾಲು ಮುದುಡಿಕೊಂಡು ಕೆಳಗೆ ಇಳಿಬಿಟ್ಟಂಥ ಸ್ಥಿತಿಯಲ್ಲಿ ಪತ್ತೆಯಾಗಿವೆ.
ಗೋಕಾಕ ಗ್ರಾಮೀಣ ಪಿಎಸ್ಐ ಕಿರಣ ಮೊಹಿತೆ ಪರಿಶಿಲನೆ ನಡೆಸಿದರು.