Publish Date: Fri, 27 Jun 2025 (11:20 IST)
Updated Date: Fri, 27 Jun 2025 (11:24 IST)
ಒಬ್ಬ ವ್ಯಕ್ತಿಯು ತನ್ನ ನಂತರ ತನ್ನ ಚಿರ ಮತ್ತು ಚರಾಸ್ಥಿಗಳು ಯಾರ ಪಾಲಾಗಬೇಕು ಎಂದು ಮೊದಲೇ ನಿರ್ಣಯಿಸಿ ಹಸ್ತಾಂತರಿಸಲು ವಿಲ್ ಬರೆಸಲಾಗುತ್ತದೆ. ವಿಲ್ ಬರೆಯಲು ಅದರದ್ದೇ ಆದ ನಿಯಮಗಳಿವೆ. ಅದನ್ನು ಬರೆಸಲು ಏನೆಲ್ಲಾ ಮಾಡಬೇಕಾಗುತ್ತದೆ ಇಲ್ಲಿದೆ ವಿವರ.
ವಿಲ್ ಬರೆಯಲು ಯಾರು ಅರ್ಹರು
ಭಾರತದಲ್ಲಿ 21 ವರ್ಷಕ್ಕಿಂತ ಮೇಲ್ಪಟ್ಟ ಪುರುಷ ಅಥವಾ ಮಹಿಳೆ ಯಾರೇ ಆದರೂ ವಿಲ್ ಬರೆಯಲು ಅರ್ಹರಾಗಿರುತ್ತಾರೆ. ಅವರು ತಮ್ಮ ಸ್ವಯಾರ್ಜಿತ ಆಸ್ತಿಗಳನ್ನು ಯಾರಿಗೆ ಸೇರಬೇಕು ಎಂದು ಬರೆಯುವ ದಾಖಲೆ ಇದಾಗಿರುತ್ತದೆ. ಒಂದು ಸ್ಟಾಂಪ್ ಪೇಪರ್ ಮೇಲೆ ನಿಮ್ಮದೇ ಕೈ ಬರಹದಲ್ಲಿ ವಿಲ್ ಬರೆದರೆ ಸೂಕ್ತ. ಇಲ್ಲವೇ ಕಂಪ್ಯೂಟರ್ ಮೂಲಕವೂ ಟೈಪ್ ಮಾಡಬಹುದು. ವಿಲ್ ಬರೆಯುವಾಗ ಒಬ್ಬ ಸಾಕ್ಷಿ ಬೇಕಾಗುತ್ತದೆ. ಸಾಕ್ಷಿಯ ಸಮ್ಮುಖದಲ್ಲಿ ಬರೆದ ವಿಲ್ ಗೆ ಸಹಿ ಹಾಕಿ ನೋಟರಿ ಮಾಡಿಸಿಕೊಂಡು ಮಾನ್ಯತೆ ಪಡೆಯಬೇಕಾಗುತ್ತದೆ.
ಆಸ್ತಿ ಕಾರ್ಯನಿರ್ವಾಹಕರನ್ನುನೇಮಿಸಬೇಕು
ನಿಮ್ಮ ವಿಲ್ ನಲ್ಲಿ ತಿಳಿಸಿದಂತೆ ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ಸರಿಯಾಗಿ ನಿರ್ವಹಿಸಲು ಒಬ್ಬ ಕಾರ್ಯನಿರ್ವಾಹಕರನ್ನು ನೇಮಿಸಬೇಕು.
ದಿನಾಂಕ ಮತ್ತು ಸ್ಥಳ
ವಿಲ್ ನಲ್ಲಿ ದಿನಾಂಕ ಮತ್ತು ಸ್ಥಳ ಕಡ್ಡಾಯವಾಗಿ ನಮೂದಿಸಬೇಕು.
ಆಸ್ತಿಗಳ ವಿವರ
ಮೊದಲು ನಿಮ್ಮಲ್ಲಿರುವ ಎಲ್ಲಾ ಚರ ಮತ್ತು ಸ್ಥಿರಾಸ್ತಿಗಳನ್ನು ಪಟ್ಟಿ ಮಾಡಬೇಕು. ಚಿನ್ನ, ಭೂಮಿ, ಹಣ ಸೇರಿದಂತೆ ಎಲ್ಲವನ್ನೂ ಪಟ್ಟಿ ಮಾಡಿರಬೇಕು.
ಯಾರಿಗೆ ಸೇರಬೇಕು
ನಿಮ್ಮ ನಂತರ ಆಸ್ತಿ ಯಾರಿಗೆ ಸೇರಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಬೇಕು. ನಿಮ್ಮ ಆಸ್ತಿಗೆ ಹಕ್ಕುದಾರರನಾಗಿರುವವರ ಜೊತೆ ನಿಮ್ಮ ಸಂಬಂಧ, ಅವರ ಪೂರ್ಣ ವಿಳಾಸ, ಮಾಹಿತಿ ನೀಡಬೇಕಾಗುತ್ತದೆ. ಒಂದು ವೇಳೆ ಅವರು ಅಪ್ರಾಪ್ತರಾಗಿದ್ದರೆ ಪ್ರಾಪ್ತರಾಗುವವರೆಗೆ ಒಬ್ಬ ಪಾಲಕರನ್ನು ನೇಮಿಸಬೇಕಾಗುತ್ತದೆ.
ಇದೆಲ್ಲವನ್ನೂ ಒಬ್ಬ ಲಾಯರ್ ಮುಖಾಂತರ ಮಾಡಿಸಿ ನೋಟರಿ ಮಾಡಿಸಿಕೊಂಡರೆ ನಿಮ್ಮ ವಿಲ್ ಗೆ ಕಾನೂನಿನ ಮಾನ್ಯತೆ ಸಿಗುತ್ತದೆ.