Publish Date: Sat, 14 Jun 2025 (08:47 IST)
Updated Date: Sat, 14 Jun 2025 (08:51 IST)
ಬೆಂಗಳೂರು: ಸಾಮಾನ್ಯವಾಗಿ ನಾವು ಎಲ್ಲೇ ಪ್ರಯಾಣ ಮಾಡುವಾಗಲೂ ಆದಷ್ಟು ಎದುರು ಭಾಗ, ಕಿಟಿಕಿ ಪಕ್ಕದ ಸೀಟ್ ಗಾಗಿ ಆಸೆ ಪಡುತ್ತೇವೆ. ಆದರೆ ವಿಮಾನದಲ್ಲಿ ಯಾವಾಗಲೂ ಯಾವ ಸೀಟ್ ನಲ್ಲಿ ಕೂತರೆ ಸೇಫ್ ಇಲ್ಲಿದೆ ನೋಡಿ ವಿವರ.
ಅಹಮ್ಮದಾಬಾದ್ ನಲ್ಲಿ ನಡೆದ ಘೋರ ವಿಮಾನ ದುರಂತದಲ್ಲಿ ಬದುಕುಳಿದಿದ್ದು ಒಬ್ಬನೇ ಒಬ್ಬ ಪ್ರಯಾಣಿಕ. ಆತ ಕೂತಿದ್ದು ಎಮರ್ಜೆನ್ಸಿ ಎಕ್ಸಿಟ್ ಬಳಿ. ಹೀಗಾಗಿ ಆತ ಅಪಾಯ ಅರಿತು ಎಮರ್ಜೆನ್ಸಿ ಎಕ್ಸಿಟ್ ನಿಂದ ಹೊರಬಂದು ಪ್ರಾಣ ಉಳಿಸಿಕೊಂಡಿದ್ದ.
ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣ ಮಾಡುವಾಗ ಎಲ್ಲರೂ ಕಿಟಿಕಿ ಪಕ್ಕದ ಆಸನವನ್ನು ಆಯ್ಕೆ ಮಾಡುತ್ತಾರೆ. ಇದರಿಂದ ಆಕಾಶ ಮತ್ತು ಭೂಮಿಯ ಸುಂದರ ದೃಶ್ಯವನ್ನು ಸವಿಯಬಹುದು ಎಂಬುದು ಎಲ್ಲರ ಉದ್ದೇಶವಾಗಿರುತ್ತದೆ. ಆದರೆ ಒಂದು ವಿಮಾನ ಪ್ರಯಾಣದ ವೇಳೆ ನಾವು ಸುರಕ್ಷತೆಗೂ ಗಮನಕೊಡಬೇಕಾಗುತ್ತದೆ.
2007 ರ ಅಧ್ಯಯನವೊಂದರ ಪ್ರಕಾರ ನಾವು ವಿಮಾನದ ಹಿಂದಿನ ಭಾಗದಲ್ಲಿ ಕೂರುವುದು ಅತ್ಯಂತ ಸುರಕ್ಷಿತ ಎನ್ನಲಾಗಿದೆ. ಹಿಂದಿನ ಸೀಟ್ ಗಳಲ್ಲಿ ಕೂತರೆ ಅಪಘಾತದ ಸಂದರ್ಭದಲ್ಲಿ ರಕ್ಷಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಅದರಲ್ಲೂ ವಿಂಗ್ ಸೆಕ್ಷನ್ ನಲ್ಲಿ ಕೂರುವುದು ಸುರಕ್ಷಿತ ಎನ್ನಲಾಗಿದೆ.
ಹಿಂದಿನ ಸೀಟ್ ನಲ್ಲಿ ಕೂತರೂ ಪ್ರಾಣಕ್ಕೆ ಅಪಾಯವಿಲ್ಲ ಎಂದು ಗ್ಯಾರಂಟಿಯೇನೂ ಅಲ್ಲ. ಆದರೆ ಮುಂಭಾಗಕ್ಕೆ ಹೋಲಿಸಿದರೆ ಹಿಂದಿನ ಸೀಟ್ ಗಳಲ್ಲಿ ಪ್ರಾಣ ಉಳಿಸಿಕೊಳ್ಳಲು ಹೆಚ್ಚು ಅವಕಾಶ ಸಿಗುತ್ತದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ ಮುಂದಿನ ಸಾರಿ ವಿಮಾನ ಟಿಕೆಟ್ ಬುಕ್ ಮಾಡುವಾಗ ನಿಮ್ಮ ಸುರಕ್ಷತೆ ಬಗ್ಗೆಗಮನ ಕೊಡಿ.