Select Your Language

Notifications

webdunia
webdunia
webdunia
webdunia

Glance AI App: ಆನ್ ಲೈನ್ ನಲ್ಲಿ ಡ್ರೆಸ್ ಖರೀದಿಸುವಾಗ ಟ್ರಯಲ್ ನೋಡುವುದು ಇನ್ನು ಸುಲಭ

Dress trail app

Krishnaveni K

ಬೆಂಗಳೂರು , ಶುಕ್ರವಾರ, 23 ಮೇ 2025 (10:55 IST)
Photo Credit: AI Image
ಬೆಂಗಳೂರು: ಆನ್ ಲೈನ್ ನಲ್ಲಿ ಡ್ರೆಸ್ ಖರೀದಿ ಮಾಡುವಾಗ ಟ್ರಯಲ್ ನೋಡಲು ಸಾಧ್ಯವಾಗುವುದಿಲ್ಲ ಎನ್ನುವ ಹಾಗೆಯೇ ಇಲ್ಲ. ಈಗ ಎಐ ಟೆಕ್ನಾಲಜಿ ಎಷ್ಟು ಅಭಿವೃದ್ಧಿಯಾಗಿದೆ ಎಂದರೆ ಆನ್ ಲೈನ್ ನಲ್ಲೇ ಡ್ರೆಸ್ ಕೂಡಾ ಟ್ರಯಲ್ ನೋಡಬಹುದು. ಅದಕ್ಕೆಂದೇ ಸೀಮಿತವಾದ ಎಐ ಆಪ್ ಒಂದು ಬಂದಿದೆ.
 

ಒಂದು ಬಟ್ಟೆ ಖರೀದಿಸುವಾಗ ಹತ್ತು ವಿಭಿನ್ನ ಶೈಲಿಯನ್ನು ಟ್ರಯಲ್‌ ನೋಡುತ್ತೇವೆ. ಕನ್ನಡಿಯಲ್ಲಿ ನಮ್ಮನ್ನು ನಾವು ಹಲವು ಬಾರಿ ನೋಡಿಕೊಳ್ಳುತ್ತೇವೆ. ಆ ಬಳಿಕ ನಮ್ಮ ಜೊತೆಗೆ ಬಂದವರ ಫೀಡ್‌ಬ್ಯಾಕ್‌ ಕೂಡ ಪಡೆಯುತ್ತೇವೆ. ಹೀಗಾಗಿ ಯಾವುದೇ ಶಾಪಿಂಗ್‌ ಮಾಲ್‌ನಲ್ಲಿ ಟ್ರಯಲ್‌ ರೂಮ್‌ ಅತ್ಯಂತ ಜನನಿಬಿಡ ಪ್ರದೇಶವಾಗಿರುತ್ತದೆ. ಆದರೆ ಈಗಿನ AI ಯುಗದಲ್ಲಿ ಇದಕ್ಕೆ ಪರಿಹಾರ ಸಿಗುವ ನಿಟ್ಟಿನಲ್ಲಿ ಒಂದು ಪ್ರಯತ್ನ ಶುರುವಾಗಿದೆ.

ಈಗ ನಾನು ಕೆಲಸ ಮಾಡುತ್ತಿರುವ Glance ಸಂಸ್ಥೆಯು ಆನ್‌ಲೈನ್‌ ಶಾಪಿಂಗ್‌ಗೆ ಟ್ರಯಲ್‌ ರೂಮ್‌ ಪರಿಚಯಿಸುತ್ತಿದೆ. Glance AI ಎನ್ನುವ ಅಪ್ಲಿಕೇಷನ್‌ ಮೂಲಕ ಆನ್‌ಲೈನ್‌ ಶಾಪಿಂಗ್‌ಗೆ ಹೊಸ ರೂಪ ನೀಡುತ್ತಿದೆ. ಬಟ್ಟೆಯ ಮೇಲೆ ಅತಿಯಾದ ವ್ಯಾಮೋಹ ಇರುವ ಶಾಪಿಂಗ್‌ ಪ್ರಿಯರಿಗೆ Glance AI ಅದ್ಭುತ ತಾಣವಾಗಿ ರೂಪುಗೊಳ್ಳಬಹುದು.

Glance AI ಹೆಸರಲ್ಲಿ ಎಲ್ಲ ಪ್ಲೇಸ್ಟೋರ್‌ಗಳಲ್ಲಿ ಅಪ್ಲಿಕೇಷನ್‌ ಲಭ್ಯವಿದ್ದು, ನಿಮ್ಮಿಷ್ಟದ ಬಟ್ಟೆಯನ್ನು ವರ್ಚುವಲ್‌ ಟ್ರಯಲ್‌ ನೋಡಿ, ಅಲ್ಲಿಯೇ ಖರೀದಿಸಬಹುದಾಗಿದೆ. ಸದ್ಯಕ್ಕೆ ಇದು ಆರಂಭಿಕ ಹಂತದಲ್ಲಿದ್ದು, ಶೀಘ್ರದಲ್ಲಿಯೇ ಇನ್ನಷ್ಟು ಹೊಸ ಫೀಚರ್‌ಗಳು ಸೇರಿಕೊಳ್ಳಲಿವೆ. ಹಾಗೆಯೇ Glance AI ತಾಣವು ಇ-ಕಾಮರ್ಸ್‌ನಲ್ಲಿ ಹೊಸ ಕ್ರಾಂತಿ ಮಾಡುವ ಗುರಿಯನ್ನು ಹೊಂದಿದೆ.

ಅಂದ್ಹಾಗೆ ಈ ಅಪ್ಲಿಕೇಷನ್‌ನ್ನು ಡೌನ್‌ಲೋಡ್‌ ಮಾಡಿದ ಬಳಿಕ, ನಿಮ್ಮ ಸೆಲ್ಫಿ ಅಥವಾ ಮುಖ ಸರಿಯಾಗಿ ಕಾಣುವ ಫೋಟೋವನ್ನು ಅಪ್ಲೋಡ್‌ ಮಾಡಬೇಕು. ಬಳಿಕ ಎರಡೂವರೆ ನಿಮಿಷದ ಬಳಿಕ ವಿವಿಧ ಡ್ರೆಸ್‌ಗಳಲ್ಲಿ ನೀವು ಹೇಗೆ ಕಾಣಿಸುತ್ತೀರಿ ಎನ್ನುವ ಲುಕ್‌ನ್ನು ಕ್ರಿಯೇಟ್‌ ಮಾಡಿ ಕೊಡುತ್ತದೆ. ಅಲ್ಲಿಗೆ ನೀವು ಖರೀದಿಸಲಿರುವ ಬಟ್ಟೆಯಲ್ಲಿ ಹೇಗೆ ಕಾಣಿಸುತ್ತೀರಿ ಎನ್ನುವ ಲುಕ್‌ ನಿಮಗೆ ಲಭ್ಯವಾಗುತ್ತದೆ. ಮನೆಗೆ ಬಟ್ಟೆ ಬಂದ ಬಳಿಕ ಟ್ರಯಲ್‌ ನೋಡುವ ಬದಲಿಗೆ, ನಿಮ್ಮ ಮೊಬೈಲ್‌ನಲ್ಲಿಯೇ ಪರಿಶೀಲಿಸಿಕೊಳ್ಳಬಹುದು. ಅದಲ್ಲದೇ ಆ ಹೊಸ ಲುಕ್‌ನ್ನು ಡೌನ್‌ಲೋಡ್‌ ಮಾಡಿಕೊಂಡು ನಿಮ್ಮ ಸ್ನೇಹಿತರಿಗೆ ತೋರಿಸಿ ಫೀಡ್‌ಬ್ಯಾಕ್‌ ಪಡೆದುಕೊಳ್ಳಬಹುದು. ನಿಮ್ಮ ಅಥವಾ ನಿಮ್ಮವರ ಇಷ್ಟದ ಲುಕ್‌ನಲ್ಲಿ ಬಟ್ಟೆ ಖರೀದಿಸಬಹುದು. ಇದರ ಜತೆಗೆ ನಿಮ್ಮ ಮೈಕಟ್ಟಿಗೆ ಪೂರಕವಾಗಿ ಟ್ರೆಂಡಿಂಗ್‌ ಬಟ್ಟೆಗಳನ್ನು ರೆಕಮಂಡ್‌ ಕೂಡ ಮಾಡುತ್ತದೆ. ಹಾಗೆಯೇ ಎಲ್ಲ ಶಾಪಿಂಗ್‌ ಪ್ರಿಯರ ʼಈ ಬಣ್ಣದಲ್ಲಿ ಬೇರೆ ಪ್ಯಾಟರ್ನ್‌, ಈ ಪ್ಯಾಟರ್ನ್‌ನಲ್ಲಿ ಬೇರೆ ಬಣ್ಣʼವನ್ನು ಆನ್‌ಲೈನ್‌ನಲ್ಲಿ ಟ್ರಯಲ್‌ ನೋಡುವ ಮೂಲಕ ಖರೀದಿಸಬಹುದು. ಹಾಗೆಯೆ ಅಪ್ಲಿಕೇಷನ್‌ನಲ್ಲಿ ಕಾಣಿಸುವ ಪ್ರತಿ ಬಟ್ಟೆಯನ್ನೂ ನೀವು ಟ್ರಯಲ್‌ ನೋಡಬಹುದು. ಅಲ್ಲಿ ಲಭ್ಯವಿರುವ ʼTry meʼ ಆಪ್ಶನ್‌ ಬಳಸಿ, ಇತರ ಬಟ್ಟೆಗಳಿಗೂ ಟ್ರಯಲ್‌ ಮಾಡಬಹುದು.

Glance AI ಅಪ್ಲಿಕೇಷನ್‌ನ್ನು ಯಾವುದೇ ಇ-ಕಾಮರ್ಸ್‌ ತಾಣದ ರೀತಿ ಕೆಲಸ ಮಾಡುವುದಿಲ್ಲ. ಬದಲಾಗಿ ವಿವಿಧ ಇ-ಕಾಮರ್ಸ್‌ ತಾಣ ಅಥವಾ ಗೂಗಲ್‌ನಲ್ಲಿ ಲಭ್ಯವಿರುವ ಬಟ್ಟೆಗಳನ್ನು ನಿಮ್ಮ ಲುಕ್‌ಗೆ ಪೂರಕವಾಗಿ ಆಯ್ಕೆ ಮಾಡಿ ಆಪ್ಶನ್‌ನ್ನು ನೀಡುತ್ತದೆ. ಅಂತಿಮವಾಗಿ ನಿಮಗೆ ಇಷ್ಟವಾದ ಬಟ್ಟೆಯನ್ನು Glance AIನಿಂದ ಖರೀದಿಸಲು Buy Now ಆಪ್ಶನ್‌ ನೀಡಲಾಗಿದೆ. ಅಲ್ಲಿ ಕ್ಲಿಕ್‌ ಮಾಡಿದಾಗ ಬಟ್ಟೆ ಲಭ್ಯವಿರುವ ಮೂಲ ಇ-ಕಾಮರ್ಸ್‌ ತಾಣಕ್ಕೆ ರಿಡೈರೆಕ್ಟ್‌ ಆಗುತ್ತದೆ. ಆದರೆ ಬಟ್ಟೆಯ ಬೆಲೆ ಅಥವಾ ಡಿಸ್ಕೌಂಟ್‌ಗಳ ಮಾಹಿತಿಯು Glance ಅಪ್ಲಿಕೇಷನ್‌ನಲ್ಲಿಯೇ ಕಾಣಿಸುತ್ತದೆ. ಇದೆಲ್ಲದರ ಜತೆಗೆ ನೇರವಾಗಿ ನಿಮಗಿಷ್ಟವಾದ ಇಮೇಜ್‌ನ್ನು ಲಾಕ್‌ಸ್ಕ್ರಿನ್ ಆಗಿಯೂ ಬದಲಾಯಿಸಬಹುದು.

ಹಾಗೆಯೇ ಇತರ ಇ-ಕಾಮರ್ಸ್ ತಾಣದಲ್ಲಿ ಶೀಘ್ರವೇ Glance AI ಎನೇಬಲ್ ಮಾಡಲಾಗುತ್ತಿದೆ. ಇದರಿಂದ ನೀವು ಆ ತಾಣಕ್ಕೆ ಭೇಟಿ ನೀಡಿದಾಗ ಅಲ್ಲಿ ಬೇರೆ ಮಾಡೆಲ್‌ಗಳ ಮೂಲಕ ಬಟ್ಟೆ ನೋಡುವ ಬದಲಿಗೆ ನಿಮ್ಮ ಮೂಲಕವೇ ನೋಡಬಹುದು.

-ರಾಜೀವ್ ಹೆಗಡೆ

Share this Story:

Follow Webdunia kannada

ಮುಂದಿನ ಸುದ್ದಿ

Ranya Rao case: ಪರಮೇಶ್ವರ್ ಸಾಮಾನ್ಯರ ಮದುವೆಗೆ ಬಂದ್ರೂ 20 ಲಕ್ಷ ಗಿಫ್ಟ್ ಕೊಡ್ತಾರಾ