ನವದೆಹಲಿ: ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಘಿಬ್ಲಿ ಎಐ ಅನಿಮೇಷನ್ ಫೋಟೋ ಅಪ್ ಲೋಡ್ ಮಾಡುವುದು ಸುರಕ್ಷಿತವೇ? ಇಲ್ಲಿದೆ ವಿವರ.
ಸೋಷಿಯಲ್ ಮೀಡಿಯಾದಲ್ಲಿ ಈಗ ಯಾರದ್ದೇ ಪ್ರೊಫೈಲ್ ಫೋಟೋಗಳನ್ನು ನೋಡಿದದರೂ ಘಿಬ್ಲಿ ಎಐ ಇಮೇಜ್ ಕಾಣಿಸುತ್ತದೆ. ತಮ್ಮ ಫೋಟೋಗಳನ್ನು ಘಿಬ್ಲಿ ಸ್ಟೈಲ್ ಗೆ ಬದಲಾಯಿಸಿಕೊಂಡು ಖುಷಿಪಡುತ್ತಿದ್ದಾರೆ. ಚ್ಯಾಟ್ ಜಿಪಿಟಿ ಎಐ ಟೂಲ್ ಈಗ ನಿಮ್ಮ ಫೋಟೋಗಳನ್ನು ಘಿಬ್ಲಿ ಅನಿಮೇಷನ್ ಸ್ಟೈಲ್ ನಲ್ಲಿ ಬದಲಾಯಿಸಲು ಕಮಾಂಡ್ ಒದಗಿಸಿದೆ. ಅದರಲ್ಲಿ ನಿಮ್ಮ ಫೋಟೋಗಳನ್ನು ಅಪ್ ಲೋಡ್ ಮಾಡಿ ಘಿಬ್ಲಿ ಸ್ಟೈಲ್ ಗೆ ಫೋಟೋ ಬದಲಾಯಿಸಬಹುದು.
ಆದರೆ ನಿಮ್ಮ ಫೋಟೋಗಳನ್ನು ಈ ರೀತಿ ಎಐ ಟೂಲ್ ಗೆ ಅಪ್ ಲೋಡ್ ಮಾಡುವುದು ಸುರಕ್ಷಿತವೇ ಎಂದು ತಿಳಿದುಕೊಳ್ಳಬೇಕಾಗಿರುವುದು ಮುಖ್ಯ. ಕೆಲವು ಮೂಲಗಳ ಪ್ರಕಾರ ಈ ರೀತಿ ನಿಮ್ಮ ವೈಯಕ್ತಿಕ ಫೋಟೋಗಳನ್ನು ಎಐ ಟೂಲ್ ಗೆ ಅಪ್ ಲೋಡ್ ಮಾಡುವುದರಿಂದ ಪ್ರೈವೆಸಿಗೆ ಧಕ್ಕೆಯಾಗಬಹುದು ಎನ್ನಲಾಗುತ್ತಿದೆ.
ಬಳಕೆದಾರರು ಘಿಬ್ಲಿ ಫೋಟೋ ಎಂಜಾಯ್ ಮಾಡುತ್ತಿದ್ದರೂ ನಿಮಗೇ ಗೊತ್ತಿಲ್ಲದ ಹಾಗೆ ನಿಮ್ಮ ಮುಖ ಚಹರೆಯ ಮಾಹಿತಿಯನ್ನು ಒಂದು ಓಪನ್ ಎಐ ಟೂಲ್ ಗೆ ಒದಗಿಸಿದಂತಾಗುತ್ತದೆ. ಎಐ ಟ್ರೈನಿಂಗ್ ಗಾಗಿ ಸಾಕಷ್ಟು ಜನರ ಮುಖಚಹರೆಯನ್ನು ಬಳಕೆ ಮಾಡಲು ಇಂತಹದ್ದೊಂದು ಟ್ರೆಂಡ್ ಸೃಷ್ಟಿಸಿರುವ ಸಾಧ್ಯತೆಯೂ ಇದೆ. ಇದರಿಂದ ನಿಮ್ಮ ಪ್ರೈವೆಸಿಯನ್ನು ನಿಮಗೇ ಗೊತ್ತಿಲ್ಲದ ಹಾಗೆ ಎಐ ಟೂಲ್ ಬಳಸಿಕೊಳ್ಳಬಹುದು. ಈ ಎಐ ಟೂಲ್ ನಿಮ್ಮ ಪ್ರೈವೆಸಿಯನ್ನು ಕಾಪಾಡಬೇಕು ಎನ್ನುವ ನಿಯಮವನ್ನು ಅನುಸರಿಸುತ್ತಿದೆ ಎಂಬುದಕ್ಕೆ ಖಚಿತತೆಯಿಲ್ಲ. ನಿಮ್ಮ ವೈಯಕ್ತಿಕ ಮುಖಚಹರೆಯನ್ನು ಅಪ್ ಲೋಡ್ ಮಾಡುವ ಮುಖಾಂತರ ನಿಮಗೇ ಗೊತ್ತಿಲ್ಲದಂತೆ ನಿಮ್ಮ ಫೋಟೋಗಳನ್ನು ಎಐ ಪ್ರಯೋಗಕ್ಕೆ ನೀಡಿದಂತಾಗುತ್ತದೆ. ಹೀಗಾಗಿ ಎಚ್ಚರವಿರಲಿ.