ಬೆಂಗಳೂರು: ಇನ್ನೇನು ಬಿರು ಬೇಸಿಗೆ ಬರುತ್ತಿದ್ದು, ವಿಪರೀತ ಸೆಖೆಯಾಗುವುದು ಖಂಡಿತಾ. ಹೀಗಾಗಿ ಮನೆಯಲ್ಲಿಯೇ ಕೂಲರ್ ಇಟ್ಟುಕೊಳ್ಳಲು ಬಯಸುತ್ತಿದ್ದರೆ ಕಡಿಮೆ ಬೆಲೆಯ ಟಾಪ್ 5 ಕೂಲರ್ ಗಳ ಪಟ್ಟಿ ಇಲ್ಲಿದೆ ನೋಡಿ.
ಆನ್ ಲೈನ್ ನಲ್ಲಿ ಮಾರಾಟಕ್ಕೆ ಲಭ್ಯವಿರುವ 2000 ರೂ.ಗಳವರೆಗಿನ ಅಗ್ಗದ ಬೆಲೆಯ ಕೂಲರ್ ಗಳು ಯಾವುವು ಎಂದು ಇಲ್ಲಿ ನೋಡಿ.
Symphony Duet Mini Portable Cooler: ಸಿಂಫೊನಿ ಡ್ಯುಯೆಟ್ ಮಿನಿ ಏರ್ ಕೂಲರ್ ಮನೆ ಮತ್ತು ಕಚೇರಿಗೆ ಹೇಳಿ ಮಾಡಿಸಿದಂತಿದೆ. ಇದಕ್ಕೆ ಒಂದು ವರ್ಷಗಳ ವ್ಯಾರಂಟಿಯೂ ಸಿಗುತ್ತದೆ. ಇದರ ಬೆಲೆ ಕೇವಲ 1991 ರೂ.ಗಳು.
Exxelo mini cooler: ಇದು ಒಂದು ಕೊಠಡಿಯಲ್ಲಿ ತಂಪಾಗಿಸುವ ಸಾಮರ್ಥ್ಯವಿರುವ ಮಿನಿ ಕೂಲರ್ ಆಗಿದ್ದು ಎಲ್ಲಿ ಬೇಕಾದರೂ ಕೊಂಡೊಯ್ಯಬಹುದಾಗಿದೆ. ಇದರ ಬೆಲೆ ಕೇವಲ 1,299 ರೂ.ಗಳು ಮಾತ್ರ.
KMCA Portable Air Cooler: ಇದು ಚಿಕ್ಕದಾಗಿದ್ದು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದಾಗಿದೆ. ಒಂದು ಕೊಠಡಿಗೆ ಹೇಳಿ ಮಾಡಿಸಿದಂತಿದೆ. ಇದರ ಬೆಲೆ ಕೇವಲ 999 ರೂ.ಗಳು ಮಾತ್ರ.
Ekvira High Spee fan: ಎಲ್ಲಿಗೆ ಬೇಕಾದರೂ ಹೊತ್ತೊಯ್ಯಬಲ್ಲ ಒಂದು ಮನೆಯನ್ನು ಕವರ್ ಮಾಡಬಲ್ಲ ಏರ್ ಕೂಲರ್ ಇದಾಗಿದೆ. ಮನೆ, ಕಚೇರಿ ಎರಡಕ್ಕೂ ಹೇಳಿ ಮಾಡಿಸಿದಂತಿದೆ. ಇದರ ಬೆಲೆ 1999 ರೂ. ಆಗಿದೆ.
NTMY Portable Air Cooler: ಈ ಏರ್ ಕೂಲರ್ ನ್ನು ನೀವು ಮನೆ, ಕಚೇರಿ ಮಾತ್ರವಲ್ಲ, ನಿಮ್ಮ ಕಾರಿನಲ್ಲಿ ಪ್ರಯಾಣಿಸುವಾಗಲೂ ಕೊಂಡೊಯ್ಯಬಹುದು. ಇದರ ಬೆಲೆ ಕೇವಲ 599 ರೂ.ಗಳು ಮಾತ್ರ.