Select Your Language

Notifications

webdunia
webdunia
webdunia
webdunia

ಯಶಸ್ವಿಯಾಗಿ ನಡೆದ ಬೆಂಗಳೂರು ಕಾಮಿಕ್ ಕಾನ್‌ ನ 12ನೇ ಆವೃತ್ತಿ

Comic can

Krishnaveni K

ಬೆಂಗಳೂರು , ಬುಧವಾರ, 22 ಜನವರಿ 2025 (17:55 IST)
ಬೆಂಗಳೂರು, ಭಾರತ - 22 ಜನವರಿ 2025: ಕ್ರಂಚಿರೋಲ್‌ ನಿಂದ ನಿರ್ವಹಿಸಲ್ಪಡುವ ಅತಿ ದೊಡ್ಡ ಪಾಪ್ ಸಂಸ್ಕೃತಿ ಉತ್ಸವಾಗಿರುವ ಬೆಂಗಳೂರು ಕಾಮಿಕ್ ಕಾನ್‌ನ 12ನೇ ಆವೃತ್ತಿಯು ವೈಟ್‌ ಫೀಲ್ಡ್‌ ನಲ್ಲಿರುವ ಕೆಟಿಪಿಓ ಟ್ರೇಡ್ ಸೆಂಟರ್‌ ನಲ್ಲಿ ಮಾರುತಿ ಸುಜುಕಿ ಅರೆನಾದಲ್ಲಿ ಜನವರಿ 18 ಮತ್ತು 19, 2025 ರಂದು ಯಶಸ್ವಿಯಾಗಿ ನಡೆದಿದೆ. ಈ ವರ್ಷದ ಆವೃತ್ತಿಯು ಕಾಮಿಕ್ಸ್, ಅನಿಮೆ, ಮಂಗಾ, ಗೇಮಿಂಗ್ ಮತ್ತು ಸೂಪರ್‌ ಹೀರೋ ಪ್ರಿಯರಿಂದ ಅದ್ಭುತ ಪ್ರತಿಕ್ರಿಯೆಯನ್ನು ಗಳಿಸಿತು.
 
ನೋಡ್ವಿನ್ ಗೇಮಿಂಗ್‌ನ ಆಶ್ರಯದಲ್ಲಿ ಈ ಎರಡು ದಿನಗಳ ಕಾಲ ನಡೆದ ಕಾಮಿಕ್ ಕಾನ್ ಇಂಡಿಯಾ ಸಂಭ್ರಮಾಚರಣೆಯು ಅದ್ಭುತ ಯಶಸ್ಸು ಗಳಿಸಿದೆ. ವಾರಾಂತ್ಯದಲ್ಲಿ 50 ಸಾವಿರ ಮಂದಿ ಭೇಟಿ ನೀಡಿದ್ದು, ಒಟ್ಟಾರೆ ಎರಡು ದಿನಗಳಲ್ಲಿ 5000 ಕ್ಕೂ ಹೆಚ್ಚು ಕಾಸ್ ಪ್ಲೇಯರ್‌ಗಳು ತಮ್ಮ ಸೃಜನಶೀಲತೆ ಪ್ರದರ್ಶಿಸಿದರು. ಜನಪ್ರಿಯ ಅನಿಮೆಗಳಾದ ಲುಫಿ, ನರುಟೊ, ಚೈನ್ಸಾ ಮ್ಯಾನ್, ನೆಜುಕೊ, ಗೊಜೊ ಜೊತೆಗೆ ಕ್ಲಾಸಿಕ್ ಡೆಡ್‌ ಪೂಲ್, ವೆಡ್ ನೆಸ್ ಡೇ ಆಡಮ್, ಬ್ಯಾಟ್‌ಮ್ಯಾನ್ ಮತ್ತು ಸ್ಪೈಡರ್‌ಮ್ಯಾನ್ ಗಳು, ಭಾರತೀಯ ಅಭಿಮಾನಿಗಳ ಮೆಚ್ಚಿನ ಆವೇಶಮ್‌ ನ ರಂಗ, ಚಾಚ ಚೌಧರಿ, ಸುಪ್ಪಂಡಿ ಮುಂತಾದುವುಗಳ ಅಭಿಮಾನಿಗಳು ಹಬ್ಬ ಆಚರಿಸಿದರು.
 
ರಾಹುಲ್ ಸುಬ್ರಮಣಿಯನ್, ಅಜೀಮ್ ಬನಾಟ್‌ ವಾಲಾ, ರೋಹನ್ ಜೋಶಿ ಮತ್ತು ಪೈಲಟ್ ಗೊಮ್ಮ ಮುಂತಾದ ಸ್ಟಾಂಡಪ್ ಕಾಮಿಡಿಯನ್ ಗಳು ಕಾರ್ಯಕ್ರಮ ನೀಡಿದರು. ದಿ ಇಂಟರ್ನೆಟ್ ಸೇಡ್ ಸೋ ತಂಡದ ವರುಣ್ ಠಾಕೂರ್, ಕೌತುಕ್ ಶ್ರೀವಾಸ್ತವ್, ಮತ್ತು ಆಧಾರ್ ಮಲಿಕ್ ಅಭಿಮಾನಿಗಳಲ್ಲಿ ಹರ್ಷವುಕ್ಕಿಸಿದರು. 
 
ಬೆಂಗಳೂರು ಕಾಮಿಕ್ ಕಾನ್ 2025 ಈ ಸಲ ಸಾಂಪ್ರದಾಯಿಕ ಸಂಪ್ರದಾಯಗಳನ್ನು ಮೀರಿ ಹೊಸ ಆಚರಣೆಗಳನ್ನು ಸಂಭ್ರಮಿಸಿತು. ಮಾರುತಿ ಸುಜುಕಿ ಅರೆನಾ, ಯಮಹಾ ಮತ್ತು ಕ್ರಂಚಿರೋಲ್, ಒನ್‌ ಪ್ಲಸ್ ಮತ್ತು ವಾರ್ನರ್ ಬ್ರದರ್ಸ್ ನ ಸೂಪರ್‌ಮ್ಯಾನ್ ಮತ್ತು ಮೈನ್‌ ಕ್ರಾಫ್ಟ್ ಸಿನಿಮಾ ಇತ್ಯಾದಿ ತಂಡಗಳು ತಮ್ಮ ವಿಶಿಷ್ಟ ವಲಯಗಳನ್ನು ಹೊಂದಿದ್ದವು. ಸಂದರ್ಶಕರಿಗೆ ವಿಶಿಷ್ಟ ಅನುಭವ ಒದಗಿಸಿದವು. ಗೇಮಿಂಗ್ ಸ್ಪರ್ಧೆಗಳು, ವಿಆರ್ ಸೆಟಪ್‌ಗಳು ಮತ್ತು ಸಂವಹನ ಕಾರ್ಯಕ್ರಮ ಆಯೋಜಿಸಿದವು.
 
ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಯ ಕಾಮಿಕ್ ಪುಸ್ತಕ ರಚನೆಕಾರ ರಾನ್ ಮಾರ್ಜ್, ಪ್ರಸಿದ್ಧ ಅಮೇರಿಕನ್ ಕಾಮಿಕ್ ಪುಸ್ತಕ ಬರಹಗಾರ, ನ್ಯೂಯಾರ್ಕ್ ಟೈಮ್ಸ್ ನ ಬೆಸ್ಟ್ ಸೆಲ್ಲರ್ ಮತ್ತು ಐಸ್ನರ್ ಪ್ರಶಸ್ತಿ ವಿಜೇತ ಕಾಮಿಕ್ ಬರಹಗಾರ ಜಮಾಲ್ ಇಗ್ಲೆ ಭಾಗವಹಿಸಿ ಅಭಿಮಾನಿಗಳ ಜೊತೆ ಸಂವಹನ ನಡೆಸಿದರು. ಇಂಡಸ್ ವರ್ಸ್, ಯಾಲಿ ಡ್ರೀಮ್ಸ್ ಕ್ರಿಯೇಷನ್ಸ್, ಗ್ರಾಫಿಕರಿ - ಪ್ರಸಾದ್ ಭಟ್, ಗಾರ್ಬೇಜ್ ಬಿನ್, ಸೂಫಿ ಕಾಮಿಕ್ಸ್, ಬುಲ್ಸ್‌ ಐ ಪ್ರೆಸ್, ಹೋಲಿ ಕೌ ಎಂಟರ್‌ಟೈನ್‌ಮೆಂಟ್, ಬಕರ್‌ಮ್ಯಾಕ್ಸ್, ಆರ್ಟ್ ಆಫ್ ಸೇವಿಯೋ, ತಡಮ್ ಗ್ಯಾಡು, ಸೋಮೇಶ್ ಕುಮಾರ್, ರಾಜೇಶ್ ನಾಗುಲ್‌ಕೊಂಡ, ಹಾಲ್ಲು, ಆರ್ಟಲ್ ಕಾರ್ಪೊರೇಟ್ ಕಾಮಿಕ್ಸ್, ಸಂತೋಷ ಫ್ಲಫ್ ಕಾಮಿಕ್ಸ್, ಮತ್ತು ಸೌಮಿನ್ ಪಟೇಲ್ ಇತರರು ಕಾರ್ಯಕ್ರಮದಲ್ಲಿ ಇದ್ದರು.
 
ಕಾಮಿಕ್ ಕಾನ್ ಇಂಡಿಯಾದ ಸಂಸ್ಥಾಪಕರಾದ ಜತಿನ್ ವರ್ಮಾ ಅವರು ಮಾತನಾಡಿ, “ಬೆಂಗಳೂರು ಕಾಮಿಕ್ ಕಾನ್ 2025ರ ಮೂಲಕ ಈ ಕಾರ್ಯಕ್ರಮವನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಈ ನಗರದ ಅಭಿಮಾನಿಗಳ ಶಕ್ತಿ, ಉತ್ಸಾಹ ಮತ್ತು ಸೃಜನಶೀಲತೆ ಅದ್ಭುತವಾಗಿದೆ. ಬೆಂಗಳೂರು ಯಾವಾಗಲೂ ಭಾರತದ ಪಾಪ್ ಸಂಸ್ಕೃತಿಯ ಚಳವಳಿಯ ಹೃದಯಭಾಗದಲ್ಲಿದೆ ಮತ್ತು ಈ 12ನೇ ಆವೃತ್ತಿಯು ದೇಶದಲ್ಲಿ ಕಾಮಿಕ್ಸ್, ಅನಿಮೆ ಇತ್ಯಾದಿಗಳ ಮೇಲೆ ಹೆಚ್ಚುತ್ತಿರುವ ಅಭಿಮಾನ, ಉತ್ಸಾಹ ಮತ್ತು ಪ್ರೀತಿಗೆ ಸಾಕ್ಷಿಯಾಗಿದೆ. ಮುಂದೆ ಭಾರತದಾದ್ಯಂತ ಇರುವ ಅಭಿಮಾನಿಗಳಿಗೆ ಅತ್ಯಾಕರ್ಷಕ ಅನುಭವಗಳನ್ನು ಸೃಷ್ಟಿಸುವ ಗುರಿಯನ್ನು ನಾವು ಹೊಂದಿದ್ದೇವೆ" ಎಂದು ಹೇಳಿದರು.
 
ನೋಡ್ವಿನ್ ಗೇಮಿಂಗ್‌ನ ಸಹ-ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಅಕ್ಷತ್ ರಾಠಿ ಅವರು, "ಬೆಂಗಳೂರು ಕಾಮಿಕ್ ಕಾನ್ 2025 ಹೊಸ ಮಾನದಂಡವನ್ನು ಹಾಕಿಕೊಟ್ಟಿದೆ. ಇದು ಬೆಂಗಳೂರು ನಗರದ ಅಪೂರ್ವ ಶಕ್ತಿ ಮತ್ತು ಹೊಸತನಕ್ಕೆ ಪುರಾವೆಯಾಗಿದೆ. ಈ 12ನೇ ಆವೃತ್ತಿಯು ಪಾಪ್ ಸಂಸ್ಕೃತಿ, ಸೃಜನಶೀಲತೆ ಮತ್ತು ತಂತ್ರಜ್ಞಾನದ ಮಿಶ್ರಣವಾಗಿ ಮೂಡಿಬಂದಿದೆ. ಎರಡು ದಿನಗಳಲ್ಲಿ, ಅಭಿಮಾನಿಗಳು ಅದ್ಭುತ ಅನುಭವ ಗಳಿಸಿದ್ದಾರೆ" ಎಂದು ಹೇಳಿದರು.
 
ಚೆನ್ನೈ ಕಾಮಿಕ್ ಕಾನ್ ಫೆಬ್ರವರಿ 8 ಮತ್ತು 9ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ, ಭೇಟಿ ನೀಡಿ: www.comicconindia.com

Share this Story:

Follow Webdunia kannada

ಮುಂದಿನ ಸುದ್ದಿ

ಅಟಲ್ ಬಿಹಾರಿ ವಾಜಪೇಯಿ ಗೌರವಾರ್ಥ ಬಿಜೆಪಿಯಿಂದ ವಿಶಿಷ್ಠ ಕಾರ್ಯಕ್ರಮ