ಬೆಂಗಳೂರು: ರಾಜ್ಯದಲ್ಲಿ ಉದ್ಯಮಿಗಳಿಗೆ, ಚಿನ್ನಾಭರಣ ಮಳಿಗೆಗಳಿಗೆ ರಕ್ಷಣೆ ಇಲ್ಲ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಲೂಟಿಕೋರರು, ದರೋಡೆಕೋರರಿಗೆ ಸ್ವರ್ಗವಾಗಿದೆ ಎಂದು ಜೆಡಿಎಸ್ ಶಾಸಕ ಶರವಣ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು, ಬೀದರ್ ದರೋಡೆ ವಿಚಾರವಾಗಿ ಪ್ರತಿಕ್ರಿಯಿಸಿದರು. 4-5 ದಿನಗಳಿಂದ ಬೀದರ್, ಮಂಗಳೂರು, ಮೈಸೂರು ಭಾಗದಲ್ಲಿ ದರೋಡೆ, ಲೂಟಿ ಕೇಸ್‌ಗಳು ಆಗಿವೆ. ಬೆಂಗಳೂರಿನಲ್ಲಿ ಜ್ಯುವೆಲರಿ ಶಾಪ್‌ನಲ್ಲಿ 8.5 ಕೆಜಿ ಚಿನ್ನ ಲೂಟಿ ಮಾಡಿದ್ದಾರೆ. ನನ್ನ ಅಂಗಡಿ ಚಿನ್ನ ಹಾಲ್ ಮಾರ್ಕ್‌ಗೆ ಕೊಟ್ಟಾಗಲೂ ಕಳ್ಳತನವಾಗಿತ್ತು. ರಾಜ್ಯದಲ್ಲಿ ಜನರು ಸುರಕ್ಷಿತವಾಗಿಲ್ಲ. ಭಯದಿಂದಲೇ ಜೀವನ ನಡೆಸಬೇಕಾದ ಪರಿಸ್ಥಿತಿ ಎಂದರು.
ಕಾಂಗ್ರೆಸ್ ನಾಯಕರು ಬೆಳಗಾವಿಯಲ್ಲಿ ಗಾಂಧಿ ಸಮಾವೇಶ ಮಾಡಿ ಜಪ, ಶಾಂತಿ ಅಂತ ಮಾತಾಡ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಪವರ್ ಫೈಟ್ ಜೋರಾಗಿದೆ. ಇದರಲ್ಲಿ ಮುಳುಗಿ ಹೋಗಿರುವ ಕಾರಣ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳು ಈ ಕಾಂಗ್ರೆಸ್ ಸರ್ಕಾರವೇ ಕಾರಣ. ಸಮಾಜಘಾತುಕ ಶಕ್ತಿಗಳಿಗೆ ಈ ಸರ್ಕಾರದಲ್ಲಿ ಭಯ ಇಲ್ಲದಂತೆ ಆಗಿದೆ. ಹಾಡುಹಗಲೆ ಕೊಲೆ ಆಗ್ತಿದೆ. ಬೆಂಗಳೂರು ಸೇಫ್ ಸಿಟಿ ಅಂತ ಇತ್ತು. ಈಗ ಕ್ರೈಂ ಸಿಟಿ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪೊಲೀಸ್ ಇಲಾಖೆಯನ್ನ ಬಿಗಿ ಮಾಡೋ ಕೆಲಸ ಸರ್ಕಾರ ಮಾಡಬೇಕು