Select Your Language

Notifications

webdunia
webdunia
webdunia
webdunia

ಗೃಹ ಖಾತೆಯನ್ನ ಸಮರ್ಥರಿಗೆ, ಆಸಕ್ತಿ ಉಳ್ಳವರಿಗೆ ಹಸ್ತಾಂತರಿಸಲಿ: ಆರ್‌ ಅಶೋಕ್‌

Mangalore Bank Ropbbery Case, Karnataka Congress Government, Opposition Leader R Ashok,

Sampriya

ಬೆಂಗಳೂರು , ಶನಿವಾರ, 18 ಜನವರಿ 2025 (15:05 IST)
ಬೆಂಗಳೂರು: ರಾಜ್ಯದ ಇತಿಹಾಸದಲ್ಲೇ ಅತ್ಯಂತ ಕಡು ಭ್ರಷ್ಟ ಸರ್ಕಾರದಲ್ಲಿ ಅತ್ಯಂತ ದೊಡ್ಡ ಬ್ಯಾಂಕ್ ಲೂಟಿಯಾಗಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್‌ ಆರೋಪ ಮಾಡಿದ್ದಾರೆ.

ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಸ್ವಾಮಿ ಸಿದ್ದರಾಮಯ್ಯನವರೇ, ಬ್ಯಾಂಕ್ ಲೂಟಿ, ಎಟಿಎಂ ವಾಹನ ದರೋಡೆ ಇವೆಲ್ಲ 'ಆಕಸ್ಮಿಕ' ಘಟನೆಗಳೋ ಅಥವಾ ಅಮಾಯಕರು, ಮಾನಸಿಕ ಅಸ್ವಸ್ಥರು ಮಾಡಿರುವ ಪುಂಡಾಟಿಕೆಯೋ?

ಮುಖ್ಯಮಂತ್ರಿ ಆಗುವ ಕನಸು ಬಿದ್ದಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ಗೃಹ ಇಲಾಖೆಯ ಬಗ್ಗೆ ಆಸಕ್ತಿ ಇಲ್ಲ ಅಂತ ಕಾಣುತ್ತದೆ. ಕೂಡಲೇ ಅವರ ಖಾತೆ ಬದಲಾಯಿಸು ಗೃಹ ಖಾತೆಯನ್ನ ಯಾರಾದರೂ ಸಮರ್ಥರಿಗೆ, ಆಸಕ್ತಿ ಉಳ್ಳವರಿಗೆ ಹಸ್ತಾಂತರ ಮಾಡಿ.

ಪರಿಸ್ಥಿತಿ ಹೀಗೆ ಮುಂದುವರೆದರೆ ರಾಜ್ಯದ ಜನತೆ ಧೈರ್ಯವಾಗಿ ಓಡಾಡುವುದೂ ಕಷ್ಟವಾಗಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಕೋಲ್ಕತ್ತಾ ಆರ್ ಜಿ ಕರ್ ಆಸ್ಪತ್ರೆ ರೇಪ್ ಕೇಸ್: ತಪ್ಪಿತಸ್ಥ ಯಾರು ಎಂದು ತೀರ್ಪಿತ್ತ ನ್ಯಾಯಾಲಯ