Select Your Language

Notifications

webdunia
webdunia
webdunia
webdunia

ಡಿಕೆಶಿ- ಸಿದ್ದರಾಮಯ್ಯ ಬಣದ ನಡುವಿನ ಸಿಎಂ ಕುರ್ಚಿ ಪೈಪೋಟಿಯಲ್ಲಿ ರಾಜ್ಯದ ಅಭಿವೃದ್ಧಿಯಿಲ್ಲ: ಅಶೋಕ್ ವ್ಯಂಗ್ಯ

ಡಿಕೆಶಿ- ಸಿದ್ದರಾಮಯ್ಯ ಬಣದ ನಡುವಿನ ಸಿಎಂ ಕುರ್ಚಿ ಪೈಪೋಟಿಯಲ್ಲಿ ರಾಜ್ಯದ ಅಭಿವೃದ್ಧಿಯಿಲ್ಲ: ಅಶೋಕ್ ವ್ಯಂಗ್ಯ

Sampriya

ಬೆಂಗಳೂರು , ಬುಧವಾರ, 8 ಜನವರಿ 2025 (18:40 IST)
ಬೆಂಗಳೂರು: ಸದ್ಯ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಡಿನ್ನರ್ ಪಾರ್ಟಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಇದೀಗ ಡಿಕೆ ಶಿವಕುಮಾರ್ ವಿರುದ್ಧ ಸಹಕಾರಿ ಸಚಿವ ಕೆಎನ್ ರಾಜಣ್ಣ ನಿಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ.

ಈ ವಿಚಾರವನ್ನು ಮುಂದಿಟ್ಟು ವಿಪಕ್ಷ ನಾಯಕ ಆರ್‌ ಅಶೋಕ್ ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಅತ್ತ ಕಾಂಗ್ರೆಸ್ ಹೈಕಮಾಂಡ್ ತಮ್ಮ ಜೇಬಿನಲ್ಲಿದೆ ಎನ್ನುವ ರೀತಿ ಗೃಹ ಸಚಿವ ಪರಮೇಶ್ವರ್ ಅವರ ಡಿನ್ನರ್ ಮೀಟಿಂಗ್ ಅನ್ನ ದೆಹಲಿಯಲ್ಲೇ ಕೂತು ಕ್ಯಾನ್ಸಲ್ ಮಾಡಿಸಿದ ಡಿಸಿಎಂ ಡಿಕೆ ಶಿವಕುಮಾರ್‌ ಸಾಹೇಬರಿಗೆ, ಇತ್ತ ಸಿಎಂ  ಸಿದ್ದರಾಮಯ್ಯ ಬಣ ನಾವೇನು ಕಡಿಮೆ ಇಲ್ಲ ಎನ್ನುವಂತೆ ಕೌಂಟರ್ ಕೊಡುತ್ತಿದೆ.

ಸಚಿವ ಕೆಎನ್ ರಾಜಣ್ಣಅವರಿಂದ ಅಧ್ಯಕ್ಷರಿಗೆ ಬಹಿರಂಗ ಸವಾಲು:

????ಡಿನ್ನರ್ ಮೀಟಿಂಗ್ ಬಗ್ಗೆ ಬೇಜಾರು ಮಾಡಿಕೊಳ್ಳೋಕೆ ನಾವೇನು ಅವರ ಆಸ್ತಿ ಬರೆಸಿಕೊಂಡಿದ್ದೀವಾ?

????ಇವರೇನು SC/ST ವಿರೋಧಿಗಳಾ?

????ಇವೆಲ್ಲಾ ಬಹಳ ದಿವಸ ನಡೆಯಲ್ಲ.

ಕಾಂಗ್ರೆಸ್ ಹೈಕಮಾಂಡ್ ಯಾರ ಜೇಬಿನಲ್ಲಿದೆಯೋ, ಕಾಂಗ್ರೆಸ್ ಹೈಕಮಾಂಡ್ ಜೇಬು ತುಂಬಿಸುತ್ತಿರುವುದು ಯಾರೋ ಗೊತ್ತಿಲ್ಲ, ಆದರೇ ಸೇರಿಗೆ ಸವಾಸೇರು ಎಂದು ಕುರ್ಚಿಗಾಗಿ ನಡೆಸುತ್ತಿರುವ ಈ ಪೈಪೋಟಿಯನ್ನ, ಆಸಕ್ತಿಯನ್ನ ಕಾಂಗ್ರೆಸ್‌ ಸಚಿವರು ತಮ್ಮ ಇಲಾಖೆಯ ಕಾರ್ಯನಿರ್ವಹಣೆಯಲ್ಲಿ, ರಾಜ್ಯದ ಅಭಿವೃದ್ಧಿಯಲ್ಲಿ ತೋರಿಸಿದ್ದಿದ್ದರೆ ಚೆನ್ನಾಗಿರುತ್ತಿತ್ತು


Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದ ಕೆಲ ಸಮಸ್ಯೆ ಮುಂದಿಟ್ಟು ನಿತಿನ್ ಗಡ್ಕರಿಯನ್ನು ಭೇಟಿಯಾದ ಕುಮಾರಸ್ವಾಮಿಗೆ ಸಿಕ್ತು ಭಾರೀ ಭರವಸೆ