ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ವಿದೇಶದಲ್ಲಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಬಂದು ಕನ್ನಡದಲ್ಲೇ ಮಾತನಾಡಿ ವಿಶೇಷ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಕಾರಣ ತಿಳಿದರೆ ನೀವೂ ಹೆಮ್ಮೆಪಡುತ್ತೀರಿ.
ರಜನೀಕಾಂತ್ ಓದಿದ್ದು ಎಲ್ಲಾ ಬೆಂಗಳೂರಿನಲ್ಲೇ. ತಾವು ಓದಿದ ಎಪಿಎಸ್ ಹೈಸ್ಕೂಲ್ ಮತ್ತು ಕಾಲೇಜಿನ ಶತಮಾನೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ರಜನೀಕಾಂತ್ ವಿಡಿಯೋ ಸಂದೇಶ ನೀಡಿದ್ದಾರೆ. ತಮ್ಮ ಶಾಲೆ, ಕಾಲೇಜಿನ ದಿನಗಳ ಬಗ್ಗೆ ಹೆಮ್ಮೆಯಿಂದಲೇ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಾನು ಓದಿದ್ದು ಎಲ್ಲಾ ಎಪಿಎಸ್ ನಲ್ಲೇ. ನಾನು ಮಿಡ್ಲ್ ಕ್ಲಾಸ್ ನಲ್ಲಿ ಓದಿನಲ್ಲಿ ಮುಂದಿದ್ದೆ. 98% ಅಂಕ ತೆಗೆದುಕೊಳ್ಳುತ್ತಿದ್ದೆ. ಆದರೆ ಚೆನ್ನಾಗಿ ಓದುತ್ತೀನಲ್ಲಾ ಅಂತ ನನ್ನ ಅಣ್ಣ ನನ್ನನ್ನು ಇಂಗ್ಲಿಷ್ ಮೀಡಿಯಂಗೆ ಹಾಕಿದ್ರು. ಆದರೆ ಇದ್ದಕ್ಕಿದ್ದಂತೆ ಇಂಗ್ಲಿಷ್ ಮೀಡಿಯಂಗೆ ಹಾಕಿದಾಗ ಕಷ್ಟವಾಯಿತು. ಆಗ ನನಗೆ 8,9 ರಲ್ಲಿ ನನಗೆ ಸಾಕಷ್ಟು ಸಹಾಯ ಮಾಡಿದರು. ಆದರೆ ಪಬ್ಲಿಕ್ ನಲ್ಲಿ ಕಷ್ಟವಾಯಿತು. ಆಗ ನನಗೆ ಅಲ್ಲಿ ಒಬ್ಬರು ಸರ್ ನನಗೆ ಫ್ರೀ ಆಗಿ ಪಾಠ ಮಾಡಿ ಪಾಸ್ ಮಾಡಿದರು. ಬಳಿಕ ಎಪಿಎಸ್ ಕಾಲೇಜಿನಲ್ಲಿ ಸೇರಿಕೊಂಡೆ ಎಂದು ರಜನೀ ತಮ್ಮ ಹಳೆಯ ದಿನಗಳನ್ನು ನೆನೆಸಿಕೊಂಡಿದ್ದಾರೆ.
ಇನ್ನು ಇಲ್ಲಿ ಕಾಲೇಜಿನಲ್ಲಿ ಓದುತ್ತಿದ್ದಾಗಲೇ ನಾನು ಕತೆ ಹೇಳುತ್ತಿದ್ದುದನ್ನು ಗಮನಿಸಿ ನನ್ನನ್ನು ಡ್ರಾಮಾಗೆ ಸೇರು ಎಂದು ಸೇರಿಸಿದರು. ಅಲ್ಲಿಂದ ನನ್ನ ನಟನೆಯ ಕೆರಿಯರ್ ಶುರುವಾಯಿತು ಎಂದು ರಜನಿ ವಿವರವಾಗಿ ಹೇಳಿದ್ದಾರೆ. ಸಾಕಷ್ಟು ವಿಚಾರಗಳನ್ನು ಅವರು ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ.