ಡಿವೋರ್ಸ್ ಬಳಿಕ ನಟಿ ನಿವೇದಿತಾ ಗೌಡ ಅವರು ತುಂಬಾನೇ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಆಕ್ಟೀವ್ ಆಗಿರುವ ನಿವೇದಿತಾ ಗೌಡ ಅವರು ವಿದೇಶದಲ್ಲಿ ಎಂಜಾಯ್ ಮಾಡುತ್ತಿರುವ ಫೋಟೋ ಹಾಗೂ ರೀಲ್ಸ್‌ಗಳನ್ನು ಹಾಕುತ್ತಿರುತ್ತಾರೆ.
ಇದೀಗ ನಿವಿ ನ್ಯೂ ಲುಕ್‌ಗೆ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಜಾಲಿಮೂಡ್‌ನಲ್ಲಿರುವ ನಿವೇದಿತಾ ಗೌಡ ಮಾಡೆಲ್ ಆಗುವ ಪ್ರಯತ್ನದಲ್ಲಿದ್ದಾರೆ.
ಹೊಸ ವರ್ಷ, ಕ್ರಿಸ್ಮಸ್ ಅನ್ನು ಆಚರಿಸಿದ ನಿವೇದಿತಾ ಗೌಡ ಹೊಸ ಅವತಾರ ತುಂಬಾನೇ ಬೋಲ್ಡ್ ಆಗಿದೆ. ಬಿಕಿನಿ ತೊಟ್ಟು ಟ್ರಾನ್ಸ್‌ಪರೆಂಟ್ ಡ್ರೆಸ್‌ನಲ್ಲಿ ಸೂರ್ಯನಿಗೆ ಮೈಯೊಡ್ಡಿ ನಿವೇದಿತಾ ನಿಂತಿದ್ದ ಫೋಟೋಗೆ ಬಗೆ ಬಗೆಯಾಗಿ ಕಮೆಂಟ್ ಬಂದಿದೆ.
ಒಬ್ಬರು ಎಲ್ಲಾ ಒಕೆ ಆ ಗೋಣಿ ಚೀಲ ಯಾಕೆ ಎಂದು ಟ್ರೋಲ್ ಮಾಡಿದ್ದಾರೆ.
ಒಂದೆಡೆ ನಟಿಯ ಬೋಲ್ಡ್ ಫೋಟೋಗೆ ಲೈಕ್‌ಗಳ ಸುರಿಮಳೆ ಬರುತ್ತಿದ್ದರೆ , ಮತ್ತೊಂದೆಡೆ ಬಗೆ ಬಗೆಯಾಗಿ ಕಮೆಂಟ್‌ಗಳು ಬರುತ್ತಿದೆ.
ಇವರೆಲ್ಲ ಸಂಸಾರ ಮಾಡುವವರಲ್ಲ. ಹೀರೋಯಿನ್ ಆಗ್ಬೇಕೆಂದು ನಮ್ ಶೆಟ್ಟಿಗೆ ಡಿವೋರ್ಸ್ ಕೊಡ್ಯಾಮ್ಮ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ನಿನ್ನ ತಂದೆ ತಾಯಿ ಏನೂ ಹೇಳುವುದಿಲ್ವ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.