Select Your Language

Notifications

webdunia
webdunia
webdunia
webdunia

ಕಿರುತೆರೆ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ, ಚಂದನ್ ಶೆಟ್ಟಿ ಡಿವೋರ್ಸ್ ಗೆ ಪರೋಕ್ಷ ಟಾಂಗ್

Chandan Shetty-Niveditha Gowda

Krishnaveni K

ಬೆಂಗಳೂರು , ಶುಕ್ರವಾರ, 21 ಜೂನ್ 2024 (13:49 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ ಶೋನಲ್ಲಿ ಈ ವಾರ ಒಂದು ಸ್ಕಿಟ್ ಪ್ರದರ್ಶನವಾಗಲಿದ್ದು, ಅದನ್ನು ನೋಡಿದ ನೆಟ್ಟಿಗರು ನಿವೇದಿತಾ ಗೌಡ, ಚಂದನ್ ಶೆಟ್ಟಿಯನ್ನು ನೆನೆಸಿಕೊಂಡಿದ್ದಾರೆ.

ಕಾಮಿಡಿ ಕಿಲಾಡಿಗಳು ಮೂಲಕ ಖ್ಯಾತಿ ಪಡೆದಿದ್ದ ಹರೀಶ ದಂಪತಿ ಮತ್ತಿತರರು ಈ ಸ್ಕಿಟ್ ನಲ್ಲಿ ಅಭಿನಯಿಸಿದ್ದಾರೆ. ಈ ಸ್ಕಿಟ್ ನಲ್ಲಿ ರೀಲ್ಸ್ ಮಾಡುವ ಹುಚ್ಚು ಇರುವ ಇಬ್ಬರು ಮದುವೆಯಾಗುತ್ತಾರೆ. ಬಳಿಕ ರೀಲ್ಸ್ ಕಾರಣಕ್ಕೇ ವಿಚ್ಛೇದನ ಪಡೆಯುತ್ತಾರೆ. ಇದನ್ನು ನೋಡಿದ ನೆಟ್ಟಿಗರು ನಾನಾ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಬಹುತೇಕರು ಯಾಕೋ ಇದು ಚಂದನ್ ಶೆಟ್ಟಿ, ನಿವೇದಿತಾ ಗೌಡರನ್ನು ಉದ್ದೇಶಿಸಿ ಮಾಡಿದಂತಿದೆಯಲ್ಲಾ ಎಂದು ಕಾಮೆಂಟ್ ಮಾಡಿದ್ದಾರೆ. ಬಿಗ್ ಬಾಸ್ ಜೋಡಿ ಚಂದನ್ ಶೆಟ್ಟಿ, ನಿವೇದಿತಾ ಗೌಡ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ನಗು ನಗುತ್ತಲೇ ಗುಡ್ ಬೈ ಹೇಳಿದ್ದರು.

ಈ ಸಂದರ್ಭದಲ್ಲಿ ಅವರಿಬ್ಬರ ವಿಚ್ಛೇದನದ ಬಗ್ಗೆ ನಾನಾ ರೀತಿಯ ರೂಮರ್ ಹಬ್ಬಿಕೊಂಡಿತ್ತು. ಇದರಲ್ಲಿ ನಿವೇದಿತಾ ರೀಲ್ಸ್ ಹುಚ್ಚಿನಿಂದಲೇ ಚಂದನ್ ಬೇಸತ್ತಿದ್ದರು ಎಂದು ರೂಮರ್ಸ್ ಹರಡಿತ್ತು. ಇದೀಗ ಈ ಸ್ಕಿಟ್ ನಲ್ಲಿ ರೀಲ್ಸ್ ಹುಚ್ಚಿನಿಂದ ವಿಚ್ಛೇದನವಾಗುವ ಸನ್ನಿವೇಶ ನೋಡಿ ನೆಟ್ಟಿಗರು ಇದು ನಿವೇದಿತಾ-ಚಂದನ್ ಕತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನ್ ವೆಜ್ ಇಲ್ಲದೇ ಒಂದು ದಿನ ಇರಕ್ಕಾಗಲ್ಲ ಎಂದಿದ್ದ ದರ್ಶನ್