Publish Date: Mon, 10 Jun 2024 (12:02 IST)
Updated Date: Mon, 10 Jun 2024 (12:08 IST)
ಬೆಂಗಳೂರು: ಬಿಗ್ ಬಾಸ್ ನಿಂದ ಪರಿಚಯವಾಗಿ ಮದುವೆಯಾಗಿ ಇದೀಗ ವಿಚ್ಛೇದನ ನೀಡಿ ಎಲ್ಲರಿಗೂ ಶಾಕ್ ಕೊಟ್ಟಿರುವ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಂದು ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ವಿಚ್ಛೇದನದ ಬಳಿಕ ಸೋಷಿಯಲ್ ಮೀಡಿಯಾಗಳಲ್ಲಿ, ಮಾಧ್ಯಮಗಳಲ್ಲಿ ಅವರ ವಿಚ್ಛೇದನದ ಬಗ್ಗೆ ಹಲವು ಊಹಾಪೋಹಗಳು ಹಬ್ಬಿವೆ. ನಿವೇದಿತಾ ಮಗು ಬೇಡ ಎಂದಿದ್ದಕ್ಕೆ ವಿಚ್ಛೇದನವಾಗಿದೆ. ನಿವೇದಿತಾಗೆ ತೆಲುಗಿನಲ್ಲಿ ಅವಕಾಶ ಬಂದಿದ್ದಕ್ಕೆ ದೂರವಾಗಿದ್ದರೆ ಎಂಬಿತ್ಯಾಗಿ ಹಲವು ಊಹಾಪೋಹಗಳಿವೆ.
ಅವರ ಲಾಯರ್ ಕಡೆಯಿಂದಲೂ ಈ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಇಬ್ಬರೂ ಪರಸ್ಪರ ಹೊಂದಾಣಿಕೆಯಾಗದ ಸ್ಥಿತಿ ಇದ್ದ ಕಾರಣ ದೂರವಾಗಿದ್ದಾರೆ ಎಂದಿದ್ದರು. ಆದರೂ ಇಬ್ಬರ ವಿಚ್ಛೇದನದ ಬಗ್ಗೆ ದಿನಕ್ಕೊಂದು ಸುದ್ದಿಗಳು ಹಬ್ಬುತ್ತಲೇ ಇತ್ತು. ಇದೀಗ ಇಬ್ಬರೂ ಎಲ್ಲದಕ್ಕೂ ತೆರೆ ಎಳೆಯಲು ತೀರ್ಮಾನಿಸಿದ್ದಾರೆ.
ಇಂದು ಅಪರಾಹ್ನ 3.30 ಕ್ಕೆ ಜಿಟಿ ಮಾಲ್ ನಲ್ಲಿ ಚಂದನ್ ಮತ್ತು ನಿವೇದಿತಾ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಲಿದ್ದಾರೆ. ತಮ್ಮ ವಿಚ್ಛೇದನದ ಕಾರಣಗಳ ಬಗ್ಗೆ ಹರಡಿರುವ ಎಲ್ಲಾ ಸುದ್ದಿಗಳಿಗೆ ಅವರೀಗ ಸ್ಪಷ್ಟನೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.