Publish Date: Sat, 08 Jun 2024 (12:54 IST)
Updated Date: Sat, 08 Jun 2024 (12:59 IST)
ಬೆಂಗಳೂರು: ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇನ್ ಸ್ಟಾಗ್ರಾಂನಲ್ಲಿ ಪರಸ್ಪರ ಅನ್ ಫಾಲೋ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಸೆಲೆಬ್ರಿಟಿ ದಂಪತಿಗಳ ವಿರಸ ಮೊದಲು ಗೊತ್ತಾಗುವುದೇ ಇನ್ ಸ್ಟಾಗ್ರಾಂ ಪುಟದ ಮೂಲಕ. ದಂಪತಿ ಪರಸ್ಪರ ಅನ್ ಫಾಲೋ ಮಾಡಿಕೊಂಡರೆ, ಫೋಟೋ ಡಿಲೀಟ್ ಮಾಡಿದರೆ ಇಬ್ಬರ ನಡುವೆ ವಿರಸ ಮೂಡಿದೆ ಎಂಬ ಗುಮಾನಿ ಶುರುವಾಗುತ್ತದೆ. ಆದರೆ ಚಂದನ್ ಶೆಟ್ಟಿ, ನಿವೇದಿತಾ ನಿನ್ನೆ ಸಂಜೆ ತನಕವೂ ಪರಸ್ಪರ ಇನ್ ಸ್ಟಾಗ್ರಾಂನಲ್ಲಿ ಫಾಲೋ ಮಾಡಿಕೊಂಡಿದ್ದರು.
ಆದರೆ ನಿನ್ನೆ ವಿಚ್ಛೇದನ ಸುದ್ದಿಯನ್ನು ಇನ್ ಸ್ಟಾಗ್ರಾಂನಲ್ಲಿ ಖಚಿತಪಡಿಸಿಕೊಂಡ ಬಳಿಕ ಇಬ್ಬರೂ ಪರಸ್ಪರರ ಖಾತೆಯನ್ನು ಅನ್ ಫಾಲೋ ಮಾಡಿಕೊಂಡಿದ್ದಾರೆ. ನಿವೇದಿತಾ ಫಾಲೋ ಮಾಡುತ್ತಿದ್ದ ಏಕೈಕ ವ್ಯಕ್ತಿ ಎಂದರೆ ಚಂದನ್ ಮಾತ್ರ. ಆದರೆ ನಿನ್ನೆ ಸಂಜೆಯಿಂದ ಅವರನ್ನೂ ಅನ್ ಫಾಲೋ ಮಾಡಿದ್ದಾರೆ. ಅತ್ತ ಚಂದನ್ ಕೂಡಾ ಅದೇ ಸಮಯಕ್ಕೆ ನಿವೇದಿತಾರನ್ನು ಅನ್ ಫಾಲೋ ಮಾಡಿದ್ದಾರೆ.
ಆದರೆ ಈ ಜೋಡಿ ಹಲವು ರೊಮ್ಯಾಂಟಿಕ್ ವಿಡಿಯೋ, ರೀಲ್ಸ್ ಗಳನ್ನು ಹಂಚಿಕೊಂಡಿದ್ದರು. ಇಬ್ಬರೂ ಈ ಫೋಟೋ, ವಿಡಿಯೋಗಳನ್ನು ಮಾತ್ರ ಹಾಗೆಯೇ ಇಟ್ಟುಕೊಂಡಿದ್ದಾರೆ. ವಿಚ್ಛೇದನ ಸುದ್ದಿ ಬಹಿರಂಗಪಡಿಸುತ್ತಿದ್ದಂತೇ ನೆಟ್ಟಿಗರು ನಿವೇದಿತಾರನ್ನು ಇನ್ನಿಲ್ಲದಂತೆ ಟ್ರೋಲ್ ಮಾಡಿದ್ದಾರೆ.