Select Your Language

Notifications

webdunia
webdunia
webdunia
webdunia

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ʼಗಂಗೆ ಬಾರೆ ತುಂಗೆ ಬಾರೆʼ ಬೆಡಗಿ ಸುನೈನಾ

sunaina

sampriya

, ಶನಿವಾರ, 8 ಜೂನ್ 2024 (11:34 IST)
Photo By X
ಕನ್ನಡದಲ್ಲಿ ಪ್ರಜ್ವಲ್‌ ದೇವರಾಜ್‌ ಅಭಿನಯದ ʼಗಂಗೆ ಬಾರೆ ತುಂಗೆ ಬಾರೆʼ ಸಿನಿಮಾದಲ್ಲಿ ನಟಿಸಿದ್ದ ನಟಿ, ಮಾಡೆಲ್‌ ಸುನೈನಾ ಅವರು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ತಮಿಳಿನ 'ಕಾದಲಿಲ್ ವಿಝುಂತೇನ್' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸುನೈನಾ ಅವರು, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸಿ ಹೆಸರು ಗಳಿಸಿದ್ದಾರೆ.  ಈಚೆಗೆ ಇವರು  ತಮಿಳಿನಲ್ಲಿ 'ಇನ್‌ಸ್ಪೆಕ್ಟರ್ ರಿಷಿ' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.

2008ರಲ್ಲಿ ಪ್ರಜ್ವಲ್ ದೇವರಾಜ್ ನಟಿಸಿದ್ದ ‘ಗಂಗೆ ಬಾರೆ ತುಂಗೆ ಬಾರೆ’ ಸಿನಿಮಾದಲ್ಲಿ ಗಂಗೆಯ ಪಾತ್ರದಲ್ಲಿ ಮಿಂಚಿದ್ದರು. ಇದೇ ಅವರ ಕೊನೆಯ ಕನ್ನಡ ಸಿನಿಮಾ.

ತಮ್ಮ ಇನ್‌ಸ್ಟಾಗ್ರಾಂನಲ್ಲಿ ರಿಂಗ್‌ ಧರಿಸಿ ಫೋಟೋ ಹಂಚಿಕೊಂಡಿದ್ದಾರೆ. ಆದರೆ ಹುಡುಗ ಯಾರೆಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಫೋಟೋ ಕೆಳಗಡೆ ಬರೆದುಕೊಂಡಿರುವ ಅವರು, ʼಹಾಯ್, ನನ್ನ ಕೊನೆಯ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವು ಲೇಖನಗಳನ್ನು ನಾನು ನೋಡಿದ್ದೇನೆ ಮತ್ತು ನಾನು ನಿಜ ಕೂಡಾ ಹೌಡು. ಖುಷಿಯಿಂದ ಇದನ್ನು ಸ್ಪಷ್ಟಪಡಿಸಲು ಇಷ್ಟಪಡುತ್ತೇನೆ.  ಬರುತ್ತಿರುವ ಎಲ್ಲಾ ಅದ್ಭುತ ಸಂದೇಶಗಳಿಗೆ ಧನ್ಯವಾದಗಳು, ಇದು ತುಂಬಾ ಅರ್ಥವಾಗಿದೆʼ ಎಂದು ಬರೆದುಕೊಂಡಿದ್ದಾರೆ.

ಅಭಿನಂದನಾ ಸಂದೇಶಗಳು ಹರಿದು ಬರುತ್ತಿದ್ದರೂ ಸಹ, ನಟಿ ಇನ್ನೂ ತನ್ನ ನಿಶ್ಚಿತಾರ್ಥವನ್ನು ಖಚಿತಪಡಿಸಿಲ್ಲ ಅಥವಾ ವ್ಯಕ್ತಿಯ ಗುರುತನ್ನು ಬಹಿರಂಗಪಡಿಸಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಚಿರಾಗ್‌ ಪಾಸ್ವಾನ್‌ಗೆ ಬಿಗಿ ಅಪ್ಪುಗೆ ಕೊಟ್ಟ ಕಂಗನಾ, ಕೆಮಿಸ್ಟ್ರಿ ಸೂಪರ್‌ ಎಂದಾ ನೆಟ್ಟಿಗರು