Select Your Language

Notifications

webdunia
webdunia
webdunia
webdunia

ದುನಿಯಾ ವಿಜಯ್‌ ಬರ್ತ್‌ಡೇ: ಅಭಿಮಾನಿಗಳಿಗೆ ನಟನಿಂದ ಕಹಿಸುದ್ದಿಯ ಜೊತೆಗೆ ಗುಡ್‌ನ್ಯೂಸ್‌

ದುನಿಯಾ ವಿಜಯ್‌ ಬರ್ತ್‌ಡೇ: ಅಭಿಮಾನಿಗಳಿಗೆ ನಟನಿಂದ ಕಹಿಸುದ್ದಿಯ ಜೊತೆಗೆ ಗುಡ್‌ನ್ಯೂಸ್‌

Sampriya

ಬೆಂಗಳೂರು , ಶನಿವಾರ, 18 ಜನವರಿ 2025 (14:16 IST)
Photo Courtesy X
ಬೆಂಗಳೂರು: ಇದೇ 20ರಂದು ನಟ ದುನಿಯಾ ವಿಜಯ್‌ ಅವರಿಗೆ ಬರ್ತ್‌ಡೇ ಸಂಭ್ರಮ. ಆದರೆ, ಅವರು ಈ ಬಾರಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಹೀಗಾಗಿ, ಮನೆಯ ಬಳಿ ಯಾರೂ ಬರದಂತೆ ಮನವಿ ಮಾಡಿದ್ದಾರೆ.

ದುನಿಯಾ ವಿಜಯ್‌  ಅವರು ನಟನೆಯ ಜೊತೆಗೆ ನಿರ್ದೇಶನದ ಕೆಲಸದಲ್ಲಿ ಈಗ ಬ್ಯುಸಿಯಾಗಿದ್ದಾರೆ. ರಾಜ್ಯದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಅವರು ಈ ಬಾರಿ ಬರ್ತ್‌ಡೇಗೆ ಕಹಿ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಆದರೆ, ಮತ್ತೊಂದು ಗುಡ್‌ ನ್ಯೂಸ್‌ ನೀಡಿದ್ದಾರೆ.

ನನ್ನ ಪ್ರೀತಿಯ ಅಭಿಮಾನಿಗಳೇ, ಪ್ರತಿ ವರ್ಷವೂ ನನ್ನ ಹುಟ್ಟುಹಬ್ಬವನ್ನು ನಿಮ್ಮ ಮನೆಯ ಊರಿನ ಹಬ್ಬವನ್ನಾಗಿ ನೀವುಗಳು ಅಂದರೆ ನನ್ನ ಅಭಿಮಾನಿಗಳು ಆಚರಣೆ ಮಾಡುತ್ತಾ ಇದ್ದೀರಿ. ಈ ಬಾರಿಯೂ ನಿಮ್ಮ ಜೊತೆ ನಾನು ಹುಟ್ಟು ಹಬ್ಬವನ್ನು ಆಚರಿಸಬೇಕು ಎಂಬ ಆಸೆ ಇತ್ತು. ಆದರೆ ಕೆಲಸ ಎಂಬ ಹೊಣೆ ನನ್ನ ಮೇಲಿದೆ. ತಾವೆಲ್ಲರೂ ನಾನು ಮಾಡುವ ಕೆಲಸಕ್ಕೆ ನನ್ನ ಜೊತೆ ನಿಂತು ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ್ದೀರಾ. ಪ್ರತಿ ಬಾರಿಯಂತೆ ಈ ಬಾರಿ ನಾನು ಹುಟ್ಟುಹಬ್ಬದ ದಿನ ನನ್ನ ತಾಯಿ, ತಂದೆ ಸಮಾಧಿ ಬಳಿ ಸಿಗುವುದಿಲ್ಲ. ಅಂದು ಜಡೇಶ್ ಕೆ. ಹಂಪಿ ನಿರ್ದೇಶನ ಮಾಡುತ್ತಿರುವ ಸಿನಿಮಾ ಚಿತ್ರೀಕರಣದಲ್ಲಿರುತ್ತೇನೆ. ನಿಮ್ಮ ಪ್ರೀತಿ ಅಭಿಮಾನದ ನಿರೀಕ್ಷೆಯಂತೆ ಅಂದೇ VK 29 ಚಿತ್ರದ ಫಸ್ಟ್ ಲುಕ್ ನಿಮಗಾಗಿ ಬಿಡುಗಡೆ ಮಾಡ್ತಿದ್ದೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ದುನಿಯಾ ವಿಜಯ್ ಬರೆದುಕೊಂಡಿದ್ದಾರೆ.

ಶನಿವಾರ ಮತ್ತು ಭಾನುವಾರ ನಾನೂ ಊರಲ್ಲಿ ಇರುವುದಿಲ್ಲ. ದಯವಿಟ್ಟು ಯಾರೂ ಕೂಡ ಮನೆ ಬಳಿ ಬಂದು ಕಾಯಬೇಡಿ. ಧನ್ಯವಾದಗಳು ಎಂದು ನಟ ವಿಶೇಷ ಮನವಿ ಮಾಡಿದ್ದಾರೆ.  

ಪುತ್ರಿ ಮಗಳು ಮೋನಿಷಾ ಅವರ ಚೊಚ್ಚಲ ಸಿನಿಮಾವನ್ನು ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. ಜಡೇಶ್ ಕೆ. ಹಂಪಿ ಡೈರೆಕ್ಷನ್ ಸಿನಿಮಾದಲ್ಲಿ ನಟ ಬ್ಯುಸಿಯಾಗಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸೈಫ್ ಅಲಿ ಖಾನ್ ಚಿಕಿತ್ಸೆಗೆ ಎರಡು ದಿನಕ್ಕೆ ಆದ ವೆಚ್ಚವೆಷ್ಟು, ಅವರು ಖರ್ಚು ಮಾಡಿದ್ದೆಷ್ಟು