Select Your Language

Notifications

webdunia
webdunia
webdunia
webdunia

ಭೀಮಾ ಸೂಪರ್‌ಹಿಟ್‌ ಬೆನ್ನಲ್ಲೇ ಹೊಸ ಸಿನಿಮಾ ಘೋಷಣೆ ಮಾಡಿದ ದುನಿಯಾ ವಿಜಯ್‌

Duniya Vijay

Sampriya

ಬೆಂಗಳೂರು , ಮಂಗಳವಾರ, 27 ಆಗಸ್ಟ್ 2024 (13:56 IST)
Photo Courtesy X
ಬೆಂಗಳೂರು: ದುನಿಯಾ ವಿಜಯ್‌ ಅವರು ತಮ್ಮ ಭೀಮಾ ಸಿನಿಮಾ ಸೂಪರ್‌ ಹಿಟ್‌ ಆದ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಚಿತ್ರಮಂದರಿಗಳಲ್ಲಿ ಭೀಮಾ ಚಿತ್ರ ಸದ್ದು ಮಾಡುತ್ತಿರುವಾಗಲೇ ಹೊಸ ಸಿನಿಮಾದ ಶೀರ್ಷಿಕೆಯನ್ನು ಘೋಷಣೆ ಮಾಡಿದ್ದಾರೆ.

ಸಲಗ ಹಾಗೂ ಭೀಮಾ ಸಿನಿಮಾವನ್ನು ವಿಜಯ್‌ ನಿರ್ದೇಶನ ಮಾಡಿದ್ದು, ಎರಡೂ ಚಿತ್ರಗಳು ಅವರಿಗೆ ಯಶಸ್ಸನ್ನು ತಂದುಕೊಂಡಿದೆ. ಇದೀಗ ಆ ಸಿನಿಮಾ ತಂಡವೇ ಈ ಹೊಸ ಸಿನಿಮಾದ ಭಾಗವಾಗಿರಲಿದೆ ಎಂದು ವಿಜಯ್‌ ಹೇಳಿದ್ದಾರೆ.

ಸದ್ಯಕ್ಕೆ ಈ ಸಿನಿಮಾಗೆ ವಿಕೆ 30 ಎಂಬ ಹೆಸರಿನಲ್ಲಿ ಶೀರ್ಷಿಕೆ ಬಿಡುಗಡೆಯಾಗಿದೆ. ವಿಜಯ್‌ ಅವರ 30ನೇ ಸಿನಿಮಾ ಇದಾಗಿದೆ. ಸಿನಿಮಾಗೆ ಆರ್‌ಆರ್‌ ವೆಟ್ರಿ ವೇಲ್‌(ತಂಬಿ) ಆ್ಯಕ್ಷನ್‌ ಕಟ್‌ ಹೇಳಲಿದ್ದು, ಚಿತ್ರದ ಕಥೆಯೂ ಅವರದ್ದೇ ಆಗಿದೆ.

ಸಲಗ ಮತ್ತು ಭೀಮ ಸಿನಿಮಾದಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ಚಿತ್ರದ ಪೋಸ್ಟರ್‌ ಭಿನ್ನವಾಗಿದ್ದು, ಹೊಸ ಲುಕ್‌ನಲ್ಲಿ ವಿಜಯ್‌ ಕಾಣಿಸಿಕೊಂಡಿದ್ದಾರೆ. ಕಾಡಿನಲ್ಲಿ ನಡೆಯುವ ಕಥೆಯಂತಿದೆ ಚಿತ್ರದ ಪೋಸ್ಟರ್‌. ಇದು ಚಿತ್ರದ ಕಥೆಯ ಬಗ್ಗೆಯೂ ಕುತೂಹಲ ಹುಟ್ಟಿಸುವಂತಿದೆ. ಪ್ರಸ್ತುತ ಕಾಟೇರ ಕಥೆಗಾರ ಜಡೇಶ್‌ ಕೆ.ಹಂಪಿ ನಿರ್ದೇಶನದ ಸಿನಿಮಾದಲ್ಲಿ ವಿಜಯ್‌ ತೊಡಗಿಸಿಕೊಂಡಿದ್ದಾರೆ.

ದುನಿಯಾ ಸಿನಿಮಾ ಮೂಲಕ ನಾಯಕನಾಗಿ ಚಂದನವನಕ್ಕೆ ಎಂಟ್ರಿ ಕೊಟ್ಟಿದ ವಿಜಯ್‌ ಸಿನಿ ಪಯಣಕ್ಕೆ ಸಲಗ ಹಾಗೂ ಭೀಮ ದೊಡ್ಡ ತಿರುವನ್ನೇ ನೀಡಿವೆ. ಕನ್ನಡದ ಜೊತೆಗೆ ಟಾಲಿವುಡ್‌ ಅಂಗಳದಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ವೀರ ಸಿಂಹರೆಡ್ಡಿ ಚಿತ್ರದಲ್ಲಿ ಖಳನಾಯಕನಾಗಿಯೂ ಮಿಂಚಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಲ್ ಮೊಂಥೆರೋ, ತರುಣ್ ಸುಧೀರ್ ಗೆ ಮದುವೆ ಆದ ಮೇಲೆ ಎಲ್ಲಾ ಆಯ್ತಾ ಎಂದು ಕೇಳಿದ ಅನುಶ್ರೀ