Select Your Language

Notifications

webdunia
webdunia
webdunia
webdunia

ದರ್ಶನ್ ಪರಿಸ್ಥಿತಿಗೆ ರಚಿತಾ ರಾಮ್ ಮೇಲೆ ಅಭಿಮಾನಿಗಳ ಸಿಟ್ಟು ಯಾಕೆ

Darshan Rachitha Ram
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಗೆ ರಾಜಾತಿಥ್ಯ ನೀಡುತ್ತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ ಅಭಿಮಾನಿಗಳ ಸಿಟ್ಟು ರಚಿತಾ ರಾಮ್ ಮೇಲೆ ತಿರುಗಿದೆ.

ನಟ ದರ್ಶನ್ ಫೋಟೋ ವೈರಲ್ ಆದ ಬಳಿಕ ಅವರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ತಯಾರಿ ನಡೆದಿದೆ. ಎಚ್ಚೆತ್ತುಕೊಂಡ ಸರ್ಕಾರ ಜೈಲಿನ ಕೆಲವು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಲ್ಲದೆ, ತಪಾಸಣೆಯನ್ನೂ ಮಾಡಿದೆ. ಇದೆಲ್ಲದಕ್ಕೂ ಈಗ ರಚಿತಾ ರಾಮ್ ಕಾರಣ ಎಂದು ದರ್ಶನ್ ಅಭಿಮಾನಿಗಳು ಸಿಟ್ಟಾಗಿದ್ದಾರೆ.

ಅಷ್ಟಕ್ಕೂ ರಚಿತಾ ಹೇಗೆ ಕಾರಣರಾಗುತ್ತಾರೆ ಎಂದು ನಿಮಗೆ ಪ್ರಶ್ನೆ ಮೂಡಬಹುದು. ಮೊನ್ನೆಯಷ್ಟೇ ರಚಿತಾ ರಾಮ್ ಜೈಲಿಗೆ ಬಂದು ದರ್ಶನ್ ರನ್ನು ಭೇಟಿ ಮಾಡಿಕೊಂಡು ಹೋಗಿದ್ದಾರೆ. ರಚಿತಾ ಜೊತೆ ಮಾತನಾಡಲು ದರ್ಶನ್ ತಮ್ಮ ಬ್ಯಾರಕ್ ಬಿಟ್ಟು ಹೊರಗೆ ಬಂದಿದ್ದಾರೆ. ರಚಿತಾ ಹೋದ ಮೇಲೆ ದರ್ಶನ್ ಬ್ಯಾರಕ್ ಗೆ ತೆರಳುವಾಗ ವಿಲ್ಸನ್ ಗಾರ್ಡನ್ ನಾಗ ಕರೆದಿದ್ದಾನೆ.

ಈ ಕಾರಣಕ್ಕೆ ದರ್ಶನ್ ಕೂಡಾ ಮಾತನಾಡಿಕೊಂಡು ಧಮ್ ಎಳೆದುಕೊಂಡು ಅಲ್ಲಿ ಕೂತಿದ್ದಾರೆ. ಇದನ್ನು ಜೈಲಿನಲ್ಲಿರುವ ನಾಗನ ವೈರಿಗಳೇ ಫೋಟೋ ಮಾಡಿ ಹರಿಯಬಿಟ್ಟಿದ್ದಾರೆ ಎನ್ನಲಾಗಿದೆ. ಹೀಗಾಗಿ ರಚಿತಾ ಭೇಟಿಯಾಗಲೆಂದು ಹೊರಗೆ ಬಂದಿದ್ದಕ್ಕೇ ದರ್ಶನ್ ಗೆ ಈ ಗತಿ ಬಂದಿದೆ ಎಂದು ಅಭಿಮಾನಿಗಳು ಸಿಟ್ಟಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Padmaja Rao: ನಟಿ ಪದ್ಮಜಾ ರಾವ್ ಗೆ 3 ತಿಂಗಳು ಜೈಲು ಶಿಕ್ಷೆ