Select Your Language

Notifications

webdunia
webdunia
webdunia
webdunia

ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳ ಬಗ್ಗೆ ಅಂದೇ ಗಮನ ಸೆಳೆದಿದ್ದ ಐಪಿಎಸ್ ಅಧಿಕಾರಿ ಡಿ ರೂಪ

D Roopa

Krishnaveni K

ಬೆಂಗಳೂರು , ಸೋಮವಾರ, 26 ಆಗಸ್ಟ್ 2024 (12:57 IST)
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಇಂತಹ ಘಟನೆಗಳಾಗುತ್ತಿದೆ ಎಂದು ಐಪಿಎಸ್ ಅಧಿಕಾರಿ ಡಿ ರೂಪ ವರದಿ ನೀಡಿದ್ದರು.

ಈ ಹಿಂದೆ ಜಯಲಲಿತಾ ಆಪ್ತೆ ಶಶಿಕಲಾ ಜೈಲಿನಲ್ಲಿದ್ದಾಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡುತ್ತಿರುವ ಬಗ್ಗೆ ಡಿ ರೂಪ ತನಿಖೆ ನಡೆಸಿ ವಿಸ್ತೃತ ವರದಿ ನೀಡಿದ್ದರು. ಅವರ ವರದಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಖೈದಿಗಳಿಗೆ ಮೊಬೈಲ್, ಸಿಗರೇಟು ಸೇರಿದಂತೆ ವಿಐಪಿ ಟ್ರೀಟ್ ಮೆಂಟ್ ನೀಡಲಾಗುತ್ತಿದೆ ಎಂದು ರೂಪ ವರದಿಯಲ್ಲಿ ಹೇಳಿದ್ದರು.

ಈ ಬಗ್ಗೆ ಒಂದು ಎಫ್ ಐಆರ್ ಕೂಡಾ ದಾಖಲಾಗಿತ್ತು. ಆದರೆ ಬಳಿಕ ಡಿ ರೂಪ ಅವರನ್ನೇ ವರ್ಗಾವಣೆ ಮಾಡಲಾಗಿತ್ತು. ಇದೀಗ ದರ್ಶನ್ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮತ್ತೆ ಜೈಲಿನ ಅಕ್ರಮಗಳು ಬಯಲಾಗಿದೆ. ಅಂದು ರೂಪ ನೀಡಿದ್ದ ವರದಿ ನಿಜವೆಂದು ಮತ್ತೆ ಸಾಬೀತಾಗಿದೆ.

ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿದ ಡಿ ರೂಪ ಜೈಲಿನಲ್ಲಿ ಇಂತಹದ್ದಕ್ಕೆಲ್ಲಾ ಅವಕಾಶವಿಲ್ಲ. ನಿಯಮಾವಳಿಗಳ ಪ್ರಕಾರ ಅವರ ಬ್ಯಾರಕ್ ನಲ್ಲಿರಬೇಕು. ಏನಾದರೂ ಕೆಲಸವಿದ್ದಾಗ ಮಾತ್ರ ಹೊರಗಡೆ ಕೂರಲು ಅವಕಾಶವಿರುತ್ತದೆ. ಆದರೂ ಸಿಗರೇಟು, ಕಾಫಿಗೆಲ್ಲಾ ಅವಕಾಶವಿರಲ್ಲ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಶಾಕಿಂಗ್ ವಿವರಣೆ ನೀಡಿದ ಆರೋಪಿ ಸಂಜಯ್ ರಾಯ್: ಕೋಲ್ಕತ್ತಾ ವೈದ್ಯೆ ಮರ್ಡರ್ ಕೇಸ್ ಗೆ ಸಿಗುತ್ತಾ ಟ್ವಿಸ್ಟ್