Select Your Language

Notifications

webdunia
webdunia
webdunia
webdunia

ಸುಳ್ಳು ಪತ್ತೆ ಪರೀಕ್ಷೆಯಲ್ಲಿ ಶಾಕಿಂಗ್ ವಿವರಣೆ ನೀಡಿದ ಆರೋಪಿ ಸಂಜಯ್ ರಾಯ್: ಕೋಲ್ಕತ್ತಾ ವೈದ್ಯೆ ಮರ್ಡರ್ ಕೇಸ್ ಗೆ ಸಿಗುತ್ತಾ ಟ್ವಿಸ್ಟ್

Sanjay Roy

Krishnaveni K

ಕೋಲ್ಕತ್ತಾ , ಸೋಮವಾರ, 26 ಆಗಸ್ಟ್ 2024 (10:49 IST)
ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ರೇಪ್ ಮಾಡಿ ಹತ್ಯೆ ಮಾಡಿದ ಆರೋಪದಲ್ಲಿ ಬಂಧಿತನಾಗಿರುವ ಆರೋಪಿ ಸಂಜಯ್ ರಾಯ್ ಸುಳ್ಳು ಪತ್ತೆ ಪರೀಕ್ಷೆಗೊಳಗಾಗಿದ್ದು, ಈ ವೇಳೆ ಆತ ಹೇಳಿದ ವಿಚಾರಗಳು ಕೇಸ್ ಗೆ ಮತ್ತೆ ಟ್ವಿಸ್ಟ್ ನೀಡುವ ಸಾಧ್ಯತೆಯಿದೆ.

ಆರ್ ಜಿ ಕರ್ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ವೈದ್ಯೆಯ ಮೃತದೇಹ ಪತ್ತೆಯಾಗಿತ್ತು. ಆಕೆಯ ಮೇಲೆ ಅತ್ಯಾಚಾರರ ನಡೆದಿರುವುದು ದೃಢಪಟ್ಟಿತ್ತು. ಸಿಸಿಟಿವಿ ದೃಶ್ಯ ಮತ್ತು ಸ್ಥಳದಲ್ಲಿ ಪತ್ತೆಯಾಗಿದ್ದ ಸಂಜಯ್ ರಾಯ್ ಬ್ಲೂಟೂತ್ ಇತ್ಯಾದಿ ಸಾಕ್ಷಿಗಳಿಂದಾಗಿ ಆತನನ್ನು ಬಂಧಿಸಲಾಗಿತ್ತು. ಆದರೆ ಆತ ತಾನು ತಪ್ಪು ಮಾಡಿಲ್ಲ ಎನ್ನುತ್ತಲೇ ಇದ್ದಾನೆ. ಈ ನಡುವೆ ಸಿಬಿಐ ಅಧಿಕಾರಿಗಳು ಆತನ ಸುಳ್ಳು ಪತ್ತೆ ಪರೀಕ್ಷೆಗೆ ಸುಪ್ರೀಂಕೋರ್ಟ್ ಅನುಮತಿ ಪಡೆದಿದ್ದರು.

ಅದರಂತೆ ಮೊನ್ನೆ ಸಂಜಯ್ ರಾಯ್ ಗೆ ಸುಳ್ಳು ಪತ್ತೆ ಪರೀಕ್ಷೆ ನಡೆಸಲಾಗಿದೆ. ಆದರೆ ಈ ವೇಳೆ ಆತ ನಾನು ತಪ್ಪು ಮಾಡಿಲ್ಲ ಎಂದೇ ಮತ್ತೆ ಪುನರಾವರ್ತಿಸಿದ್ದಾನೆ. ನಾನು ಸ್ಥಳಕ್ಕೆ ಹೋದಾಗಲೇ ವೈದ್ಯೆ ಮೃತಳಾಗಿದ್ದಳು ಎಂದಿದ್ದಾನೆ. ಆ ಕ್ಷಣದಲ್ಲಿ ಭಯಗೊಂಡು ಸ್ಥಳದಿಂದ ಪರಾರಿಯಾಗಿದ್ದೆ ಎಂದಿದ್ದಾನೆ. ಮೊದಲು ಆತ ಕೃತ್ಯವನ್ನು ಒಪ್ಪಿಕೊಂಡಿದ್ದ. ಬಳಿಕ ಯು ಟರ್ನ್ ಹೊಡೆದಿದ್ದ. ಜೈಲು ವಾರ್ಡನ್ ಬಳಿಯೂ ನನಗೆ ಕೊಲೆ ಬಗ್ಗೆ ಗೊತ್ತೇ ಇಲ್ಲ ಎಂದಿದ್ದ. ಇದೀಗ ಸುಳ್ಳು ಪತ್ತೆ ಪರೀಕ್ಷೆಯಲ್ಲೂ ನಾನು ನಿರಪರಾಧಿ ಎಂದು ಹೇಳಿಕೊಂಡಿದ್ದಾನೆ.

ಆದರೆ ಆತನ ಮುಖದ ಮೇಲಾದ ಗಾಯಗಳಿಗೆ ಕಾರಣ ಬಗ್ಗೆ ಕೇಳಿದಾಗ ವ್ಯಕ್ತವಾದ ಉತ್ತರ ನೀಡಲು ವಿಫಲನಾಗಿದ್ದಾನೆ. ಹೀಗಾಗಿ ಆತ ತನಿಖಾಧಿಕಾರಿಗಳನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾನೆ ಎನ್ನಲಾಗಿದೆ. ಆದರೆ ಆತ ನೀಡಿದ ಈ ಹೇಳಿಕೆಗಳಿಂದಾಗಿ ಪ್ರಕರಣದಲ್ಲಿ ಬೇರೆಯವರ ಕೈವಾಡವಿದೆಯೇ ಎಂದು ಸಿಬಿಐ ಅಧಿಕಾರಿಗಳು ಮತ್ತಷ್ಟು ಕೂಲಂಕುಷವಾಗಿ ತನಿಖೆ ನಡೆಸಬೇಕಾಗುತ್ತದೆ. ಈ ಟೆಸ್ಟ್ ಕೇಸ್ ಗೆ ಟ್ವಿಸ್ಟ್ ನೀಡಬಹುದಾ ಎಂದು ಕಾದು ನೋಡಬೇಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಗೆ ರಾಜಾತಿಥ್ಯ ನೀಡಿದ್ದಕ್ಕೆ 7 ಜೈಲು ಸಿಬ್ಬಂದಿಗಳು ಅಮಾನತು