Select Your Language

Notifications

webdunia
webdunia
webdunia
Tuesday, 8 April 2025
webdunia

ಕೋಲ್ಕತ್ತಾ ವೈದ್ಯೆಯ ರೇಪ್ ಮಾಡುವ ಹಿಂದಿನ ರಾತ್ರಿ ಆರೋಪಿ ಸಂಜಯ್ ರಾಯ್ ಏನು ಮಾಡಿದ್ದ ಗೊತ್ತಾ

Kolkota Sanjay Roy

Krishnaveni K

ಕೋಲ್ಕತ್ತಾ , ಬುಧವಾರ, 21 ಆಗಸ್ಟ್ 2024 (13:48 IST)
ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯ ವೈದ್ಯೆ ಮೇಲೆ ರೇಪ್ ಆಂಡ್ ಮರ್ಡರ್ ಮಾಡುವ ಮುನ್ನ ಆರೋಪಿ ಸಂಜಯ್ ರಾಯ್ ಹಿಂದಿನ ರಾತ್ರಿ ಏನು ಮಾಡಿದ್ದ ಎಂಬ ವಿಚಾರ ಈಗ ಸಿಬಿಐ ತನಿಖೆಯಲ್ಲಿ ಬಹಿರಂಗವಾಗಿದೆ.

ಆರ್ ಜಿ ಕರ್ ಮೆಡಿಕಲ್ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ ಟ್ರೈನಿ ವೈದ್ಯೆ ಮೃತದೇಹ ಪತ್ತೆಯಾಗಿತ್ತು. ಕೊಲೆಗೆ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ದೃಢವಾಗಿದೆ. ಆರೋಪಿ ಸಂಜಯ್ ಕೃತ್ಯ ನಡೆದ ಸೆಮಿನಾರ್ ಹಾಲ್ ನ ಒಳಗೆ ಹೋಗುವುದು ಮತ್ತು ಹೊರಗೆ ಬರುವುದು ಸಿಸಿಟಿವಿ ದೃಶ್ಯದಲ್ಲಿ ಖಚಿತವಾಗಿತ್ತು.

ಆತನನ್ನು ಬಂಧಿಸಿ ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಆತನ ಒಂದೊಂದೇ ಕರ್ಮಕಾಂಡಗಳು ಬಯಲಾಗುತ್ತಿವೆ. ರೇಪ್ ಮಾಡುವ ಹಿಂದಿನ ದಿನ ರಾತ್ರಿ ಆತ ಎರಡೆರಡು ವೇಶ್ಯಾಗೃಹಕ್ಕೆ ಭೇಟಿ ನೀಡಿದ್ದ ಎಂಬ ಅಂಶ ತನಿಖೆಯಲ್ಲಿ ಬಹಿರಂಗವಾಗಿದೆ.

ಆತನ ಮೊಬೈಲ್ ನಲ್ಲೂ ಸಾಕಷ್ಟು ಪೋರ್ನ್ ವಿಡಿಯೋಗಳು ಲಭ್ಯವಾಗಿತ್ತು. ಇದರಿಂದಾಗಿ ಆತನಿಗೆ ಅಶ್ಲೀಲ ವಿಡಿಯೋಗಳನ್ನು ನೋಡುವ ಚಟವಿತ್ತು ಎನ್ನುವುದು ಖಚಿತವಾಗಿತ್ತು. ಇದೀಗ ವೇಶ್ಯಾಗೃಹಕ್ಕೆ ಹೋಗಿರುವ ವಿಚಾರವೂ ಬೆಳಕಿಗೆ ಬಂದಿದ್ದು, ಆತನೊಬ್ಬ ವಿಕೃತ ಕಾಮಿ ಎಂಬುದು ಬಯಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಪಾಲರಿಗೆ ಅವಮಾನ ಮಾಡಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ