Select Your Language

Notifications

webdunia
webdunia
webdunia
webdunia

ಮೋದಿಗೆ ಮೊದಲಿನಂತೆ ಸರ್ಕಾರ ನಡೆಸಲಾಗುತ್ತಿಲ್ಲ ಎಂಬುದಕ್ಕೆ ಈ ನಾಲ್ಕು ಘಟನೆಗಳೇ ಸಾಕ್ಷಿ

PM Modi

Krishnaveni K

ನವದೆಹಲಿ , ಬುಧವಾರ, 21 ಆಗಸ್ಟ್ 2024 (11:08 IST)
ನವದೆಹಲಿ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಅಧಿಕಾರಕ್ಕೇರಲು ಸಾಧ್ಯವಾಗದ ಹಿನ್ನಲೆಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೇರಿತು. ಆದರೆ ಮೋದಿಗೆ ಕಳೆದ ಎರಡು ಬಾರಿಯಂತೆ ಈ ಬಾರಿ ಸರ್ಕಾರ ನಡೆಸಲು ಆಗುತ್ತಿಲ್ಲ ಎನ್ನುವುದಕ್ಕೆ ಈ ನಾಲ್ಕು ಘಟನೆಗಳೇ ಸಾಕ್ಷಿಯಾಗಿವೆ.

ಮಿತ್ರ ಪಕ್ಷಗಳ ಬೆಂಬಲದೊಂದಿಗೆ ಸರ್ಕಾರ ರಚಿಸಿದಾಗ ಎಲ್ಲಾ ವಿಚಾರಕ್ಕೂ ಅವರ ಅಭಿಪ್ರಾಯಗಳೂ ಮುಖ್ಯವಾಗುತ್ತದೆ. ಆದರೆ ಈ ಹಿಂದೆ ಎರಡು ಬಾರಿಯೂ ಬಿಜೆಪಿಗೇ ಬಹುಮತವಿತ್ತು. ಹೀಗಾಗಿ ಮೋದಿ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ಅದು ಸಾಧ್ಯವಾಗುತ್ತಿಲ್ಲ.

ಅದಕ್ಕೆ ಲೇಟೆಸ್ಟ್ ಉದಾಹರಣೆ ಲ್ಯಾಟರಲ್ ಎಂಟ್ರಿ ನಿಯಮ ಹಿಂದೆ ಪಡೆದಿದ್ದು. ಈ ಒಂದೇ ತಿಂಗಳಲ್ಲಿ ನಾಲ್ಕು ಬಾರಿ ಮಸೂದೆ, ನಿಯಮಗಳನ್ನು ಕೇಂದ್ರ ಸರ್ಕಾರ ಹಿಂದೆ ಪಡೆದಿದೆ. ಇದೀಗ ಸರ್ಕಾರದ ಹಿರಿಯ ಹುದ್ದೆಗಳಿಗೆ ಐಎಎಸ್ ಹುದ್ದೆಯ ಅಧಿಕಾರಿಗಳ ಹೊರತಾಗಿ ಆಯಾ ಕ್ಷೇತ್ರಗಳಲ್ಲಿ ನುರಿತರಾಗಿರುವವರಿಗೆ ನೇರವಾಗಿ ನೇಮಕವಾಗಲು ಅವಕಾಶವಾಗುವಂತಹ ಲ್ಯಾಟರಲ್ ಎಂಟ್ರಿ ನಿಯಮ ಹೊರತರಲು ಕೇಂದ್ರ ಮುಂದಾಗಿತ್ತು. ಆದರೆ ಇದೀಗ ಪ್ರತಿಪಕ್ಷಗಳ ಜೊತೆಗೆ ಕೆಲವು ಮಿತ್ರ ಪಕ್ಷಗಳಿಂದಲೂ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಅದನ್ನು ಹಿಂಪಡೆಯಲಾಯಿತು.

ಇದಕ್ಕೆ ಮೊದಲು ವಕ್ಫ್ ಬೋರ್ಡ್ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಅದನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲು ನಿರ್ಧರಿಸಿತು. ಇದಕ್ಕೆ ಮೊದಲು ಇಂಡಕ್ಸೇಷನ್ ಪ್ರಯೋಜನ ವಾಪಸ್ ಪಡೆದಿತ್ತು. ಇದೇ ವರ್ಷ ಜುಲೈ 23 ರ ಮೊದಲು ಆಸ್ತಿ ಖರೀದಿಸಿದ ಮಾರಾಟದ ಮೇಲೆ ಸೂಚ್ಯಂಕ ಪ್ರಯೋಜನದೊಂದಿಗೆ ಶೇ.20 ಎಲ್ ಟಿಜಿಸಿ ತೆರಿಗೆ ಪಾವತಿಸುವ ಆಯ್ಕೆಯನ್ನು ತೆರಿಗೆದಾರರಿಗೆ ನೀಡಲು ನಿರ್ಧರಿಸುವ ಮೂಲಕ ಹಿಂದೆ ಸರಿಯಿತು. ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮದ ಮೇಲಿನ ನಿರ್ಬಂಧ ಕುರಿತು ಕಳವಳ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪ್ರಸಾರ ಮಸೂದೆಯ ತರಲು ಉದ್ದೇಶಿಸಲಾಗಿತ್ತು. ಆದರೆ ಟೀಕೆಗಳು ಬಂದ ಬೆನ್ನಲ್ಲೇ ಹೊಸ ಮಸೂದೆ ತಯಾರಿಸಲು ಸಮಾಲೋಚನೆ ನಡೆಸುವುದಾಗಿ ಹೇಳಿತು. ಈ ಮೂಲಕ ಕಳೆದ ಒಂದೇ ತಿಂಗಳಲ್ಲಿ ನಾಲ್ಕು ಹೊಸ ನಿಯಮ ರೂಪಿಸಲು ಹೋಗಿ ಬಳಿಕ ಅದರಿಂದ ಹಿಂದೆ ಸರಿದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯನವರನ್ನು ಯಾವುದೇ ಕಾರಣಕ್ಕೂ ಕಿತ್ತಾಕ್ಬೇಡಿ ಪ್ಲೀಸ್: ಎಲ್ಲಾ ಸಿದ್ದುಗಾಗಿ