Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರದಿಂದ ಸದ್ಯದಲ್ಲೇ ಪಿಎಂ ಕಿಸನ್ ಸಮ್ಮಾನ್ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ

Farmers

Krishnaveni K

ನವದೆಹಲಿ , ಮಂಗಳವಾರ, 16 ಜುಲೈ 2024 (09:12 IST)
ನವದೆಹಲಿ: ಈ ಬಾರಿ ಬಜೆಟ್ ನಲ್ಲಿ ಕೇಂದ್ರ ಸರ್ಕಾರದಿಂದ ರೈತರಿಗೆ ಸಿಹಿ ಸುದ್ದಿ ಸಿಗುವ ನಿರೀಕ್ಷೆಯಿದೆ. ಕೇಂದ್ರ ಬಜೆಟ್ ಮಂಡನೆಗೆ ಕೆಲವೇ ದಿನ ಬಾಕಿಯಿದ್ದು ರೈತರು ಭಾರೀ ನಿರೀಕ್ಷೆಯಲ್ಲಿದ್ದಾರೆ.

ಕೇಂದ್ರ ಸರ್ಕಾರ ರೈತರಿಗಾಗಿ ಈಗ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ 6000 ರೂ. ನೀಡುತ್ತಿದೆ. ಇದನ್ನು ಅನೇಕ ಫಲಾನುಭವಿ ರೈತರಿಗೆ ನೇರವಾಗಿ ಅವರ ಖಾತೆಗಳಿಗೇ ನೀಡಲಾಗುತ್ತಿದೆ. 2019 ರಲ್ಲಿ ಮೋದಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಇದರಿಂದ ಅನೇಕರಿಗೆ ಅನುಕೂಲವಾಗುತ್ತಿದೆ.

ಇದೀಗ ಮೋದಿ ಸರ್ಕಾರ ಮೂರನೇ ಅವಧಿ ಆರಂಭವಾಗಿದ್ದು, ಈ ಬಾರಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ನೀಡಲಾಗುತ್ತಿರುವ ಹಣ ಹೆಚ್ಚಳ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಈಗ ನೀಡಲಾಗುತ್ತಿರುವ 6000 ರೂ. ಬದಲಾಗಿ 2 ಸಾವಿರ ರೂ ಹೆಚ್ಚಳ ಮಾಡಿ 8000 ರೂ. ನೀಡುವ ಸಾಧ್ಯತೆಯಿದೆ. ಇದನ್ನು ಈ ಬಜೆಟ್ ನಲ್ಲಿ ಘೋಷಣೆ ಮಾಡಬಹುದು ಎಂಬ ನಿರೀಕ್ಷೆಯಿದೆ.

ಅನೇಕ ಕೃಷಿ ತಜ್ಞರು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಸಲಹೆ ನೀಡಿದ್ದಾರೆ .ಹೀಗಾಗಿ ತಜ್ಞರ ಸಲಹೆಯನ್ನು ಕೇಂದ್ರ ಪರಿಗಣಿಸುವ ಸಾಧ್ಯತೆಯಿದೆ. ಒಟ್ಟು ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರ ತಲಾ 2 ಸಾವಿರ ರೂ.ಗಳಂತೆ ರೈತರ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತಿದ್ದಾರೆ. ಇನ್ನೀಗ ಈ ಹಣ ಏರಿಕೆಯಾಗುವ ನಿರೀಕ್ಷೆ ರೈತರದ್ದು. ಕಳೆದ ಮಧ್ಯಂತರ ಬಜೆಟ್ ನಲ್ಲೂ ಕೇಂದ್ರ ಹೆಚ್ಚಿನ ಕೊಡುಗೆ ನೀಡಿರಲಿಲ್ಲ. ಹೀಗಾಗಿ ಈ ಬಾರಿ ಬಂಪರ್ ಕೊಡುಗೆ ನಿರೀಕ್ಷಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕ ಮಳೆ ವರದಿ: ಈ ಜಿಲ್ಲೆಗಳಲ್ಲಿ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜಾ ದಿನ