Select Your Language

Notifications

webdunia
webdunia
webdunia
webdunia

ಕೋಲ್ಕತ್ತಾ ಟ್ರೈನಿ ವೈದ್ಯೆ ಕೊನೆಯದಾಗಿ ಮಾತನಾಡಿದ್ದು ಇವರ ಬಳಿ: ಯಾವ ಪಶ್ಚಾತ್ತಾಪವೂ ಇಲ್ಲದೇ ಇಂಚಿಂಚೂ ವರದಿ ನೀಡಿದ ಆರೋಪಿ

Kolkata accused Sanjay Roy

Krishnaveni K

ಕೋಲ್ಕತ್ತಾ , ಶುಕ್ರವಾರ, 23 ಆಗಸ್ಟ್ 2024 (11:44 IST)
ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯ ಟ್ರೈನಿ ವೈದ್ಯೆಯ ಮೇಲೆ ನಡೆದ ರೇಪ್ ಆಂಡ್ ಮರ್ಡರ್ ಪ್ರಕರಣದ ಬಗ್ಗೆ ಮತ್ತಷ್ಟು ಕುತೂಹಲಕಾರೀ ಅಂಶಗಳು ಈಗ ಬೆಳಕಿಗೆ ಬಂದಿದೆ.

ಆರೋಪಿ ಸಂಜಯ್ ರಾಯ್ ನನ್ನು ಸಿಸಿಟಿವಿ ದೃಶ್ಯಾವಳಿ ಮತ್ತು ಮೃತದೇಹದ ಪಕ್ಕದಲ್ಲಿದ್ದ ಬ್ಲೂ ಟೂತ್ ಸೆಟ್ ಆಧಾರದಲ್ಲಿ ಆತನನ್ನು ಬಂಧಿಸಲಾಗಿತ್ತು. ಇದೀಗ ಆತ ಘಟನೆಯ ಬಗ್ಗೆ ಇಂಚಿಂಚೂ ಬಿಡದೇ ತಪ್ಪೊಪ್ಪಿಕೊಂಡಿದ್ದಾನೆ. ಸಿಬಿಐ ಅಧಿಕಾರಿಗಳು ಆತನನ್ನು ತೀವ್ರ ವಿಚಾರಣೆಗೊಳಪಡಿಸಿದ್ದು  ವಿಚಾರಣೆ ವೇಳೆ ಆತನಿಗೆ ಕನಿಷ್ಠ ಪಶ್ಚಾತ್ತಾಪವೂ ಇಲ್ಲ ಎನ್ನಲಾಗಿದೆ.

ತಾನು ನಡೆಸಿದ ಕೃತ್ಯದ ಬಗ್ಗೆ ಕೊಂಚವೂ ತಡವರಿಸದೇ ಆರೋಪಿ ಘಟನೆ ಬಗ್ಗೆ ಹೇಳಿಕೊಂಡಿದ್ದಾನೆ. ಈತ ಹೇಳುತ್ತಿರುವ ರೀತಿ ನೋಡಿದರೆ ಆತನಿಗೆ ಸ್ವಲ್ಪವೂ ತಾನು ಮಾಡಿದ ಕೃತ್ಯದ ಬಗ್ಗೆ ಪಶ್ಚಾತ್ತಾಪವಿಲ್ಲವೆನಿಸುತ್ತದೆ ಎಂದು ತನಿಖಾಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಇನ್ನು, ಕೃತ್ಯ ನಡೆಸುವ ಒಂದು ದಿನ ಹಿಂಚೆಯೇ ವೈದ್ಯೆಯನ್ನು ಆತ ಹಿಂಬಾಲಿಸುತ್ತಿದ್ದ ಎಂಬ  ಅಂಶ ಬೆಳಕಿಗೆ ಬಂದಿದೆ. ಸಿಸಿಟಿವಿ ದೃಶ್ಯಗಳಲ್ಲಿ ಆತ ವೈದ್ಯೆಯನ್ನು ಹಿಂಬಾಲಿಸುವುದು ಬೆಳಕಿಗೆ ಬಂದಿದೆ. ಸುಸ್ತಾಯಿತೆಂದು ಟ್ರೈನಿ ವೈದ್ಯೆ ಸುಮಾರು 2.30 ರ ಸುಮಾರಿಗೆ ಸೆಮಿನಾರ್ ಗೆ ಹೋಗಿದ್ದಾರೆ. ಆದರೆ ಒಳಗೆ ಹೋಗುವ ಮೊದಲು ಆಕೆ ಜ್ಯೂನಿಯರ್ ಡಾಕ್ಟರ್ ಒಬ್ಬರ ಜೊತೆ ಏನೋ ಮಾತನಾಡಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ. ಅದಾದ ಬಳಿಕ ವೈದ್ಯೆ ಸೆಮಿನಾರ್  ಹಾಲ್ ಒಳಗೆ ರೆಸ್ಟ್ ಮಾಡಲು ಹೋಗಿದ್ದಾರೆ. ವೈದ್ಯೆ ಹೋದ ಕೆಲವು ಹೊತ್ತಿನ ಬಳಿಕ ಆರೋಪಿ ಸಂಜಯ್ ರಾಯ್ ಸೆಮಿನಾರ್ ಹಾಲ್ ಒಳಗೆ ಹೋಗಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ಹೊರಗೆ ಬಂದಿದ್ದಾನೆ. ಬೆಳಗ್ಗಿನ ಹೊತ್ತಿಗೆ ವೈದ್ಯೆಯ ಮೃತದೇಹ ಸೆಮಿನಾರ್ ಹಾಲ್ ನಲ್ಲಿ ಪತ್ತೆಯಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ದೆಹಲಿಗೆ: ಜಿ ಪರಮೇಶ್ವರ್ ಗೆ ಯಾಕೆ ಕರೆದಿದ್ದಾರೆ ಅಂತಾನೇ ಗೊತ್ತಿಲ್ವಂತೆ