Select Your Language

Notifications

webdunia
webdunia
webdunia
webdunia

ಡಿ.ಕೆ.ಸುರೇಶ್ ಹೆಸರೇಳಿ ಚಿನ್ನ ವಂಚನೆ ಪ್ರಕರಣ: ಬಂಧನ ಭೀತಿಯಲ್ಲಿ ನಟ ಧರ್ಮೇಂದ್ರ

Sandalwood actor Dharmendra

Sampriya

ಬೆಂಗಳೂರು , ಭಾನುವಾರ, 29 ಡಿಸೆಂಬರ್ 2024 (14:46 IST)
Photo Courtesy X
ಬೆಂಗಳೂರು: ಚಿನ್ನದ ಅಂಗಡಿ ಮಾಲೀಕರಿಗೆ ವಂಚನೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ಧರ್ಮೇಂದ್ರನನ್ನು ಪೊಲೀಸರು ಯಾವುದೇ ಕ್ಷಣದಲ್ಲಿ ಬಂಧಿಸುವ ಸಾಧ್ಯತೆ ಇದೆ. ಬಂಧನ ಭೀತಿಯಲ್ಲಿರುವ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.

ಪೊಲೀಸ್ ನೋಟಿಸ್ ಸರ್ವ್ ಆಗುತ್ತಿದ್ದಂತೆ ನಟನ ಫೋನ್ ಸ್ವಿಚ್ ಆಫ್ ಆಗಿದೆ. ಬೆಂಗಳೂರಿನ ಮನೆಯಲ್ಲಿಯೂ ನಟ ಧರ್ಮೇಂದ್ರ ಪತ್ತೆಯಿಲ್ಲ. ಎಫ್‌ಐಆರ್ ದಾಖಲಾಗ್ತಿದ್ದಂತೆ ವಿಚಾರಣೆಗೆ ಹಾಜರಾಗಲು ಪೊಲೀಸರು ನೋಟಿಸ್ ನೀಡಿದ್ದರು. ಇದರ ಬೆನ್ನಲ್ಲೇ ನಟ ನಾಪತ್ತೆಯಾಗಿದ್ದಾರೆ.

ಐಶ್ವರ್ಯ ಗೌಡ ಹಾಗೂ ಹರೀಶ್ ಬಂಧನ ಆಗುತ್ತಿದ್ದಂತೆ ಬಂಧನ ಭೀತಿಯಲ್ಲಿ ತಲೆಮರೆಸಿಕೊಂಡಿದ್ದಾರೆ. ನಟ ಧರ್ಮೇಂದ್ರ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಿ ಚಂದ್ರಲೇಔಟ್ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವರಾಹಿ ಜ್ಯುವೆಲ್ಲರ್ಸ್ ಅಂಗಡಿ ಮಾಲೀಕರಿಗೆ ವಂಚನೆ ಕುರಿತು ಪ್ರಕರಣ ದಾಖಲಾಗಿದೆ. ಚಂದ್ರಾಲೇಔಟ್ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ನಲ್ಲಿ ಧರ್ಮೇಂದ್ರ 3ನೇ ಆರೋಪಿ ಆಗಿದ್ದಾರೆ. ಡಿ.ಕೆ.ಸುರೇಶ್ ಅವರಂತೆ ಹಲವರ ಜೊತೆ ಮಾತಾಡಿ ವಂಚನೆ ಎಸಗಿರುವ ಆರೋಪ ಎದುರಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದಕ್ಷಿಣ ಕೊರಿಯಾ ವಿಮಾನ ದುರಂತ : ಮೃತರ ಸಂಖ್ಯೆ 179ಕ್ಕೆ ಏರಿಕೆ, ಇಬ್ಬರ ರಕ್ಷಣೆ